Shani Margi: 140 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ಚಿಹ್ನೆಯಲ್ಲಿ ಶನಿ ಮಾರ್ಗಿ, ಈ ರಾಶಿಯವರಿಗೆ ಬಂಪರ್

Fri, 03 Nov 2023-8:32 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹದ ಬದಲಾವಣೆಗೆ ಬಹಳ ಮಹತ್ವವಿದೆ. ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಇನ್ನೂ 24 ಗಂಟೆಗಳಲ್ಲಿ ಎಂದರೆ ನವೆಂಬರ್ 4, 2023ರಂದು ಶನಿ ತನ್ನ ದಿಕ್ಕನ್ನು ಬದಲಾಯಿಸಲಿದ್ದು, ವಕ್ರೀ ಚಲನೆಯಿಂದ ನೇರ ಚಲನೆಗೆ ಮರಳಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಮಾರು 140 ವರ್ಷಗಳ ನಂತರ ಶನಿದೇವನು ತನ್ನ ಮೂಲ ತ್ರಿಕೋನ ಚಿಹ್ನೆಯಲ್ಲಿ ಮಾರ್ಗಿಯಾಗಲಿದ್ದಾನೆ. 

ಶನಿಯ ನೇರ ಸಂಚಾರದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಶನಿಯು ಕೆಲವು ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 

ತನ್ನದೇ ಆದ ಕುಂಭ ರಾಶಿಯಲ್ಲಿ ಶನಿಯ ನೇರ ಸಂಚಾರವು ಮೂರು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದು, ಈ ಸಂದರ್ಭದಲ್ಲಿ ಅವರು ಅಪಾರ ಧನ ಸಂಪತ್ತಿನ ಜೊತೆಗೆ ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಸಹ ಅನುಭವಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ... 

ಮಾರ್ಗಿ ಶನಿಯು ತುಲಾ ರಾಶಿಯವರಿಗೆ ಬಂಪರ್ ಹಣಕಾಸಿನ ಲಾಭವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಆದಾಯದ ಮೂಲಗಳು ವೃದ್ಧಿಯಾಗಲಿದ್ದು ವೃತ್ತಿ ಬದುಕಿನಲ್ಲಿಯೂ ಒಳ್ಳೆಯ ಅವಕಾಶಗಳು ಬರಲಿವೆ. ನಿಮ್ಮ ಶ್ರಮ ಬುದ್ದಿವಂತಿಕೆಯಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುವಿರಿ. 

ಶನಿಯ ನೇರ ಸಂಚಾರವು ಧನು ರಾಶಿಯವರಿಗೆ ಕೌಟುಂಬಿಕ ಕಲಹಗಳಿಂದ ಪರಿಹಾರ ನೀಡಲಿದ್ದು ಮಾನಸಿಕ ನೆಮ್ಮದಿಯನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಉದ್ಯೋಗ ರಂಗದಲ್ಲಿಯೂ ಸುವರ್ಣಾವಕಾಶಗಳನ್ನು ಕಾಣಬಹುದು. ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. 

ಮಾರ್ಗಿ ಶನಿಯು ಮಕರ ರಾಶಿಯವರಿಗೆ ಅವರು ಕೈ ಹಾಕುವ ಪ್ರತಿ ಕೆಲಸದಲ್ಲಿಯೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾನೆ. ಹೊಸ ಉದ್ಯೋಗ ಹುಡುಕುವವರಿಗೆ ಕೆಲಸ ಸಿಗಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಇಷ್ಟು ದಿನಗಳ ಆರ್ಥಿಕ ಸಮಸ್ಯೆಗಳು ಬಗೆಹರೆದು ಪ್ರಗತಿಯನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ.

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link