20 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ವಿಜಯ್- ಜ್ಯೋತಿಕಾ..!
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದ ಕೆಲಸ ಮುಗಿಸಿ ದಳಪತಿ ವಿಜಯ್ ಯುರೋಪ್‌ನಲ್ಲಿ ರಜೆಯಲ್ಲಿದ್ದಾರೆ ಎನ್ನಲಾಗಿದೆ.
ಅನಿರುದ್ಧ್ ಅವರ ಸಂಗೀತದಲ್ಲಿ ತ್ರಿಶಾ, ಸಂಜಯ್ ದತ್ ಮತ್ತು ಇತರರು ನಟಿಸಿರುವ ಲಿಯೋ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯ ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಮುಂದಿನ ಚಿತ್ರ 'ತಲಪತಿ 68' ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
ಎಜಿಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಲಿದ್ದಾರೆ. ಕೆಲವು ತಿಂಗಳ ಹಿಂದೆ ಜ್ಯೋತಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ವಿಪಿ ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿತ್ತು.
ಇದೀಗ ಚಿತ್ರತಂಡ ನಟಿ ಜ್ಯೋತಿಕಾ ಅವರನ್ನು ಸಂಪರ್ಕಿಸಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಡೇಟ್ಸ್ ಕೇಳಿದೆ ಎನ್ನುತ್ತಿವೆ ಚಿತ್ರತಂಡ.
ಸೂಪರ್ ಹಿಟ್ ಚಿತ್ರಗಳಾದ 'ಖುಷಿ' ಮತ್ತು 'ತಿರುಮಲೈ' ಚಿತ್ರದಲ್ಲಿ ನಟಿಸಿದ್ದ ವಿಜಯ್ ಮತ್ತು ಜ್ಯೋತಿಕಾ 20 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಂದಾಗಲಿದ್ದಾರೆ.
'ಮೆರ್ಸಲ್' ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಲು ಅಟ್ಲಿ ಜ್ಯೋತಿಕಾ ಅವರನ್ನು ಸಂಪರ್ಕಿಸಿದ್ದರಂತೆ, ಆದರೆ ನಂತರ ನಿತ್ಯಾ ಮೆನನ್ ಅವರು ನಟಿಸಿದರು. ಈ ಬಾರಿ ಹೇಗಾಗುತ್ತೋ ಕಾದು ನೋಡೋಣ.