Shukra Vargottama 2023: ಒಂದು ವರ್ಷದ ಬಳಿಕ ತನ್ನ ಸ್ವರಾಶಿಯಲ್ಲಿ ವರ್ಗೊತ್ತಮನಾದ ಶುಕ್ರ, ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

Wed, 12 Apr 2023-4:40 pm,

ವೃಶ್ಚಿಕ ರಾಶಿ: ಶುಕ್ರನ ಈ ಉಚ್ಛ ಭಾವ ಅಥವಾ ವರ್ಗೊತ್ತಮ ಸ್ಥಿತಿ ನಿಮ್ಮ ಪಾಲಿಗೆ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಆಮದು-ರಫ್ತು ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಲಾಭ ಉಂಟಾಗಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಭಾರಿ ಲಾಭ ಉಂಟಾಗಲಿದೆ. ಕಂಪ್ಯೂಟರ್, ಐಟಿ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಭಾರಿ ಧನಲಾಭವಾಗುವ ಸಾಧ್ಯತೆ ಇದೆ. ವಿದೇಶದಿಂದಲೂ ಕೂಡ ನಿಮಗೆ ಉತ್ತಮ ಲಾಭ ಲಭಿಸುವ ಯುಗವಿದೆ. ಪರಿಶ್ರಮದ ಆಧಾರದ ಮೇಲೆ ನಿಮಗೆ ಬಡ್ತಿ ಸಿಗಲಿದೆ ಹಾಗೂ ನೌಕರ ವರ್ಗಕ್ಕೆ ಸಂಬಂಧಿಸಿದೆ ಜನರಿಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಜೊತೆಗಿನ ಅವರ ಸಂಬಂಧ ಉತ್ತಮಗೊಳ್ಳಲಿದೆ.  

ತುಲಾ ರಾಶಿ: ಶುಕ್ರನ ಈ ವರ್ಗೊತ್ತಮ ಸ್ಥಿತಿ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಇದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ವೃತ್ತಿ ಜೇವಣದಲ್ಲಿ ಅತ್ಯುತ್ತಮ ಅವಕಾಶ ನಿಮ್ಮ ಬಳಿ ನಡೆದುಕೊಂಡು ಬರುವ ಸಾಧ್ಯತೆ ಇದೆ ಹಾಗೂ ನೌಕರಿಯಲ್ಲಿ ನಿರತರಾದವರಿಗೆ ಉತ್ತಮ ಇನ್ಸೇನ್ಟೀವ್ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರಿಗೆ ಈ ಅವಧಿಯಲ್ಲಿ ಅಪಾರ ಧನಲಾಭವಾಗಲಿದೆ. ಒಂದು ವೇಳೆ ನೀವು ಚಲನ ಚಿತ್ರೋದ್ಯಮ, ಮಾಧ್ಯಮ, ಮಾಡೆಲಿಂಗ್, ಕಲೆ, ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದರೆ ಈ ಸಮಯ ನಿಮಗೆ ಅತ್ಯಂತ ಅದ್ಭುತ ಸಾಬೀತಾಗಲಿದೆ.   

ಮಕರ ರಾಶಿ: ವೈಭವದಾತ ಶುಕ್ರನ ಈ ವರ್ಗೊತ್ತಮ ಸ್ಥಿತಿ ಮಕರ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ ಕಂಡುಬರಲಿದೆ. ಸಿಎ, ಎಂಬಿಎ, ವಕೀಲರಾಗಿರುವ ಜನರಿಗೆ ಈ ಸಮಯ ಅದ್ಭುತವಾಗಿದೆ. ಇನ್ನೊಂದೆಡೆ ಕಮೀಷನ್ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭದ ಯೋಗ ನಿರ್ಮಾಣಗೊಂಡಿದೆ. ಈ ಅವಧಿಯಲ್ಲಿ ನೀವು ಹೊಸಮನೆ, ವಾಹನ ಖರೀದಿಸುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಇನ್ನೊಂದೆಡೆ ಆರ್ಥಿಕ ಸ್ಥಿತಿ ಕೂಡ ಮೊದಲಿಗಿಂತ ಉತ್ತಮವಾಗಿರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link