Tina Dabi: ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ ಆರತಕ್ಷತೆ ಫೋಟೋ ವೈರಲ್
ಟೀನಾ ದಾಬಿ ಮತ್ತು ಡಾ.ಪ್ರದೀಪ್ ಗವಾಂಡೆ ರಾಜಸ್ಥಾನ ಕೇಡರ್‌ನ ಅಧಿಕಾರಿಗಳಾಗಿದ್ದಾರೆ. ಟೀನಾ ಪ್ರಸ್ತುತ ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಪ್ರದೀಪ್ ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆ ನಿರ್ದೇಶಕರಾಗಿದ್ದಾರೆ.
ಟೀನಾ ಮತ್ತು ಪದ್ರೀಪ್ ಅವರ ಆರತಕ್ಷತೆಯ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆರತಕ್ಷತೆಯಲ್ಲಿ ಐಎಎಸ್ ಜೋಡಿ ತುಂಬಾ ಖುಷಿಯಾಗಿರುವುದು ಕಂಡುಬಂದಿದೆ. ಆರತಕ್ಷತೆ ವೇಳೆ ಟೀನಾ ಮತ್ತು ಪ್ರದೀಪ್ ಮರೂನ್ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು.
ಐಎಎಸ್ ಟೀನಾ ದಾಬಿ ಅವರು ಪ್ರದೀಪ್ ಗಾವಂಡೆ ಜೊತೆಗಿನ ಮದುವೆ ವಿಚಾರವಾಗಿ ಬಹಳ ದಿನಗಳಿಂದ ಸುದ್ದಿಯಲ್ಲಿದ್ದರು. ಅಂತಿಮವಾಗಿ ಟೀನಾ ಮತ್ತು ಪ್ರದೀಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಂದರ್ಭದಲ್ಲಿ ಇಬ್ಬರೂ ಭಗವಾನ್ ಬುದ್ಧನ ಪ್ರತಿಮೆ ಮತ್ತು ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು. ಮದುವೆಯ ಸಮಯದಲ್ಲಿ ಈ ಜೋಡಿ ತುಂಬಾ ಸರಳವಾಗಿ ಕಾಣಿಸಿಕೊಂಡಿತು.
ಟೀನಾ ಮತ್ತು ಪ್ರದೀಪ್ ಜೈಪುರದ ಹೊಟೇಲ್‌ನಲ್ಲಿ ಸರಳವಾಗಿ ವಿವಾಹವಾದರು. ಇದಾದ ನಂತರ ಈ ದಂಪತಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಪಂಚತಾರಾ ಹೋಟೆಲ್‌ನಲ್ಲಿ ಆರತಕ್ಷತೆ ಪಾರ್ಟಿ ನೀಡಿದರು. ಟೀನಾ-ಪ್ರದೀಪ್ ಅವರ ಆರತಕ್ಷತೆಯಲ್ಲಿ ಅನೇಕ ಅಧಿಕಾರಿಗಳು ಮತ್ತು ರಾಜಕೀಯ ಗಣ್ಯರು ಭಾಗವಹಿಸಿದ್ದರು.
ಐಎಎಸ್ ಅಧಿಕಾರಿಗಳಾಗಿರುವ ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ ಕೇವಲ 15-20 ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀನಕ್ಕೆ ಕಾಲಿಟ್ಟರು. ಇವರಿಬ್ಬರ ಆರತಕ್ಷತೆಯ ಫೋಟೋಗಳೂ ಸಖತ್ ವೈರಲ್ ಆಗುತ್ತಿವೆ.