Buddha Purnima 2023: 130 ವರ್ಷಗಳ ಬಳಿಕ ರೂಪುಗೊಳ್ಳಲಿದೆ ಈ ಮಹಾಯೋಗ, ರಾತ್ರೋರಾತ್ರಿ ನಿಮ್ಮ ಮನೆ ಕದ ತಟ್ಟಲಿದ್ದಾಳೆ ತಾಯಿ ಲಕ್ಷ್ಮಿ!

Tue, 11 Apr 2023-7:53 pm,

1. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಬುದ್ಧ ಪೂರ್ಣಿಮೆಯ ದಿನ ಬಹಳ ವಿಶೇಷವಾಗಿದೆ. ಈ ದಿನ ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಇದೆ ವೇಳೆ, ಈ ದಿನದಂದು ವರ್ಷದ ಮೊದಲ ಚಂದ್ರಗ್ರಹಣವೂ ಸಹ ಸಂಭವಿಸಲಿದೆ. ಇದರೊಂದಿಗೆ ಗ್ರಹಗಳು ಮತ್ತು ನಕ್ಷತ್ರಗಳ ಅದ್ಭುತ  ಕಾಕತಾಳೀಯವೂ ರೂಪುತೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 130 ವರ್ಷಗಳ ನಂತರ ಬುದ್ಧ ಪೂರ್ಣಿಮೆಯಂದು ಇಂತಹ ಕಾಕತಾಳೀಯ ನಿರ್ಮಾಣಗೊಳ್ಳುತ್ತಲಿದೆ. ಈ ಸಂಯೋಜನೆಯ ಬಗ್ಗೆ ಮತ್ತು ಈ ಅವಧಿಯಲ್ಲಿ ಯಾವ ರಾಶಿಗಳಿಗೆ ಇದರ ಸಂಪೂರ್ಣ ಪ್ರಯೋಜನ ಪಡೆಯಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

2. ಈ ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೈಶಾಖ ಪೂರ್ಣಿಮಾ ಅಥವಾ ಬುದ್ಧ ಪೂರ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸಲಿದೆ. ಈ ದಿನ ರಾತ್ರಿ 8.45 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಗ್ರಹಣ ಇರಲಿದೆ. ಈ ದಿನ ಸೂರ್ಯೋದಯದಿಂದ ಬೆಳಗ್ಗೆ 9.17ರವರೆಗೆ ಸಿದ್ಧಿ ಯೋಗವಿರುತ್ತದೆ. ಇದರೊಂದಿಗೆ ಈ ದಿನ ಸ್ವಾತಿ ನಕ್ಷತ್ರವೂ ಇರುತ್ತದೆ. ಶಾಸ್ತ್ರಗಳ ಪ್ರಕಾರ ಬುದ್ಧ ಪೂರ್ಣಿಮೆಯ ದಿನದಂದು 130 ವರ್ಷಗಳ ನಂತರ ಇಂತಹ ಯೋಗವು ರೂಪುಗೊಳ್ಳಲಿದೆ. ಸ್ವಾತಿ ನಕ್ಷತ್ರವು ಬೆಳಗ್ಗೆಯಿಂದ ರಾತ್ರಿ 9:40 ರವರೆಗೆ ಇರಲಿದೆ.

3. ಮೇಷ ರಾಶಿ - ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು, ಸಂಕ್ರಮಿಸುವ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ ಮತ್ತು ಬುಧನೊಂದಿಗೆ ಆತನ ಮೈತ್ರಿ ನೆರವೇರಲಿದ್ದು, ಇದರಿಂದ ಮೇಷ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ, ಇದು ಈ ರಾಶಿಯ ಸ್ಥಳೀಯರಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿದೆ. ಈ ಅವಧಿಯಲ್ಲಿ ವ್ಯಕ್ತಿಯು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾನೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.  

4. ಕರ್ಕ ರಾಶಿ- ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗವು ಕರ್ಕ ರಾಶಿಯವರಿಗೆ ಭಾಗ್ಯವನ್ನೇ ಪ್ರಜ್ವಲಿಸಲಿದೆ. . ಈ ಸಮಯದಲ್ಲಿ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾನೆ. ಬಯಸಿದ ಸ್ಥಳದಲ್ಲಿ ವರ್ಗಾವಣೆ ಲಭ್ಯವಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುತ್ತಾನೆ. ಅಷ್ಟೇ ಅಲ್ಲ ಈ ರಾಶಿಯವರಿಗೆ ಅದೃಷ್ಟದ ಭಾರಿ ಬೆಂಬಲ ಕೂಡಿಬರಲಿದೆ.

5. ಸಿಂಹ ರಾಶಿ- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧಾದಿತ್ಯ ಯೋಗವು ಈ ಸಿಂಹ ರಾಶಿಯ ಜಾತಕದವರ ಪಾಲಿಗೆ ತುಂಬಾ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಈ ಅವಧಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಪೂರ್ಣಗೊಳ್ಳಲಿದೆ. ಸೂರ್ಯನ ಸಂಚಾರವು ಈ ರಾಶಿಯ ಸ್ಥಳೀಯರ ಜೀವನದಲ್ಲಿ ಅನೇಕ ಸಂತೋಷವನ್ನು ತರಲಿದೆ. ಬಡ್ತಿಯ ಅವಕಾಶಗಳು ದೊರೆಯಲಿವೆ. ಸಂಬಳದಲ್ಲಿ ಹೆಚ್ಚಳ ಹಾಗೂ ಐಷಾರಾಮಿ ಕೆಲಸ ಕಾರ್ಯಗಳಿಗೆ ಹಣ ವ್ಯಯವಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )

ZEENEWS TRENDING STORIES

By continuing to use the site, you agree to the use of cookies. You can find out more by Tapping this link