ರಾಜ್ಯ ಸರ್ಕಾರಿ ನೌಕರರಿಗೆ ಜಾಕ್‌ಪಾಟ್ :ಡಿಎ, ಬೋನಸ್ ಜೊತೆಗೆ ಹೆಚ್ಆರ್ ಎ ಯಲ್ಲಿ ಕೂಡಾ ಹೆಚ್ಚಳ
)
ತುಟ್ಟಿಭತ್ಯೆ ಹೆಚ್ಚಳ, ದೀಪಾವಳಿ ಬೋನಸ್ ನಿಂದ ಸಂತೋಷಗೊಂಡಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.ಈಗ ಹೆಚ್ಆರ್ ಎ ಕೂಡಾ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ನವೆಂಬರ್ 1 ರಿಂದಲೇ ಜಾರಿಗೆ ಬರಲಿದೆ.
)
ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಕೆಲವು ದಿನಗಳ ನಂತರ,ಮನೆ ಬಾಡಿಗೆ ಭತ್ಯೆ (ಹೆಚ್‌ಆರ್‌ಎ) ಹೆಚ್ಚಳವನ್ನು ರಾಜಸ್ಥಾನ ಸರ್ಕಾರ ಘೋಷಿಸಿದೆ.ಈ ಮೂಲಕ ರಾಜ್ಯದ ಜನತೆಗೆ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ್ದಾರೆ.
)
ವರ್ಗವಾರು ಎಚ್‌ಆರ್‌ಎ ಹೆಚ್ಚಳವನ್ನು ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಧಿಸೂಚನೆಯ ಪ್ರಕಾರ, 'ವೈ' ವರ್ಗದ ನಗರಗಳಿಗೆ ಶೇಕಡಾ 20 ರಷ್ಟು ಮತ್ತು 'ಝಡ್' ವರ್ಗದ ನಗರಗಳಿಗೆ ಶೇಕಡಾ 10 ರಷ್ಟು HRA ಹೆಚ್ಚಿಸಲಾಗಿದೆ.
ದೀಪಾವಳಿಗೆ ಮುಂಚೆಯೇ ಹಲವಾರು ರಾಜ್ಯ ಸರ್ಕಾರಗಳು ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.ತಮಿಳುನಾಡು, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಈಗಾಗಲೇ ತುಟ್ಟಿಭತ್ಯೆ ಹೆಚ್ಚಳ ಘೋಷಿಸಿವೆ.
ಈ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಹಬ್ಬದ ಬೋನಸ್ ಘೋಷಿಸಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವಿಧ ಇಲಾಖೆಗಳ ನೌಕರರಿಗೆ ನೌಕರರ ಒಂದು ತಿಂಗಳ ವೇತನಕ್ಕೆ ಸಮನಾದ ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ನೀಡುವುದಾಗಿ ಹೇಳಿತ್ತು.