30 ವರ್ಷಗಳ ಬಳಿಕ ನವರಾತ್ರಿ ಸಂದರ್ಭದಲ್ಲಿ ಹಲವು ರಾಜಯೋಗಗಳ ನಿರ್ಮಾಣ, ದೇವಿ ದುರ್ಗೆಯ ಕೃಪೆಯಿಂದ ಈ ಜನರ ಮೇಲೆ ಅಪಾರ ಧನವೃಷ್ಟಿ!

Fri, 06 Oct 2023-12:28 pm,

ಪ್ರಸ್ತುತ 30 ವರ್ಷಗಳ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದರ ಜೊತೆಗೆ ಬುಧ ಹಾಗೂ ಸೂರ್ಯ ಕೂಡ ಕನ್ಯಾ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವನ್ನು ನಿರ್ಮಿಸಿದ್ದಾರೆ. ಇನ್ನೊಂದೆಡೆ ಬುಧ ತನ್ನ ಸ್ವರಾಶಿಯಲ್ಲಿ ಮಹಾಭದ್ರ ರಾಜಯೋಗ ಕೂಡ ರೂಪಿಸಿದ್ದಾನೆ. ಶನಿ ತನ್ನ ಸ್ವರಾಶಿಯಲ್ಲಿ ಶಶ ಮಹಾಪೃಷ ರಾಜಯೋಗ ನಿರ್ಮಿಸಿದ್ದಾನೆ. ಹೀಗಿರುವಾಗ ಶಾರದೀಯ ನವರಾತ್ರಿ ಹಬ್ಬ ಕೆಲ ಜನರಿಗೆ ತುಂಬಾ ವಿಶೇಷವಾಗಿರಲಿದೆ. ಈ ಜನರ ಜೀವನದಲ್ಲಿ ಧನ-ಧಾನ್ಯ ವೃದ್ಧಿಯಾಗಲಿದ್ದು, ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯಲಿದೆ. ಬನ್ನಿ ನವರಾತ್ರಿ ಹಬ್ಬ ಯಾರ ಪಾಲಿಗೆ ಶುಭವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ,   

ವೃಷಭ ರಾಶಿ: ನವರಾತ್ರಿಯ ಸಂದರ್ಭದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಲವು ರಾಜಯೋಗಗಳು ವೃಷಭ ರಾಶಿಯ ಜಾತಕದವರಿಗೆ ಅತ್ಯಂತ ಶುಭವಾಗಿರಲಿವೆ. ಈ ಯೋಗಗಳ ಕಾರಣ ನಿಮಗೆ ದೇವಿ ದುರ್ಗೆಯ ಅಪಾರ ಕೃಪೆ ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪುನಃ ಆರಂಭಗೊಳ್ಳಲಿವೆ. ಕುಟುಂಬದ ಜೊತೆಗೆ ಒಳ್ಳೆಯ ಕಾಲ ಕಳೆಯುವಿರಿ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಯಾತ್ರೆ ಕೈಗೊಳ್ಳುವಿರಿ. ಕಾರ್ಯಸ್ಥಳದ ಕುರಿತು ಹೇಳುವುದಾದರೆ. ನಿಮ್ಮ ಕೆಲಸ ಮತ್ತು ಪರಿಶ್ರಮವನ್ನು ಕಂಡು ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ಮಾಡುವವರಿಗೂ ಕೂಡ ದೊಡ್ಡ ಲಾಭ ಸಿಗಲಿದೆ. ಕುಟುಂಬದಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಲಿದೆ. ತಾಯಿ ದುರ್ಗೆಯ ಕೃಪೆಯಿಂದ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ.   

ಮಕರ ರಾಶಿ: ಮಕರ ರಾಶಿಯ ಜಾತಕದವರಿಗೂ ಕೂಡ ಈ ಶುಭ ರಾಜಯೋಗಗಳು ಸಾಕಷ್ಟು ಲಾಭವನ್ನು ತಂದುಕೊಡಲಿವೆ. ದೇವಿ ದುರ್ಗೆಯ ಅಪಾರ ಕೃಪೆಯಿಂದ ವಾಹನ-ಆಸ್ತಿಪಾಸ್ತಿ ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು. ಪ್ರಮೋಷನ್ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಹಲವು ಪಟ್ಟು ಅಧಿಕ ಲಾಭ ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ನಿಂತುಹೋದ ಹಣ ನಿಮ್ಮತ್ತ ಪುನಃ ಬರಲಿದೆ. ಆರ್ಥಿಕ ಸ್ಥಿತಿ ತುಂಬಾ ಬಲಿಷ್ಠವಾಗಿ ಧನ-ಧಾನ್ಯದಲ್ಲಿ ಅಪಾರ ವೃದ್ಧಿಯಾಗಲಿದೆ.   

ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಶಾರದೀಯ ನವರಾತ್ರಿ ಉತ್ಸವ ಅತ್ಯದ್ಭುತವಾಗಿರಲಿದೆ, ಮಹಾಭದ್ರ, ಬುಧಾದಿತ್ಯ ಹಾಗೂ ಶಶ ಮಹಾಪುರುಷ ರಾಜ್ಯೋಗಗಳ ನಿರ್ಮಾಣದಿಂದ ದೇವಿ ಜಗದಂಬೆಯ ವಿಶೇಷ ಕೃಪೆ ನಿಮಗೆ ಪ್ರಾಪ್ತಿಯಾಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದ ಜೊತೆಗೆ ಒಳ್ಳೆಯ ಕಾಲ ಕಳೆಯುವಿರಿ. ದೀರ್ಘಾವಧಿಯಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈಸೇರಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿಯೂ ಕೂಡ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿಯೂ ಕೂಡ ಸಂತಸದ ವಾತಾವರಣ ಇರಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link