ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳ ರಚನೆ, ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯೋಗ!
Rajlakshmi-Ruchak-Malavya-Budhaditya Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳು ರಚನೆಯಾಗುತ್ತಿವೆ. ಇದರಿಂದ ಈ ರಾಶಿಗಳಿಗೆ ಸಂಬಂಧಿಸಿದ ಜನರ ಜೀವನದಲ್ಲಿ ಅಪಾರ ಧನಲಾಭ ಹರಿದು ಬರಲಿದ್ದು, ಜೀವನದಲ್ಲಿ ಭಾಗ್ಯೋದಯದ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
ಮೇಷ ರಾಶಿ: ನಾಲ್ಕು ರಾಜಯೋಗಗಳ ರಚನೆ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿಯಾಗಲಿದೆ. ಸೂರ್ಯನ ಆಶೀರ್ವಾದದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಧನ-ಸಂಪತ್ತಿನ ವಿಷಯದಲ್ಲಿ ನಿಮಗೆ ವಿಶೇಷ ಲಾಭ ಇರಲಿದೆ. ವೃತ್ತಿಜೀವನದಲ್ಲಿ ಉನ್ನತಿಯ ಯೋಗವಿದೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ವಿದ್ಯಾರ್ಥಿಗಳ ಪಾಲಿಗೆ ಈ ಗೋಚರ ವಿಶೇಷವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗುವ ಸಾಧ್ಯತೆ ಇದ್ದು, ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಬಯಸುವವರಿಗೆ ಈ ಯೋಗಗಗಳು ಯಶಸ್ಸನ್ನು ನೀಡಲಿವೆ. ವಿದೇಶಕ್ಕೆ ಹೋಗಿ ನೌಕರಿ ಮಾಡಬಯಸುವವರ ಆಸೆ ಕೂಡ ಈಡೇರಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿಯೂ ಕೂಡ ಅಪಾರ ಹೆಚ್ಚಳ ಸಂಭವಿಸಲಿದೆ.
ಸಿಂಹ ರಾಶಿ: ಈ ನಾಲ್ಕು ರಾಜಯೋಗಗಳ ರಚನೆ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿವೆ. ಈ ಅವಧಿಯಲ್ಲಿ ನಿಮ್ಮ ಸ್ಥಾನಮಾನ ಪ್ರತಿಸ್ಥೆ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ನಿಮಗೆ ಪ್ರಮೋಷನ್ ಕಾದಿದೆ. ಹೊಸ ನೌಕರಿಯ ಪ್ರಸ್ತಾವನೆ ಕೂಡ ನಿಮಗೆ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಈ ಯಾತ್ರೆಗಳು ನಿಮಗೆ ಶುಭ ಫಲಗಳನ್ನು ನೀಡಲಿವೆ. ಇದರ ಜೊತೆಗೆ ನಿಮ್ಮ ದೈನಂದಿನ ಆದಾಯದಲ್ಲಿ ಕೂಡ ಹೆಚ್ಚಳ ಸಂಭವಿಸಲಿದೆ. ಈ ಅವಧಿಯಲ್ಲಿ ನೀವು ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ನಿಮಗೆ ಹೂಡಿಕೆಯಿಂದಲೂ ಕೂಡ ಅಪಾರ ಲಾಭ ಹರಿದುಬರಲಿದೆ.
ತುಲಾ ರಾಶಿ: ನಾಲ್ಕು ರಾಜಯೋಗಗಳ ರಚನೆ ನಿಮ್ಮ ಪಾಳಿಗೂ ಕೂಡ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿವೆ. ವೃತ್ತಿ ಜೀವನದಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ಹಣಗಳಿಕೆಯ ವಿಪುಲ ಅವಕಾಶಗಳು ನಿಮಗೆ ಸಿಗಲಿವೆ. ಸ್ಥಾನಮಾನ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ ಮತ್ತು ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ಸನ್ನು ಕಾಣುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)