ಮಕ್ಕಳಿಗೆ 20 ವರ್ಷವಾಗುತ್ತಿದ್ದಂತೆ ಈ ನಾಲ್ಕು ವಿಷಯಗಳ ಬಗ್ಗೆ ತಪ್ಪದೇ ತಿಳಿ ಹೇಳಿ. !

Wed, 21 Sep 2022-1:04 pm,

ವೈಯಕ್ತಿಕ ನೈರ್ಮಲ್ಯದ ಬಗ್ಗೆ ವಯಸ್ಕ ಮಕ್ಕಳಿಗೆ ಕಲಿಸಿ. ಶೇವಿಂಗ್‌ನಿಂದ ಸ್ನಾನದವರೆಗೆ ಮತ್ತು ಮುಟ್ಟಿನ ಸಮಯದಲ್ಲಿ ಸ್ವಯಂ-ಆರೈಕೆ ಮತ್ತು ಶುಚಿತ್ವದ ಮಹತ್ವವನ್ನು ಹುಡುಗಿಯರಿಗೆ ವಿವರಿಸಿ ಹೇಳಿ. ಇದು ಮಕ್ಕಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ, ಸೋಂಕುಗಳನ್ನು ತಪ್ಪಿಸುವಲ್ಲಿ ಇದರ ಪಾತ್ರ ದೊಡ್ಡದಾಗಿರುತ್ತದೆ.   

ಸಾಮಾನ್ಯವಾಗಿ ಕಾಲೇಜಿಗೆ ಹೋಗುವ ಮಕ್ಕಳಲ್ಲಿ ವೃತ್ತಿಜೀವನದ ಬಗ್ಗೆ ಪೋಷಕರು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಕಾಲೇಜು ಮುಗಿದ ನಂತರ ಮಕ್ಕಳು ಏನು ಮಾಡಬೇಕೆಂದಿದ್ದಾರೆ, ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಯಾವ ಕ್ಷೇತ್ರವನ್ನು ಆರಿಸುತ್ತಾರೆ  ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳು ಸಾಮಾನ್ಯವಾಗಿ ಇಂತಹ ಪ್ರಶ್ನೆಗಳಿಂದ ಸಿಟ್ಟಾಗಿ, ಪೋಷಕರೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ, ಮಕ್ಕಳ ಮನಸ್ಸಿನಲ್ಲಿ ನಕಾರಾತ್ಮಕತೆ ಭಾವ ಮೂಡಬಹುದು.  ಈ ಕಾರಣದಿಂದ ನಿಮ್ಮಿಂದ ದೂರ ಓಡಲು ಪ್ರಾರಂಭಿಸುತ್ತಾರೆ. ಹೆತ್ತವರು ಹಳೆಯ ಕಾಲದ ಚಿಂತನೆಯನ್ನು ತಮ್ಮ ಮೇಲೆ ಹೇರಲು ಬಯಸುತ್ತಾರೆ ಮತ್ತು ದಿನವಿಡೀ ಲೆಕ್ಚರ್ ನೀಡುತ್ತಾರೆ ಎಂಬ ಭಾವನೆ ಮೂಡುತ್ತದೆ.  ಹೀಗಾಗಿ, ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳ ಆಸಕ್ತಿಗಳು ಮತ್ತು ಅವರ ಕನಸುಗಳ ಬಗ್ಗೆ ಅವರೇ ನಿಮ್ಮಲ್ಲಿ ತಮ್ಮ ಮನಸ್ಸಿನ ಭಾವನೆ ಹೇಳಿಕೊಳ್ಳುತ್ತಾರೆ. ಅದನ್ನು ಗೌರವಿಸಿ. ಆಗ, ಮಕ್ಕಳಿಗೆ ನಿಮ್ಮ ಮೇಲೆ ವಿಶ್ವಾಸ ಮೂಡುತ್ತದೆ. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ.  

ಹದಿಹರೆಯದರಲ್ಲಿ ತಂದೆ-ತಾಯಿ  ಏನೇ ಕೇಳಿದರೂ ಮಕ್ಕಳಿಗೆ ಕೋಪ ಬರುತ್ತದೆ. ಪೋಷಕರು ಪದೇ ಪದೇ ಹೇಳಿದ ವಿಚಾರವನ್ನೇ ಹೇಳುವುದರಿಂದ ಬೇಸರಗೊಳ್ಳುತ್ತಾರೆ.  ಈ ಸಂದರ್ಭದಲ್ಲಿ ನಿಮ್ಮ ಮಕ್ಕಲೈಗೆಸಹಾಯ ಮಾಡುವ ಉದ್ದೇಶದಿಂದ ನೀವು ಈ ರೀತಿ ಮಾತನಾಡುತ್ತಿರುವುದು ಎನ್ನುವುದನ್ನು ಮಕ್ಕಳಿಗೆ ಅರ್ಥ ಮಾಡಿಸಿ ಹೇಳಿ. ನಿಮ್ಮ ಮಾತಿಗೆ  ಮಕ್ಕಳು ಕೋಪಗೊಂಡಾಗ ಅಥವಾ ನಿಮ್ಮ ಮಾತನ್ನು ಕೇಳಲು ನಿರಾಕರಿಸಿದಾಗ,  ನೀವು ಶಾಂತ ಸ್ವರದಲ್ಲಿ  ಅವರ ಜೊತೆ  ಮಾತನಾಡಿ.    

ಮಕ್ಕಳು ಸಣ್ಣವರಿರುವಾಗ ಪೋಷಕರಲ್ಲಿ ಒಬ್ಬರೊಂದಿಗೆ ಮಾತ್ರ ಮುಕ್ತವಾಗಿ ಮಾತನಾಡುತ್ತದೆ. ತಮ್ಮ ಬೇಡಿಕೆಗಳನ್ನು ಪೂರೈಸಲು ಒಬ್ಬರ ಮನವೊಲಿಸಿದರೆ ಸಾಕು ಎನ್ನುವ ಭಾವ ಮಗುವಿನಲ್ಲಿರುತ್ತದೆ. ಆದರೆ, 20 ವರ್ಷ ದಾಟಿದ ನಂತರ ಮಕ್ಕಳಿಗೆ ಏನು ಮಾಡಬೇಕೆಂದರೂ ತಾಯಿ-ತಂದೆ ಇಬ್ಬರ ಅಭಿಪ್ರಾಯ ಕೂಡಾ ಅಗತ್ಯ ಎನ್ನುವುದನ್ನು ಮನದಟ್ಟು ಮಾಡಿಸಿ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link