Chatrurgrah Yog In Aries: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ರಾಶಿಗಳಿಗೆ ಧನಹಾನಿಯ ಸಾಧ್ಯತೆ!
ವೃಷಭ ರಾಶಿ: ಮೇಷ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಚತುರ್ಗ್ರಹಿ ಯೋಗ, ವೃಷಭ ರಾಶಿಯ ಜಾತಕದವರ ಪಾಲಿಗೆ ಸ್ವಲ್ಪ ಕಷ್ಟಕರ ಸಾಬೀತಾಗಲಿದೆ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡಿ. ಬಾಳಸಂಗಾತಿಯ ಜೊತೆಗೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕೋಪದ ಮೇಲೆ ನಿಯಂತ್ರಣವಿರಲಿ. ಕೋಪದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದರಿಂದ ಪಾರಾಗಿ. ಕುಟುಂಬದ ಎಲ್ಲಾ ಸದಸ್ಯರ ಜೊತೆಗೆ ಮುಕ್ತವಾಗಿ ಮಾತನಾಡಿ,
ತುಲಾ ರಾಶಿ: ಚತುರ್ಗ್ರಹಿ ಯೋಗ ನಿಮ್ಮ ಪಾಲಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಕಾರ್ಯಸ್ಥಳದಲ್ಲಿ ಒಂದೆಡೆ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿ ಬಡ್ತಿ ಹಾಗೂ ಇಂಕ್ರಿಮೆಂಟ್ ದೊರೆತರೆ, ಇದರ ಜೊತೆಗೆ ದೊಡ್ಡ ಜವಾಬ್ದಾರಿ ಕೂಡ ಸಿಗುವ ಸಾಧ್ಯತೆ ಇದೆ. ಹೀಗಾಗಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಈ ಅವಧಿಯಲ್ಲಿ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕುಟುಂಬದ ಜೊತೆಗೆ ಉತ್ತಮ ವ್ಯವಹಾರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ, ಏಕೆಂದರೆ ಇದರಿಂದ ನಿಮಗೂ ಕೂಡ ದುಃಖವಾಗುವ ಸಾಧ್ಯತೆ ಇದೆ.
ಕುಂಭ ರಾಶಿ: ಮೇಷ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಚತುರ್ಗ್ರಹಿ ಯೋಗ ಕುಂಭ ರಾಶಿಯವರ ಪಾಲಿಗೂ ಕೂಡ ಸ್ವಲ್ಪ ಕಷ್ಟಕರ ಸಾಬೀಟಾಗುವ ಸಾಧ್ಯತೆ ಇದೆ. ಅನಾವಶ್ಯಕ ವೆಚ್ಚ ಹೆಚ್ಚಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಲಾಭ ತಗ್ಗುವ ಎಲ್ಲಾ ಸಾಧ್ಯತೆಗಳು ಇವೆ. ಸಣ್ಣ-ಪುಟ್ಟ ಕೆಲಸಕ್ಕೆ ಅಧಿಕ ಪರಿಶ್ರಮ ಪಡಬೇಕಾಗಬಹುದು. ವೃತ್ತಿ ಜೀವನದಲ್ಲಿ ಗುರಿಯನ್ನು ನಿರ್ಧರಿಸಿ ಮುಂದಕ್ಕೆ ಸಾಗಿ. ಇಲ್ಲದೆ ಹೋದರೆ ಅಪಯಶಸ್ಸುಗಳ ಸರಣಿಯೇ ಆರಂಭಗೊಳ್ಳುವ ಸಾಧ್ಯತೆ ಇದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಹೊಸ ಸ್ನೇಹಿತರ ಜೊತೆಗೆ ಕಾಲ ಕಳೆಯುವುದು ನಿಮ್ಮ ಪಾಲಿಗೆ ಲಾಭಕಾರಿ ಸಿದ್ಧವಾಗಲಿದೆ.
ಸಿಂಹ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚತುರ್ಗ್ರಹಿ ಯೋಗ ಸಿಂಹ ರಾಶಿಯ ಜಾತಕದವರಿಗೆ ಸ್ವಲ್ಪ ಕಠಿಣ ಸಾಬೀತಾಗಲಿದೆ. ವ್ಯಾಪಾರದಲ್ಲಿ ಏರಿಳಿತಗಳು ಕಂಡುಬರಲಿವೆ. ಕಾರ್ಯಸ್ಥಳದಲ್ಲಿ ಪದೋನ್ನತಿಯ ಸಾಧ್ಯತೆ ಇದೆ. ಆದರೆ, ಇದರ ಜೊತೆಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಕೂಡ ಇದೆ. ಏಕೆಂದರೆ ವಿರೋಧಿಗಳು ನಿಮ್ಮ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)