ಪ್ರಿಯಾಂಕ ಬಳಿಕ ತನ್ನ ಡಿಫರೆಂಟ್ ಡ್ರೆಸ್‍ನಿಂದ ಟ್ರೋಲ್ ಆದ ನುಸ್ರತ್ ಭರೂಚಾ
ಈ ಸಮಾರಂಭದಲ್ಲಿ ಡಿಸೈನರ್ ಯೂಸುಫ್ ಅಕ್ಬರ್ ವಿನ್ಯಾಸದ ಉಡುಪಿನಲ್ಲಿ ನುಸ್ರತ್ ಕಾಣಿಸಿಕೊಂಡರು. ಇದು ಭುಜದ ಉದ್ದನೆಯ ನಿಲುವಂಗಿಯಾಗಿದ್ದು, ಅದರ ಪಕ್ಕದ ಸ್ಪ್ಲಿಟ್ ತುಂಬಾ ಉದ್ದವಾಗಿತ್ತು.
ಅವರ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಂತಹ ಡಿಸೈನಿಂಗ್ ಡ್ರೆಸ್ ವಿನ್ಯಾಸಗೊಳಿಸುವ ಫ್ಯಾಶನ್ ಡಿಸೈನರ್ ಎಲ್ಲಿದ್ದಾರೆ ಎಂದು ಕೆಲವರು ಅಕ್ರೋಶ ವ್ಯಕ್ತಪಡಿಸಿದರೆ, ಅದೇ ಸಮಯದಲ್ಲಿ ಒಬ್ಬ ಬಳಕೆದಾರರು ಬರೆದಿದ್ದಾರೆ - ಈ ದೇಶದಲ್ಲಿ ಎಷ್ಟು ಬಡತನ ಬಂದಿದೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ಕತ್ತರಿಯಿಂದ ವಿನ್ಯಾಸ ತಪ್ಪಿತೇ ಎಂದು ಪ್ರಶ್ನಿಸಿದ್ದರೆ, ಕೆಲವರು ಬ್ಯೂಟಿಫುಲ್ ಎಂದು ವರ್ಣಿಸಿರುವುದೂ ಕೂಡ ಕಂಡು ಬಂದಿದೆ.
ಅಂದಹಾಗೆ, ಪ್ರಿಯಾಂಕಾ ನಂತರ, ನುಸ್ರತ್ ಅವರನ್ನೂ ಕೂಡ ಅವರ ಡಿಫರೆಂಟ್ ಡ್ರೆಸ್‍ನಿಂದ ಟ್ರೋಲ್ ಮಾಡಲಾಗುತ್ತದೆ. ಪ್ರಿಯಾಂಕಾ ಅವರ ಉಡುಪಿನ ನೆಕ್ ಲೈನ್ ಸಾಕಷ್ಟು ಡೀಪ್ ಆಗಿತ್ತು.
'ಗ್ರ್ಯಾಮಿ 2020' ರಲ್ಲಿ ಪ್ರಿಯಾಂಕಾ ಧರಿಸಿದ್ದ ಬಿಳಿ ಗೌನ್ ಡೀಪ್ ಫ್ರಂಟ್ ಓಪನ್ ಗೌನ್ ಆಗಿದ್ದು, ಅದರಲ್ಲಿ ಅವರು ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಬಿಳಿ ಬಣ್ಣದ ಗೌನ್ ಗೆ ಸರಿಹೊಂದುವಂತಹ ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರು. ಇನ್ನು ಫ್ರೀ ಹೇರ್ ಬಿಟ್ಟಿದ್ದ ಪ್ರಿಯಾಂಕಾ ಚೋಪ್ರಾ ಎಲ್ಲರ ಕಣ್ಮನ ಸೆಳೆದರು.
ಪ್ರಿಯಾಂಕಾ ಅವರ ಈ ಚಿತ್ರಗಳನ್ನು ನೋಡಿದ ನೆಟಿಜನ್‌ಗಳು ಅವರನ್ನು ಮತ್ತೊಮ್ಮೆ ಟ್ರೋಲ್ ಮಾಡಿದ್ದರು. ಪ್ರಿಯಾಂಕಾ ಅವರ ಈ ಚಿತ್ರಗಳ ಬಗ್ಗೆ ನೆಟಿಜನ್‌ಗಳು ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಿಯಾಂಕಾ ಅವರಿಗೆ ನಾಚಿಕೆಯಾಗುತ್ತಿಲ್ಲವೇ ಎಂದು ಕೇಳುತ್ತಾ ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಇದಕ್ಕಿಂತ ಉತ್ತಮವಾದ ಬಟ್ಟೆ ಧರಿಸುತ್ತಿದ್ದರು ಎಂದಿದ್ದರು.
ಸೊನಾಲಿ ಸೆಹಗಲ್ ಮತ್ತು ಆಯುಷ್ಮಾನ್ ಅವರ ಪತ್ನಿ ತಾಹಿರಾ ಕಶ್ಯಪ್ ನುಸ್ರತ್ ಅವರ ಉಡುಗೆ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
(ಫೋಟೊ ಕೃಪೆ: Instagram)