ತೊಂಬತ್ನಾಲ್ಕು ವರ್ಷಗಳ ಬಳಿಕ ಡಬಲ್ `ಸಮಸಪ್ತಕ ಯೋಗ` ನಿರ್ಮಾಣ, 6 ತಿಂಗಳು ಈ ಜನರ ಮೇಲೆ ಅಪಾರ ಕನಕವೃಷ್ಟಿ!
Double Samsaptak Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 18 ರಿಂದ ಡಬಲ್ ಸಮಸಪ್ತಕ ರಾಜಯೋಗ ರೂಪುಗೊಳ್ಳುತ್ತಲಿದ್ದು, 3 ರಾಶಿಗಳ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಯಶಸ್ಸನ್ನು ಕರುಣಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ, Spiritual News In Kannada
ವೃಷಭ ರಾಶಿ: ನಿಮ್ಮ ರಾಶಿಯ ರಾಶ್ಯಾಧಿಪ ಶುಕ್ರನಾಗಿದ್ದು, ಆತ ಚತುರ್ಥ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರ ಜೊತೆಗೆ ನಿಮ್ಮ ಜಾತಕದ ಅದೃಷ್ಟ ಹಾಗೂ ವೃತ್ತಿಜೀವನ ಭಾವದ ಅಧಿಪತಿ ಶನಿಯಾಗಿದ್ದು, ಇಬ್ಬರು ಕೂಡ ಸಮಸಪ್ತಕ ರಾಜಯೋಗ ರೂಪಿಸುತ್ತಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಧನಲಾಭ ಸಂಭವಿಸುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಉನ್ನತಿಯ ಯೋಗವಿರಲಿದೆ. ದೀರ್ಘ ಕಾಲದಿಂದ ನಿಮಗೆ ಬರಬೇಕಾದ ಮತ್ತು ಸಿಲುಕಿಕೊಂಡ ಹಣ ನಿಮ್ಮ ಕೈಸೇರುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಕಾರ್ಯಸ್ಥಳದಲ್ಲಿ ನೀವು ವಿಶೇಷ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುವಿರಿ ಮತ್ತು ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ.
ತುಲಾ ರಾಶಿ: ನಿಮ್ಮ ರಾಶಿಯ ಅಧಿಪತಿಯಾಗಿರುವ ಶುಕ್ರ ನಿಮ್ಮ ಜಾತಕದ ಲಾಭ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದರ ಜೊತೆಗೆ ಶನಿ ಆಟನೊಂದಿಗೆ ಮುಖಾಮುಖಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಿದೇಶದಿಂದ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ ಬುದ್ಧಿಯ ಸಹಾಯದಿಂದ ನೀವು ಹಣ ಗಳಿಸುವಲ್ಲಿ ಯಶಸ್ವಿಯಾಗುವಿರಿ. ವಿದೇಶಕ್ಕೆ ಹೋಗಲು ಯತ್ನಿಸುತ್ತಿರುವವರಿಗೆ ಈ ಅವಧಿಯಲ್ಲಿ ಯಶಸ್ಸು ಸಿಗಲಿದೆ. ಇನ್ನೊಂದೆಡೆ ನಿಮ್ಮ ಗೋಚರ ಜಾತಕದಲ್ಲಿ ತ್ರಿಗ್ರಹಿ ಯೋಗ ಕೂಡ ರಚನೆಯಾಗುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರುವುದು ಒಳಿತು. ವಾಹನ ಚಲಾಯಿಸುವಾಗ ಜಾಗ್ರತೆವಹಿಸಿ. ಗಾಯ ಉಂಟಾಗುವ ಸಾಧ್ಯತೆ ಇದೆ.
ಧನು ರಾಶಿ: ನಿಮ್ಮ ರಾಶಿಗೆ ಗುರು ಅಧಿಪತಿಯಾಗಿದ್ದು, ಆತ ತನ್ನ ಮನೆಯ ಮೇಲೆಯೇ ಗಮನ ಕೇಂದ್ರೀಕರಿಸಿದ್ದಾನೆ. ಇದರೊಂದಿಗೆ ಶುಕ್ರ ಆತನ ಎದುರಿಗೆ ವಿರಾಜಮಾನನಾಗಿದ್ದಾನೆ. ಇದಲ್ಲದೆ ತೃತೀಯ ಭಾವದಲ್ಲಿ ಶನಿ ಕೂಡ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ನಿಮಗೆ ಅಪ್ರತ್ಯಕ್ಷ ರೂಪದಲ್ಲಿ ಉನ್ನತಿಯ ಯೋಗವಿದೆ. ಇದಲ್ಲದೆ ಒಂದು ದೊಡ್ಡ ಯಶಸ್ಸು ನಿಮ್ಮ ಕೈಗೆ ಸಿಗಲಿದೆ. ಶತ್ರುಗಳು ಸರ್ವನಾಶವಾಗಲಿದ್ದಾರೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಈ ಯಾತ್ರೆ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)