2023ರಲ್ಲಿ ಈ ರಾಶಿಯವರನ್ನು ಸಮಸ್ಯೆಯ ಸುಳಿಯಲ್ಲಿ ಹಾಕಲಿದ್ದಾನೆ ರಾಹು.!

Wed, 21 Dec 2022-1:19 pm,

ಮೀನ ರಾಶಿ : ರಾಹು ಅಕ್ಟೋಬರ್ ನಲ್ಲಿ ಮೀನರಾಶಿಯನ್ನು ಪ್ರವೇಶಿಸಲಿದ್ದಾನೆ.  ಹೀಗಾಗಿ ಈ ರಾಶಿಯವರು ಎಷ್ಟು ಜಾಗರೂಕರಾಗಿದ್ದರೂ ಒಳ್ಳೆಯದೇ. ಈ ಸಮಯದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಕೆಲಸ ಕೆಡುತ್ತದೆ. ಹಾಗಾಗಿ ಹೊಸ ಯೋಜನೆಗಳನ್ನು ಬದಿಗಿಟ್ಟು ಸುಮ್ಮನಿರುವುದು ಒಳ್ಳೆಯದು. ಕೆಲಸದಲ್ಲಿ ಅನೇಕ ಅಡೆತಡೆಗಳು ಉಂಟಾಗಬಹುದು. ಆಹಾರ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. 

ತುಲಾ ರಾಶಿ : ಅಕ್ಟೋಬರ್ 30 ರಂದು ಸಂಭವಿಸಲಿರುವ ರಾಹು ಸಂಕ್ರಮಣವು ಈ ರಾಶಿಯವರ ವೈವಾಹಿಕ ಜೀವನದಲ್ಲಿ ತೊಡಕುಗಳನ್ನು ಉಂಟುಮಾಡಬಹುದು.  ಹೀಗಾಗಿ ಸ್ವಲ್ಪ ಶಾಂತವಾಗಿ ಕೆಲಸ ಮಾಡಬೇಕು.  ಈ ಅವಧಿಯಲ್ಲಿ ಕಚೇರಿಗಳಲ್ಲಿ  ಕೆಲಸ ಮಾಡುವವರು ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಹೋದ್ಯೋಗಿಗಳೊಂದಿಗೆ ಚರ್ಚೆ ಹೆಚ್ಚಾಗಬಹುದು. ಮನಸ್ಸಿನ ನೆಮ್ಮದಿ ಕೆಡುತ್ತದೆ. 

ವೃಷಭ ರಾಶಿ :ರಾಹುವಿನ ಸಂಚಾರದ ಸಮಯದಲ್ಲಿ, ಈ ರಾಶಿಯವರ ಮೇಲೆ ಬಹಳಷ್ಟು ಪರಿಣಾಮಗಳು ಗೋಚರಿಸುತ್ತವೆ. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಒಳ್ಳೆಯದು. ಈ ಸಮಯದಲ್ಲಿ ವೃಷಭ ರಾಶಿಯವರು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ರಾಹು ಸಂಕ್ರಮಣದ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. 

ಮೇಷ ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ರಾಹು ಮೇಷ ರಾಶಿಯಲ್ಲಿದ್ದಾನೆ. ಅಕ್ಟೋಬರ್ 30, 2023 ರಂದು, ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು. 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link