30ನೇ ವಯಸ್ಸಿನ ಬಳಿಕ ಅತಿ ಧನವಂತರಾಗುತ್ತಾರೆ ಈ ರಾಶಿಗಳ ಜನರು, ಶನಿಯ ವಿಶೇಷ ಕೃಪೆ ಇವರ ಮೇಲಿರುತ್ತದೆ!

Fri, 22 Sep 2023-3:47 pm,

Shani Zodiac Signs: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ರಾಶಿಗಳ ಜನರು ತಮ್ಮ ಜೀವನದ 30ನೇ ವಯಸ್ಸಿನ ನಂತರ ಅತಿ ಧನವಂತರಾಗುತ್ತಾರೆ ಎನ್ನಲಾಗಿದೆ. ವಿಶೇಷವಾಗಿ ಕುಂಭ, ಕನ್ಯಾ ಹಾಗೂ ಮಕರ ರಾಶಿಗಳ ಜಾತಕದವರ ಭಾಗ್ಯ 30ನೇ ವಯಸ್ಸಿನ ಬಳಿಕ ಸೂರ್ಯನಂತೆ ಹೊಳೆಯುತ್ತದೆ ಮತ್ತು ಶನಿಯ ವಿಶೇಷ ಕೃಪೆ ಇವರ ಮೇಲಿರುತ್ತದೆ.   

ಕನ್ಯಾರಾಶಿ: ಈ ಜನರು ತುಂಬಾ ಬಿಸ್ನೆಸ್ ಮೈಂಡೆಡ್ ಆಗಿರುತ್ತಾರೆ, 30ನೇ ವಯಸ್ಸಿಯನ್ ಬಳಿಕ ಈ ಜನರ ಭಾಗ್ಯ ಭಾರಿ ಹೊಳೆಯುತ್ತದೆ. ಈ ಜನರು ತಮ್ಮ ಬಿಸ್ನೆಸ್ ಗೆ ಸಂಬಂಧಿಸಿದಂತೆ ತುಂಬಾ ಪರಿಶ್ರಮಿಗಳು ಹಾಗೂ ನಿಷ್ಟಾವಂತರಾಗಿರುತ್ತಾರೆ. ಹೀಗಾಗಿ 30ನೇ ವಯಸ್ಸಿನ ನಂತರ ಇವರು ಅತಿ ಧನವಂತರಾಗುತ್ತಾರೆ. ಇವರು ಓರ್ವ ಅತ್ಯುತ್ತಮ ಲೀಡರ್ ಎಂದು ಸಾಬೀತಾಗುತ್ತಾರೆ. ಅತಿ ಬುದ್ಧಿವಂತರಾದ ಇವರು ಸಾಕಷ್ಟು ದೂರದೃಷ್ಟಿವುಳ್ಳವರಾಗಿರುತ್ತಾರೆ. 30ನೇ ವಯಸ್ಸಿನ ಬಳಿಕ ಈ ಜನರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ ಹಾಗೂ ಈ ಜನರ ಮೇಲೆ ಶನಿ ಹಾಗೂ ಬುಧನ ವಿಶೇಷ ಕೃಪೆ ಇರುತ್ತದೆ.   

ಮಕರ ರಾಶಿ: ರಾಶಿಗಳ ಜನ್ಮ ಜಾತಕದಲ್ಲಿರುವ ಯೋಗಗಳು ಈ ಜನರ ಭಾಗ್ಯವನ್ನು 30ನೇ ವಯಸ್ಸಿನ ಬಳಿಕ ಭಾರಿ ಹೊಳೆಯುವಂತೆ ಮಾಡುತ್ತವೆ. ಏಕೆಂದರೆ ಮಕರ ರಾಶಿಗೆ ಶನಿ ಅಧಿಪತಿಯಾಗಿದ್ದು, ಆತ ತುಂಬಾ ನಿಧಾನವಾಗಿ ಇವರಿಗೆ ತನ್ನ ಫಲಗಳನ್ನು ನೀಡುತ್ತಾನೆ. ಆದರೆ, ಈ ಜನರಿಗೆ 30ನೇ ವಯಸ್ಸಿನ ಬಳಿಕ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿ ಇವರದ್ದಾಗಿರುತ್ತದೆ ಮತ್ತು ಇದೆ ಕಾರಣದಿಂದ ಇವರಿಗೆ ಈ ಯಶಸ್ಸು ಲಭಿಸುತ್ತದೆ. ಈ ಜನರು ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ದುಡಿಯುವವರಾಗಿರುತ್ತಾರೆ.   

ಕುಂಭ ರಾಶಿ: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಜನರ ರಾಶಿ ಕುಂಭ ರಷಿಯಾಗಿರುತ್ತದೆಯೋ ಅವರಿಗೆ 30ನೇ ವಯಸ್ಸಿನ ಗಳಿಕ ವಿಶೇಷ ಯಶಸ್ಸು ಸಿಗುತ್ತದೆ. 30ನೇ ವಯಸ್ಸಿನ ಬಳಿಕ ಇವರ ವೃತ್ತಿ ಹಾಗೂ ವ್ಯಾಪಾರ ಜೀವನದಲ್ಲಿ ಸಾಕಷ್ಟು ಉನ್ನತಿ ಲಭಿಸುತ್ತದೆ. ಹಣ ಉಳಿತಾಯ ಮಾಡುವಲ್ಲಿ ಈ ಜನರು ಸಾಕಷ್ಟು ನಿಪುಣರಾಗಿರುತ್ತಾರೆ. ಇವರಲ್ಲಿರುವ ವಿಶೇಷ ಗುಣ ಇವರನ್ನು ಇತರರಿಂದ ಭಿನ್ನವಾಗಿಸುತ್ತದೆ. ಸಾಮಾನ್ಯವಾಗಿ ಈ ಜನರು ಏಕಕಾಲಕ್ಕೆ ಹಲವು ಕೆಲಸ ನಿಭಾಯಿಸುವ ವಿಶೇಷ ಕಲೆ ಹೊಂದಿರುತ್ತಾರೆ. ಇವರು ತಮ್ಮ ಸಂಗಾತಿಗೆ ತುಂಬಾ ಪ್ರೀತಿಯನ್ನು ನೀಡುತ್ತಾರೆ. ಒಂದು ಬಾರಿ ಇವರು ಯಾವುದಾದರೊಂದು ಗುರಿಯನ್ನು ನಿಗದಿಪಡಿಸಿದರೆ, ಗುರಿ ತಲುಪುವವರೆಗೆ ನಿಲ್ಲುವ ಮಾತೆ ಎತ್ತುವುದಿಲ್ಲ. ಈ ರಾಶಿಗೂ ಕೂಡ ಶನಿ ಅಧಿಪತಿಯಾಗಿದ್ದಾನೆ ಮತ್ತು ಆತನೇ ಇವರಿಗೆ ಈ ಗುಣಗಳನ್ನು ದಯಪಾಲಿಸುತ್ತಾನೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link