ಬುಧ ಗೋಚರ : ದೀಪಾವಳಿಯ ನಂತರ ಬೆಳಗುವುದು ಈ ರಾಶಿಯವರ ಅದೃಷ್ಟ, ಹರಿಯುವುದು ಹಣದ ಹೊಳೆ

Wed, 19 Oct 2022-1:34 pm,

ಮಕರ ರಾಶಿ : ಬುಧ ಸಂಕ್ರಮಣವು ಅನೇಕ ರಾಶಿಯವರ ಜೀವನದಲ್ಲಿ ಸಂತೋಷದ ಹೊಳೆ ಹರಿಸಲಿದೆ. ಅವರಲ್ಲಿ ಮಕರ ರಾಶಿಯವರೂ ಸೇರಿದ್ದಾರೆ. ಈ ಸಮಯದಲ್ಲಿ, ಅನೇಕ ಸ್ಥಳಗಳಿಂದ  ಧನಾಗಮನದ ಹಾದಿಯು ತೆರೆದುಕೊಳ್ಳುವುದು. ಕಚೇರಿಯ ಕೆಲಸದ ಕಾರಣದಿಂದ ನೀವು ಪ್ರಯಾಣಿಸಬೇಕಾಗಬಹುದು. ಈ ಪ್ರಯಾಣ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ.  ಭವಿಷ್ಯದಲ್ಲಿ ವಿತ್ತೀಯ ಲಾಭವಾಗುವ ಸಾಧ್ಯತೆ ಇದೆ.   

ಧನು ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಲಾ ರಾಶಿಯಲ್ಲಿ ಬುಧನ ಪ್ರವೇಶವು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯವಾಗಿ ಸಾಬೀತಾಗಲಿದೆ. ಈ ಸಮಯದಲ್ಲಿ ಆದಾಯ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆ ಮತ್ತು ಹೂಡಿಕೆಯಿಂದ ಲಾಭವಾಗುವ ಸಾಧ್ಯತೆಗಳು ಹೆಚ್ಚಿವೆ. ಪ್ರೇಮ ಸಂಬಂಧಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ನಿಕಟತೆಯು ಹೆಚ್ಚುತ್ತಿರುವಂತೆ ತೋರುತ್ತದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಜೀವನದಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಈ ಸಮಯದಲ್ಲಿ ನೀಲಮಣಿ ಧರಿಸುವುದು ಅದೃಷ್ಟ.

ಕುಂಭ ರಾಶಿ : ಬುಧ ಗ್ರಹವು ತುಲಾ ರಾಶಿಯಲ್ಲಿ ಸಂಕ್ರಮಿಸಿದ ತಕ್ಷಣ, ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಉತ್ತುಂಗಕ್ಕೆ ಏರಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಹಲವಾರು ಹೊಸ ಜವಾಬ್ದಾರಿಗಳನ್ನು ಕಾಣಬಹುದು. 

ಕನ್ಯಾರಾಶಿ : ದೀಪಾವಳಿಯ ನಂತರ ಬುಧ ಸಂಕ್ರಮಣದ ಪರಿಣಾಮವು ಈ ರಾಶಿಯ ಜನರ ಜೀವನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ರಾಶಿಯ ಎರಡನೇ ಮನೆಯಲ್ಲಿ ಬುಧ ಸಂಕ್ರಮಿಸಲಿದ್ದಾನೆ. ಈ ಸಮಯದಲ್ಲಿ, ನಿಮಗೆ ಆಕಸ್ಮಿಕ ಧನಲಾಭವಾಗಬಹುದು.  ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಿರಲಿದೆ. ಮಾತು ಮತ್ತು ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಅತ್ಯುತ್ತಮವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link