ಏಳು ಶತಮಾನಗಳ ಬಳಿಕ 5 ರಾಜಯೋಗಗಳ ನಿರ್ಮಾಣ, 4 ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ಹೆಚ್ಚಳ!
ಮಿಥುನ ರಾಶಿ: ಐದು ರಾಜಯೋಗಗಳ ರಚನೆ ಮಿಥುನ ರಾಶಿಯವರಿಗೆ ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಶುಕ್ರ ಗ್ರಹವು ಕರ್ಮ ಭಾವದ ಮೇಲೆ ಉತ್ತುಂಗದಲ್ಲಿದೆ ಮತ್ತು ಗುರು ಸಹ ಅದರೊಂದಿಗೆ ಇರುವುದರಿಂದ ಹಂಸ ರಾಜಯೋಗವು ರೂಪುಗೊಳ್ಳುತ್ತಿದೆ. ಆದ್ದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಇದರೊಂದಿಗೆ ಆಕಸ್ಮಿಕವಾಗಿ ಧನಲಾಭವಾಗುವ ಸಾಧ್ಯತೆ ಕೂಡ ಇದೆ. ಇದೇ ವೇಳೆ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಅಂದರೆ ಪ್ರಮೋಶನ್ ಅವಕಾಶಗಳಿವೆ ಎಂದರ್ಥ.
ಕರ್ಕ ರಾಶಿ: ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಮತ್ತು ಮಾಲವ್ಯ ರಾಜಯೋಗದ ರಚನೆಯು ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ಶುಕ್ರ ಮತ್ತು ಗುರು ನಿಮ್ಮ ರಾಶಿಯ ಅದೃಷ್ಟ ಸ್ಥಾನದಲಿ ಸಂಚರಿಸುತ್ತಿದ್ದಾರೆ. ಹೀಗಾಗಿ, ಈ ಅವಧಿಯಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗಲಿದೆ. ಅಲ್ಲದೆ, ನಿಮ್ಮ ವೃತ್ತಿಜೀವನದ ಈ ಸಮಯದಲ್ಲಿ, ನೀವು ಬಯಸಿದ ಉದ್ಯೋಗಾವಕಾಶ ಪಡೆಯಬಹುದು. ಇದರಿಂದ ವಿದ್ಯಾರ್ಥಿ ವರ್ಗದ ಜನರಿಗೆ ಅಪಾರ ಅನುಕೂಲವಾಗಲಿದೆ. ಈ ಅವಧಿಯಲ್ಲಿ ನೀವು ಶಾರೀರಿಕ ಸುಖ ಸಂತೋಷಗಳ ಸಂಪೂರ್ಣ ಆನಂದವನ್ನು ಪಡೆಯುವ ಸಾಧ್ಯತೆಯಿದೆ. ಇದೇ ವೇಳೆ, ನೀವು ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಬೆಳೆಸಬಹುದಾಗಿದೆ, ಇದು ಮಂಗಳಕರವೆಂದು ಸಾಬೀತಾಗಲಿದೆ.
ಕನ್ಯಾ ರಾಶಿ: 5 ರಾಜಯೋಗಗಳ ನಿರ್ಮಾಣ ನಿಮ್ಮ ಪಾಲಿಗೂ ಕೂಡ ಅತ್ಯಂತ ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಸಪ್ತಮ ಭಾವದಲ್ಲಿ ಮಾಲವ್ಯ ರಾಜಯೋಗವು ರೂಪುಗೊಳ್ಳಲಿದೆ. ಹೀಗಾಗಿ, ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುವಿರಿ. ಇದರಿಂದ ನಿಮ್ಮ ಜೀವನ ಸಂಗಾತಿಯ ಪ್ರಗತಿಯೂ ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ನೀವು ಸಹಿ ಹಾಕುವ ಸಾಧ್ಯತೆ ಇದೆ. ಪಾರ್ಟ್ನರ್ಶಿಪ್ ಕೆಲಸವನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯವಾಗಿದೆ. ಅಲ್ಲದೆ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಇನ್ನೊಂದೆಡೆ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರಲಿದೆ.
ಮೀನ ರಾಶಿ: ಹಂಸ ಮತ್ತು ಮಾಲವ್ಯ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದವೆಂದು ಸಾಬೀತಾಗಲಿದೆ. ಹೀಗಾಗಿ ನಿಮ್ಮ ಧೈರ್ಯ ಮತ್ತು ಶಕ್ತಿಯು ಈ ಅವಧಿಯಲ್ಲಿ ಹೆಚ್ಚಾಗಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗಲಿದೆ. ಇನ್ನೊಂದೆಡೆ, ನಿಮ್ಮ ಕೆಲಸದಲ್ಲಿ ಯಶಸ್ಸು ಇರಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಆದರೆ ಈ ಸಮಯದಲ್ಲಿ ಶನಿಯ ಸಾಡೆಸಾತಿ ನಿಮ್ಮ ಮೇಲೆ ನಡೆಯುತ್ತಿರುವ ಕಾರಣ ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳಿರಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)