Sun-Jupiter Conjunction: ಹಲವು ವರ್ಷಗಳ ಬಳಿಕ ಮಂಗಳನ ಮನೆಯಲ್ಲಿ 2 `ಪವರ್ಫುಲ್ ಗ್ರಹಗಳ` ಮೈತ್ರಿ, 4 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!
ಮೇಷ ರಾಶಿ:ಮೇಷ ರಾಶಿಯ ಜನರ ಗೋಚರ ಜಾತಕದ ಪ್ರಥಮ ಭಾವದಲ್ಲಿ ಈ ಸೂರ್ಯ ಮತ್ತು ಗುರುವಿನ ಮೈತ್ರಿ ನೆರವೇರಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಸಮಾಜದಲ್ಲಿ ಘನತೆ-ಗೌರವ ಪ್ರಾಪ್ತಿಯಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ ಮತ್ತು ಅದರ ಆಧಾರದ ಮೇಲೆ ನಿಮಗೆ ಬಡ್ತಿ, ಇಂಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳಿವೆ. ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಇದರೊಂದಿಗೆ ವ್ಯಾಪಾರದಲ್ಲಿಯೂ ಲಾಭ ಕಾಣುವಿರಿ. ಬಹಳ ದಿನಗಳಿಂದ ಸಿಲುಕಿಹಾಕಿಕೊಂಡ ಮತ್ತು ನಿಮಗೆ ಬರಬೇಕಾದ ಹಣ ನಿಮ್ಮ ಬಳಿ ಮರಳಲಿದೆ. ಸಾಲದಿಂದ ಮುಕ್ತಿ ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರ ಗೋಚರ ಜಾತಕದಲ್ಲಿ ಸೂರ್ಯ ಮತ್ತು ಗುರುವಿನ ಈ ಮೈತ್ರಿ ಏಕಾದಶ ಭಾವದಲ್ಲಿ ಸಂಭವಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಸ್ಥಳೀಯರ ಆರ್ಥಿಕ ಸ್ಥಿತಿಯು ಪ್ರಬಲವಾಗಲಿದೆ. ಅಲ್ಲದೆ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುವಿರಿ..
ಕರ್ಕ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಸೂರ್ಯ ಮತ್ತು ಗುರುವಿನ ಈ ಮೈತ್ರಿ ನೆರವೇರಲಿದೆ. ಹೀಗಾಗಿ ಈ ಅವಧಿಯಲ್ಲಿ ಈ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುವ ಸಾಧ್ಯತೆ ಇದೆ. ನೀವು ಕೆಲಸದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುವಿರಿ. ವ್ಯಾಪಾರ ವರ್ಗದವರಿಗೂ ಈ ಸಮಯ ಅನುಕೂಲಕರವಾಗಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮೀನ ರಾಶಿ: ಸೂರ್ಯ ಮತ್ತು ಗುರುವಿನ ಈ ಮೈತ್ರಿ ನಿಮ್ಮ ಗೋಚರ ಜಾತಕದಲ್ಲಿಯೂ ಕೂಡ ದಶಮ ಭಾವದಲ್ಲಿ ನೆರವೇರಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಸ್ಥಳೀಯರ ಆರ್ಥಿಕ ಸ್ಥಿತಿಯು ತುಂಬಾ ಪ್ರಬಲವಾಗಲಿದೆ. ಇದರೊಂದಿಗೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಕಷ್ಟು ಯಶಸ್ಸನ್ನು ಪಡೆಯುವಿರಿ. ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ದಾಂಪತ್ಯ ಜೀವನದಲ್ಲಿ ಸಂತೋಷ ಇರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)