ಇನ್ನು ಕೇವಲ 9 ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಆಗುವುದು ಧನವೃಷ್ಟಿ

Fri, 14 Apr 2023-4:37 pm,

ಇದೀಗ ಬುಧನು ಮೇಷ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದಕ್ಕೂ ಮೊದಲು, ಏಪ್ರಿಲ್ 21 ರಿಂದ, ಬುಧನ ಹಿಮ್ಮುಖ ಚಲನೆ ಆರಂಭವಾಗುತ್ತದೆ. ಏಪ್ರಿಲ್ 23 ರಂದು ಬುಧ ಗ್ರಹ ಅಸ್ತಮಿಸುತ್ತಿದೆ. ಜ್ಯೋತಿಷ್ಯದ ಪ್ರಕಾರ ಈ ರೀತಿಯಾಗಿ, ಬುಧ ಗ್ರಹದ ಹಿಮ್ಮುಖ ಚಲನೆ ಮತ್ತು ಬುಧದ ಅಸ್ತ ಸ್ಥಿತಿ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಆದರೆ ಇದು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರುತ್ತದೆ. 

ಕನ್ಯಾ ರಾಶಿ : ಕನ್ಯಾ ರಾಶಿಯವರು ಈ ಹೊತ್ತಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಮಾಡುವ ಎಲ್ಲಾ ರೀತಿಯ ಕೆಲಸಗಳಲ್ಲಿ  ಯಶಸ್ಸು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಗೌರವ ಸಿಗುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಪ್ರತಿಷ್ಠೆ ಹೆಚ್ಚಿಸುತ್ತದೆ.    

ತುಲಾ ರಾಶಿ : ಬುಧ ಅಸ್ತಮಿಸಿದ ನಂತರವೂ ತುಲಾ ರಾಶಿಯವರಿಗೆ  ಶುಭವನ್ನೇ ಮಾಡುತ್ತಾನೆ. ಹೊಸ ಉದ್ಯೋಗಾವಕಾಶ ಸಿಗಲಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಕಡಿಮೆಯಾಗಲಿವೆ. ವೇತನ ಹೆಚ್ಚಾಗಬಹುದು.  ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುವುದು. ಕೋಪವನ್ನು ನಿಯಂತ್ರಿಸಲು ಸಾಧ್ಯವಾದರೆ, ದೊಡ್ಡ ಮಟ್ಟದ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.  

ಕುಂಭ ರಾಶಿ :  ಅಸ್ತ ಬುಧ ಕುಂಭ ರಾಶಿಯವರಿಗೂ ಶುಭ ಫಲಗಳನ್ನು ನೀಡುತ್ತಾನೆ. ಈ ರಾಶಿಯವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನೀವು ಮಾಡುವ ಕೆಲಸದಲ್ಲಿ ಯಶಸ್ಸು ನೀಡುತ್ತಲೇ ಇರುತ್ತದೆ. ವಿರೋಧಿಗಳು ನಿಮ್ಮ ಮುಂದೆ ಮಂಡಿಯೂರುತ್ತಾರೆ.  

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link