Sun Jupiter Rahu Conjunction: 12 ವರ್ಷಗಳ ಬಳಿಕ ಸೂರ್ಯ, ಗುರು ಹಾಗೂ ರಾಹುಗಳ ಮೈತ್ರಿ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!

Sun, 16 Apr 2023-2:36 pm,

ಮೇಷ ರಾಶಿ: ಸೂರ್ಯ, ಗುರು ಹಾಗೂ ರಾಹುವಿನ ಮೈತ್ರಿ ಮೇಷ ರಾಶಿಯಲ್ಲಿಯೇ ನೆರವೇರುತ್ತಿರುವ ಕಾರಣ  ಮೇಷ ರಾಶಿಯ ಜನರ ಪಾಲಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಈ ಮೈತ್ರಿ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮಗೆ ನಿಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಲು ಸುಲಭವಾಗಲಿದೆ. ವೃತ್ತಿಜೀವನದಲ್ಲಿ ಅತ್ಯುತ್ತಮ ಅವಕಾಶ ನಿಮ್ಮ ಬಳಿ ನಡೆದುಕೊಂಡು ಬರಲಿದೆ. ನೌಕರಿ ಮಾಡುವವರಿಗೆ ಅತ್ಯುತ್ತಮ ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ಅವಿವಾಹಿತರ ಸಂಬಂಧ ಕೂಡಿಬರಲಿದೆ. ಈ ಅವಧಿಯಲ್ಲಿ ನಿಮ್ಮ ಹಲವು ಯೋಜನೆಗಳು ಯಶಸ್ವಿಯಾಗಲಿವೆ. ಇನ್ನೊಂದೆಡೆ ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ, ಹುರುಪು, ಹೊಳಪು ಕಾಣಿಸಿಕೊಳ್ಳಲಿದೆ.   

ಕರ್ಕ ರಾಶಿ: ಗುರು, ರಾಹು, ಸೂರ್ಯನ ಈ ಮೈತ್ರಿ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಕರ್ಮಭಾವದಲ್ಲಿ ರೂಪುಗೊಳ್ಳುತ್ತಲಿದೆ. ಈ ಅವಧಿಯಲ್ಲಿ ವ್ಯಾಪಾರ ವರ್ಘದ ಜನರಿಗೆ ಭಾರಿ ಧನಲಾಭವಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಒದಗಿ ಬರುವ ಸಾಧ್ಯತೆ ಇದೆ. ನೌಕರವರ್ಗದವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ. ಈ ಅವಧಿಯಲ್ಲಿ ನಿಮಗೆ ತಂದೆಯಿಂದ ಬೆಂಬಲ ಸಿಗಲಿದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿರುವ ಕಾರಣ. ಶನಿಯ ಆರಾಧನೆ ನಿಮಗೆ ಕೊಂಚ ನೆಮ್ಮದಿಯನ್ನು ನೀಡಲಿದೆ.  

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ಪಾಲಿಗೆ ಸೂರ್ಯ, ಗುರು ಹಾಗೂ ರಾಹುವಿನ ಈ ಮೈತ್ರಿ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಅದೃಷ್ಟ ಭಾವದಲ್ಲಿ ನಿರ್ಮಾಣಗೊಳ್ಳುತ್ತಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಭಾರಿ ಬೆಂಬಲ ಸಿಗಲಿದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ಬಯಸುವ ಕೆಲಸ ಮಾಡುವ ಅವಕಾಶ ನಿಮಗೆ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ಅಪಾರ ಹಣ ಉಳಿತಾಯ ಮಾಡುವಿರಿ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಈ ಮೈತ್ರಿಯಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಧಾರ್ಮಿಕ ಕಾರ್ಯಗಳ ಪ್ರತಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link