Akshaya Tritiya: 125 ವರ್ಷಗಳ ನಂತರ ಅಕ್ಷಯ ತೃತೀಯದಂದು ಪಂಚಗ್ರಹಿ ಯೋಗ ನಿರ್ಮಾಣ, ಈ ರಾಶಿಯವರಿಗೆ ಬಂಪರ್

Mon, 17 Apr 2023-3:56 pm,

ಈ ವರ್ಷ ಅಕ್ಷಯ ತೃತೀಯದಂದು 125 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ, ಗುರು, ಬುಧ, ರಾಹು ಮತ್ತು ಅರುಣ ಪಂಚಗ್ರಹಿ ಯೋಗ ನಿರ್ಮಾಣವಾಗುತ್ತಿದೆ. ಇದನ್ನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಪರಿಗಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಈ ಬಾರಿ ಅಕ್ಷಯ ತೃತೀಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಂಚಗ್ರಹಿ ಯೋಗವು ಮೇಷ ರಾಶಿಯವರಿಗೆ ಭಾರೀ ಹಣಕಾಸಿನ ಲಾಭವನ್ನು ತರಲಿದೆ. ಮಾತ್ರವಲ್ಲ, ಆರ್ಥಿಕ ಸ್ಥಿತಿ ಬಲಗೊಳ್ಳುವುದರಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆ ಕೂಡ ವೃದ್ಧಿಯಾಗಲಿದೆ. 

ಈ ಬಾರಿಯ ಅಕ್ಷಯ ತೃತೀಯದಲ್ಲಿ 125 ವರ್ಷಗಳ ನಂತರ ಮೇಷ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ಪಂಚಗ್ರಹಿ ಯೋಗವು ವೃಷಭ ರಾಶಿಯವರ ಜೀವನದಲ್ಲಿ ರಾಜಯೋಗವನ್ನು ತರಲಿದೆ. ಮಾತ್ರವಲ್ಲ, ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ಸುಖ ಸೌಖರ್ಯಗಳ ಲಾಭವನ್ನು ಪಡೆಯುವಿರಿ. 

ಈ ಬಾರಿಯ ಅಕ್ಷಯ ತೃತೀಯದಲ್ಲಿ ನಿರ್ಮಾಣವಾಗುತ್ತಿರುವ ಶುಭ ಯೋಗವು ಕರ್ಕಾಟಕ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಬಂಪರ್ ಲಾಭವನ್ನು ತರಲಿದೆ. ಹಣಕಾಸಿನ ಹರಿವಿನಿಂದಾಗಿ ಉತ್ತಮ ಆರ್ಥಿಕ ಸ್ಥಿತಿ ನಿರ್ಮಾಣವಾಗಲಿದ್ದು ಒತ್ತಡಗಳಿಂದ ಮುಕ್ತಿ ದೊರೆಯಲಿದೆ. 

ಈ ವರ್ಷ ಅಕ್ಷಯ ತೃತೀಯದಲ್ಲಿ ನೀರ್ಮಾನವಾಗಲಿರುವ ಶುಭ ಪಂಚಗ್ರಹಿ ಯೋಗವು ಸಿಂಹ ರಾಶಿಯವರಿಗೆ ತುಂಬಾ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಸರ್ವತೋಮುಖ ಅಭಿವೃದ್ಧಿಯನ್ನು ಹೊಂದುವಿರಿ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link