100 ವರ್ಷ ನಂತರ ಈ ರಾಶಿಗಳಿಗೆ ಬಂಪರ್ ಲಾಟರಿ.. ಮಾಲವ್ಯ - ಭದ್ರ ರಾಜಯೋಗದಿಂದ ಉಕ್ಕಿಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು !

Sun, 25 Aug 2024-6:40 am,

ಶುಕ್ರ ತುಲಾ ರಾಶಿಗೆ ಸೆಪ್ಟೆಂಬರ್ 18 ರಂದು ಸಂಚಾರಿಸಲಿದೆ. ಆಗ ಮಾಲವ್ಯ ರಾಜಯೋಗ ನಿರ್ಮಾಣವಾಗಲಿದೆ. ನಂತರ ಬುಧ ಗ್ರಹವು ಕನ್ಯಾ ರಾಶಿಗೆ ಸಂಚರಿಸುವುದು. ಇದರಿಂದಾಗಿ ಭದ್ರಾ ರಾಜಯೋಗದ ನಿರ್ಮಾಣವಾಗಲಿದೆ. 

ಈ ರಾಜಯೋಗಗಳು ನೂರು ವರ್ಷಗಳ ನಂತರ ರೂಪಗೊಳ್ಳುತ್ತಿದ್ದು, ಕೆಲವು ರಾಶಿಯವರಿಗೆ  ಅದೃಷ್ಟ ಖುಲಾಯಿಸಲಿದೆ. ಮಾಲವ್ಯ ಮತ್ತು ಭದ್ರ ರಾಜಯೋಗಗಳ ನಿರ್ಮಾಣವು ಈ ರಾಶಿಗಳ ಆರ್ಥಿಕ ಸ್ಥಿತಿ ಸುಧಾರಿಸಲಿವೆ.

ಕನ್ಯಾ ರಾಶಿ ಜನರಿಗೆ ಮಾಲವ್ಯ ಮತ್ತು ಭದ್ರ ರಾಜಯೋಗ ಅದೃಷ್ಟ ತರಲಿವೆ. ಅತ್ಯಂತ ಹೆಚ್ಚಿನ ಆರ್ಥಿಕ ಲಾಭವಾಗುವ ಸಂಭವವಿದೆ. ಪ್ರತಿ ಕಾರ್ಯದಲ್ಲೂ ಯಶಸ್ಸು ಗಳಿಸುವಿರಿ. ಹೊಸ ವ್ಯಾಪಾರವನ್ನು ಶುರು ಮಾಡಬಹುದಾಗಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಬಹುದು.

ವೃಷಭ ರಾಶಿಯವರಿಗೆ ಈ ಯೋಗಗಳು ಬಹಳ ಲಾಭದಾಯಕವಾಗಿರಲಿದೆ. ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದುವರು. ಹಠಾತ್ ಧನ ಲಾಭವನ್ನು ಪಡೆಯುವಿರಿ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ದೊರಕುವುದು. 

ತುಲಾ ರಾಶಿಗೆ ಸೇರಿದ ಜನರ ಭಾಗ್ಯದ ಬಾಗಿಲು ತೆರೆಯಲಿದೆ. ಆತ್ಮವಿಶ್ವಾಸದಲ್ಲಿ ಸಾಕಷ್ಟು ವೃದ್ದಿಯನ್ನು ಕಾಣುವಿರಿ. ವ್ಯಕ್ತಿತ್ವದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಯಶಸ್ಸು ಸಾಧಿಸಲು ಉತ್ತಮ ಅವಕಾಶ ಲಭಿಸಲಿದೆ. ಹೊಸ ವ್ಯಾಪಾರವನ್ನು ಶುರು ಮಾಡಬಹುದಾಗಿದೆ. 

ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link