Holi 2023 ಹಬ್ಬದ ಬಳಿಕ ಈ ರಾಶಿಗಳ ಜನರಿಗೆ ಧನಹಾನಿಯ ಯೋಗ! ಕಾರಣ ಇಲ್ಲಿದೆ
ಮೇಷ ರಾಶಿ: ಮೇಷ ರಾಶಿಯ ಜನರು ರಾಹು ಮತ್ತು ಶುಕ್ರರ ಯುತಿಯಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗಲಿದೆ. ಏಕೆಂದರೆ ನಿಮ್ಮ ಜಾತಕದ ಉತ್ಕೃಷ್ಟ ಭಾವದಲ್ಲಿ ಈ ಮೈತ್ರಿ ಏರ್ಪಡಲಿದೆ. ಹೀಗಾಗಿ ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಅಲ್ಲದೆ, ರಹಸ್ಯ ಶತ್ರುಗಳು ನಿಮಗೆ ತೊಂದರೆ ನೀಡಬಹುದು. ಇದೇ ವೇಳೆ, ನೀವು ಸಂಬಂಧಗಳಲ್ಲಿ ಮೋಸ ಹೋಗಬಹುದು. ಪ್ರೀತಿಯ ವಿಷಯದಲ್ಲಿ ನೀವು ಸ್ವಲ್ಪ ಗೊಂದಲಕ್ಕೊಳಗಾಗಬಹುದು. ಅಲ್ಲದೆ, ನೀವು ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ, ಸಂಗಾತಿಯ ಆರೋಗ್ಯವು ಹದಗೆಡಬಹುದು.
ಕನ್ಯಾ ರಾಶಿ: ರಾಹು ಮತ್ತು ಶುಕ್ರರ ಯುತಿ ನಿಮ್ಮ ಪಾಲಿಗೆ ಸ್ವಲ್ಪ ಹಾನಿಕಾರಕ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಅಷ್ಟಮ ಭಾವದಲ್ಲಿ ರೂಪುಗೊಳ್ಳುತ್ತದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಕ್ಷೀಣಿಸಬಹುದು. ಇದರೊಂದಿಗೆ ನಿಮ್ಮ ಹಿರಿಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅಪಘಾತವಾಗುವ ಸಾಧ್ಯತೆ ಇರುವ ಕಾರಣ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ನಿಮ್ಮ ಸಂಗಾತಿಗೆ ಆದ್ಯತೆ ನೀಡಿ. ಹಿರಿಯರ ಜೊತೆ ಸ್ವಲ್ಪವೂ ಅನುಚಿತವಾಗಿ ವರ್ತಿಸಬೇಡಿ. ಅಂದರೆ, ಯಾವುದರ ಬಗ್ಗೆಯೂ ವಾಗ್ವಾದಕ್ಕೆ ಇಳಿಯಬೇಡಿ ಎಂದರ್ಥ.
ಮೀನ ರಾಶಿ: ರಾಹು ಮತ್ತು ಶುಕ್ರನ ಈ ಸಂಯೋಜನೆ ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಏಕೆಂದರೆ ಈ ಮೈತ್ರಿ ನಿಮ್ಮ ರಾಶಿಯ ಆದಾಯ ಭಾವದ ಮೇಲೆ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ಹಣದ ಒಳಹರಿವು ನಿಲ್ಲಬಹುದು. ಅಲ್ಲದೆ ಹಣ ಎಲ್ಲೋ ಸಿಕ್ಕಿಹಾಕಿಕೊಳ್ಳಬಹುದು. ಈ ಅವಧಿಯಲ್ಲಿ ಹಣವನ್ನು ಸಾಲವಾಗಿ ನೀಡಬೇಡಿ, ಇಲ್ಲದಿದ್ದರೆ ನಿಮ್ಮ ಹಣ ಮುಳುಗಿಹೋಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ, ಕುಟುಂಬದಿಂದ ಯಾವುದೇ ಬೆಂಬಲ ಇರುವುದಿಲ್ಲ. ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯವೂ ಹೆಚ್ಚಾಗಬಹುದು. ಗೃಹಸಂಕಟ ಮತ್ತು ಉದ್ವಿಗ್ನತೆಯಂತಹ ಪರಿಸ್ಥಿತಿ ಗೋಚರಿಸುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು, ನೀವು ಕಿರಿಯರು ಮತ್ತು ಹಿರಿಯರ ಬೆಂಬಲವನ್ನು ಪಡೆಯಬಹುದು. ಇನ್ನೊಂದೆಡೆ ನಿಮಗೆ ಶನಿಯ ಸಾಡೇಸಾತಿ ಕೂಡ ನಡೆಯುತ್ತಿದೆ, ಹೀಗಾಗಿ ಸ್ವಲ್ಪ ಮಾನಸಿಕ ಉದ್ವೇಗ ಉಂಟಾಗಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)