ಒಂದು ವರ್ಷದ ಬಳಿಕ ಶಶಿ-ಮಂಗಳರಿಂದ `ಧನ ರಾಜಯೋಗ` ರಚನೆ, ಈ ಜನರಿಗೆ ಭಾರಿ ಧನಲಾಭ!
Shashi-Mangala Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಶಶಿ ಹಾಗೂ ಮಂಗಳರ ಕೃಪೆಯಿಂದ ಧನರಾಜಯೋಗ ರಚನೆಯಾಗುತ್ತಿದೆ. ಈ ರಾಜಯೋಗ ಕೆಲ ರಾಶಿಗಳ ಭಾಗ್ಯವನ್ನೇ ಬದಲಿಸಲಿದೆ. (Spiritual News In Kannada)
ಮೇಷ ರಾಶಿ: ಈ ಎಲ್ಲಾ ಯೋಗಗಳು ಮೇಷ ರಾಶಿಯ ಜಾತಕದವರಿಗೆ ವರದಾನ ಸಾಬೀತಾಗಲಿವೆ. ಇದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಉನ್ನತಿಯ ಹಲವು ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ. ವೈವಾಹಿಕ ಜೀವನದಲ್ಲಿ ನಡೆದುಕೊಂಡ ಸಮಸ್ಯೆಗಳಿಂದ ನಿಮಗೆ ಮುಕ್ತಿಸಿಗಲಿದೆ. ಪ್ರಾಪರ್ಟಿ-ವಾಹನ ಖರೀದಿಗೆ ಅವಕಾಶ ಪ್ರಾಪ್ತಿಯಾಗಲಿದೆ. ನೀವು ಅಂದುಕೊಂಡ ಎಲ್ಲಾ ಯೋಜನೆಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ಹೆಚ್ಚು ಲಾಭ ಸಿಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ನೌಕರವರ್ಗದ ಜನರಿಗೆ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ಈ ಎಲ್ಲಾ ಯೋಗಗಳು ನಿಮ್ಮ ಪಾಲಿಗೆ ಸಾಕಷ್ಟು ಶುಭವಾಗಿರಲಿವೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಸಂಭವಿಸಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಭಾರಿ ಬಲಿಷ್ಠವಾಗಲಿದೆ. ವಿವಾಹಿತರ ವೈವಾಹಿಕ ಜೀವನ ಖುಷಿಗಳಿಂದ ಕೂಡಿರಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ನಿಮ್ಮದಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಈ ಕಾಲ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮ್ಮ ಕಾರ್ಯಶೈಲಿಯಲ್ಲಿ ಹೊಸ ಹುರುಪು-ಚೈತನ್ಯ ಇರಲಿದೆ. ಇದರಿಂದ ಕಾರ್ಯಸ್ಥಳದಲ್ಲಿ ನಿಮಗೆ ನಿಮ್ಮ ಕಿರಿಯ ಹಾಗೂ ಹಿರಿಯ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದ ಹಲವು ಶುಭ ಸಮಾಚಾರಗಳು ನಿಮಗೆ ಪ್ರಾಪ್ತಿಯಾಗಲಿವೆ.
ಕನ್ಯಾ ರಾಶಿ: ಈ ಎಲ್ಲಾ ಶುಭಯೋಗಗಳು ನಿಮ್ಮ ಪಾಲಿಗೆ ಸಾಕಷ್ಟು ಸಕಾರಾತ್ಮಕ ಸಾಬೀತಾಗಳಿವೆ. ಈ ಅವಧಿಯಲ್ಲಿ ನಿಮ್ಮ ಪ್ರತಿರೋಧಕ ಶಕ್ತಿ ಉತ್ತಮವಾಗಿರಲಿದೆ. ಯಾವುದಾದರೊಂದು ರೋಗದಿಂದ ಬಳಲುತ್ತಿರುವವರಿಗೆ ರೋಗದಿಂದ ಮುಕ್ತಿ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ನಿಮ್ಮದಾಗಲಿದ್ದು, ವ್ಯಾಪಾರ ವಿಸ್ತರಿಸುವಲ್ಲಿ ನೀವು ಯಶಸ್ವಿಯಾಗುವಿರಿ. ನೌಕರ ವರ್ಗದ ಜನರಿಗೆ ಆದಾಯ ಹೆಚ್ಚಾಗಲಿದೆ ಮತ್ತು ಪ್ರಭಾವ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮೆಲ್ಲಾ ಆಸೆಗಳು ಈಡೇರಲಿವೆ. ಕೆಲಸ ಕಾರ್ಯದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ಅತ್ಯುತ್ತಮವಾಗಿರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)