Diwali 2023 ಬಳಿಕ ಬುದ್ಧಿದಾತ ಬುಧನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!
Mercury Rise In Scorpio 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿ ಹಬ್ಬದ ಬಳಿಕ ವೃಶ್ಚಿಕ ರಾಶಿಯಲ್ಲಿ ಬುದ್ಧನ ಉದಯ ನೆರವೇರಲಿದ್ದು, ಇದು ಹಲವು ರಾಶಿಗಳ ಜನರ ವೃತ್ತಿ ಮತ್ತು ವ್ಯಾಪಾರ ಜೀವನದಲ್ಲಿ ಚಿನ್ನದಂಥ ಕಾಲ ಆರಂಭಕ್ಕೆ ಕಾರಣವಾಗಲಿದೆ. Spiritual News In Kannada
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿಯ ಬಳಿಕ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ವೃಶ್ಚಿಕ ರಾಶಿಯಲ್ಲಿ ಉದಯಿಸಲಿದ್ದಾನೆ. ಅರ್ಥಾತ್ ಬುಧ ತನ್ನ ಸಂಪೂರ್ಣ ಫಲಗಳನ್ನು ನೀಡಲಿದ್ದಾನೆ ಎಂದರ್ಥ. ಬುಧನ ಈ ಉದಯ ನವೆಂಬರ್ 13, 2023 ರಂದು ನೆರವೇರಲಿದೆ. ಹೀಗಿರುವಾಗ ಬುಧನ ಈ ಉದಯದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಗೋಚರಿಸಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಬುಧನ ಈ ಉದಯ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗವನ್ನು ರೂಪಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, Spiritual News In Kannada
ಸಿಂಹ ರಾಶಿ: ಬುಧ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಕೆಲ ಐಷಾರಾಮಿ ವಸ್ತುಗಳ ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ. ಅರ್ಥಾತ್ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ನೌಕರವರ್ಗದ ಜನರಿಗೆ ಕಚೇರಿಯಲ್ಲಿ ಸ್ಥಾನಮಾನ-ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. ಆರ್ಥಿಕ ವಿಷಯಗಳಲ್ಲಿ ನಿಮಗೆ ಅಪಾರ ಲಾಭದ ಸಂಕೇತಗಳು ಗೋಚರಿಸುತ್ತಿವೆ. ರಿಯಲ್ ಎಸ್ಟೇಟ್, ಆಸ್ತಿಪಾಸ್ತಿ ಕ್ರಯ-ವಿಕ್ರಯ ವ್ಯವಹಾರಗಳಲ್ಲಿರುವವರಿಗೆ ಉತ್ತಮ ಲಾಭ ಸಿಗಲಿದೆ.
ಕುಂಭ ರಾಶಿ: ಈ ಅವಧಿಯಲ್ಲಿ ಬುಧ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಉದಯಿಸಲಿದ್ದಾನೆ. ಇದಲ್ಲದೆ ಆತ ನಿಮ್ಮ ರಾಶಿಯ ಅಧಿಪತಿಯಾಗಿರುವ ಶನಿಯ ಮಿತ್ರ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ನಿಮ್ಮ ಕೆಲಸಕಾರ್ಯಗಳಲ್ಲಿ ಇದುವರೆಗೆ ಸಂಭವಿಸುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಆಕಸ್ಮಿಕ ಧನಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ನಿಮಗೆ ನಿಮ್ಮ ಹಳೆ ಹೂಡಿಕೆಗಳಿಂದಲೂ ಕೂಡ ಅಪಾರ ಲಾಭದ ಸಂಕೇತಗಳಿವೆ. ಷೇರು ಮಾರುಕಟ್ಟೆ ಅಥವಾ ಲಾಟರಿ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನಿಮ್ಮ ಪಾಲಿಗೆ ಲಾಭದ ಎಲ್ಲಾ ಸಂಕೇತಗಳಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)