Dhan Rajyog: 20 ವರ್ಷಗಳ ಬಳಿಕ ನಿರ್ಮಾಣಗೊಂಡಿವೆ ಈ 4 ಧನ ರಾಜಯೋಗಗಳು, 3 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!

Sat, 25 Mar 2023-8:25 pm,

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಪಾಲಿಗೆ 4 ಧನ ರಾಜಯೋಗಗಳು ಅತ್ಯಂತ ಶುಭ ಫಲಪ್ರದಾಯಿ ಹಾಗೂ ಲಾಭದಾಯಕ ಸಾಬೀತಾಗಲಿವೆ, ಏಕೆಂದರೆ ಈ ಯೋಗಗಳು ನಿಮ್ಮ ರಾಶಿಯ ದ್ವಿತೀಯ ಭಾವದಲ್ಲಿ ನಿರ್ಮಾಣಗೊಳ್ಳುತ್ತಿವೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭದ ಯೋಗ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆಯಾಗಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಈ ಧನರಾಜ ಯೋಗಗಳ ಪ್ರಭಾವದಿಂದ ನಿಮಗೆ ಆದಾಯದ ಇತರ ಮೂಲಗಳು ಕೂಡ ನಿರ್ಮಾಣಗೊಳ್ಳಲಿವೆ. ಜೊತೆಗೆ ನಿರುದ್ಯೋಗಿಗಳಿಗೆ ಹೊಸ ನೌಕರಿಯ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ.  

ಮಕರ ರಾಶಿ: ನಾಲ್ಕು ಧನ ರಾಜಯೋಗಗಳ ನಿರ್ಮಾಣ ಮಕರ ಜಾತಕದವರಿಗೆ ಅತ್ಯಂತ ಅನುಕೂಲಕರ ಸಿದ್ಧವಾಗಲಿವೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಗಜಕೇಸರಿ, ಬುದ್ಧಾದಿತ್ಯ ಹಾಗೂ ನೀಚ್ ಭಂಗ್ ರಾಜ್ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮದಲ್ಲಿ ಭಾರಿ ಹೆಚ್ಚಳವಾಗಲಿದೆ. ಯಾವ ಜನರ ವ್ಯಾಪಾರ ವಿದೇಶಗಳಿಗೆ ಸಂಬಂಧಿಸಿದೆಯೋ ಅವರಿಗೆ ಅಪಾರ ಧನಲಾಭವಾಗುವ ಸಾಧ್ಯತೆ ಇದೆ.  ಈ ಅವಧಿಯಲ್ಲಿ ಒಂದು ಅದ್ಭುತ ಆಸ್ತಿಯನ್ನು ನೀವು ಖರೀದಿಸಬಹುದು. ಅವಿವಾಹಿತ ಜನರಿಗೆ ಕಂಕಣ ಬಾಲ ಕೂಡಿಬರುವ ಸಾಧ್ಯತೆ ಇದೆ. ನಿಮಗೆ ನಿಮ್ಮ ಸಹೋದರ-ಸಹೋದರಿಯರ ಬೆಂಬಲ ಪ್ರಾಪ್ತಿಯಾಗಲಿದೆ. ಮಾರ್ಚ್ ಬಳಿಕ ನೌಕರ ವರ್ಗದ ಜನರ ಪ್ರಮೋಷನ್ ಹಾಗೂ ವರ್ಗಾವಣೆಯ ಸಾಧ್ಯತೆಗಳು ಗೋಚರಿಸುತ್ತಿವೆ.   

ಕುಂಭ ರಾಶಿ: ನಿರ್ಮಾಣಗೊಳ್ಳುತ್ತಿರುವ ಈ ನಾಲ್ಕು ರಾಜಯೋಗಗಳು ನಿಮ್ಮ ಪಾಲಿಗೆ ಶುಭ ಫಲಪ್ರದಾಯಿ ಸಾಬೀತಾಗಲಿವೆ. ಏಕೆಂದರೆ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಶಶ ರಾಜಯೋಗ ನಿರ್ಮಾಣಗೊಂಡರೆ, ಧನ ಭಾವದಲ್ಲಿ ನೀಚ್ ಭಂಗ್ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ನಿಮಗೆ ಹೊಸ ಹೊಳಪು ಕಾಣಲು ಸಿಗಲಿದೆ. ಈ ಸಮಯದಲ್ಲಿ ನಿಮಗೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ.  ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link