ಐನೂರು ವರ್ಷಗಳ ಬಳಿಕ ಸೂರ್ಯ-ಶುಕ್ರರ ಕೃಪೆಯಿಂದ ನೀಚ್ ಭಂಗ್ ರಾಜಯೋಗ ನಿರ್ಮಾಣ, 3 ರಾಶಿಗಳಿಗೆ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!
Shukra-Surya Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಐನೂರು ವರ್ಷಗಳ ಬಳಿಕ ಧನದಾತ ಶುಕ್ರ ಹಾಗೂ ಗ್ರಹಗಳ ರಾಜ ಸೂರ್ಯನ ಮೈತ್ರಿಯಿಂದ ನೀಚ್ ಭಂಗ್ ರಾಜಯೋಗ ನಿರ್ಮಾಣಗೊಂಡಿದ್ದು, ಇದು 3 ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗ ಕರುಣಿಸಲಿದೆ. (Spiritual News In Kannada)
ಮಕರ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಜಾತಕದಲ್ಲಿ ನವಮಾಂಶನಾಗಿದ್ದರೆ, ಶುಕ್ರ ದಶಮಾಂಶನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಎಲ್ಲಾ ಆಸೆ-ಆಕಾಂಕ್ಷೆಗಳು ಈಡೇರಲಿವೆ. ಬೂಮಿ, ವಾಹನ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದ್ದು, ಸೌಕರ್ಯಗಳಲ್ಲಿ ವೃದ್ದಿಯಾಗಲಿದೆ. ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದಾರೆ, ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸುವಲ್ಲಿ ಯಶಸ್ಸನ್ನು ಕಾಣುವಿರಿ. ಈ ಅವಧಿಯಲ್ಲಿ ನಿಮಗೆ ಉತ್ತಮ ಧನಲಾಭವಾಗುವ ಸಂಕೇತಗಳು ಗೋಚರಿಸುತ್ತಿವೆ. ದೇಶ-ವಿದೇಶಗಳ ಯಾತ್ರೆ ಕೂಡ ಜರುಗುವ ನಿರೀಕ್ಷೆ ಇದೆ.
ಕನ್ಯಾ ರಾಶಿ: ಈ ಅವಧಿಯಲ್ಲಿ ಶುಕ್ರ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಸಂಚರಿಸುತ್ತಿದ್ದರೆ, ಸೂರ್ಯ ಧನ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದು ನಿಮ್ಮ ವ್ಯಕ್ತಿತ್ವಕ್ಕೆ ಸಾಕಷ್ಟು ಮೆರಗನ್ನು ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸೂರ್ಯನ ಪ್ರಭಾವದಿಂದ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ಗುರು-ಹಿರಿಯರ ಆಶೀರ್ವಾದ ಪಡೆದುಕೊಳ್ಳಿ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ . ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳಲಿವೆ. ಸಿಲುಕಿಹಾಕಿಕೊಂಡ ನಿಮ್ಮ ಹಣ ನಿಮ್ಮ ಕೈಸೇರಲಿದೆ. ವ್ಯಾಪಾರಿಗಳು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರಳಿ ಪಡೆಯಲಿದ್ದಾರೆ.
ಕರ್ಕ ರಾಶಿ: ಒಂದೆಡೆ ಶುಕ್ರ ನಿಮ್ಮ ರಾಶಿಯ ತೃತೀಯ ಭಾವದಲ್ಲಿ ಸಂಚರಿಸುತ್ತಿದ್ದರೆ, ಸೂರ್ಯ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ-ಪರಾಕ್ರಮದಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ನಿಮ್ಮ ವ್ಯಾಪಾರ ವಿದೇಶಕ್ಕೆ ಸಂಬಂಧಿಸಿದ್ದರೆ, ನಿಮಗೆ ಉತ್ತಮ ಲಾಭ ಸಿಗಲಿದೆ. ಆಸ್ತಿಪಾಸ್ತಿ-ವಾಹನ ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೌಕರ್ಯಗಳಲ್ಲಿ ಸಾಕಷ್ಟು ಹೆಚ್ಚಳ ಸಂಭವಿಸಲಿದೆ. ಕೌಟುಂಬಿಕ ಹಾಗೂ ವೈವಾಹಿಕ ಜೀವನ ಸುಖಮಯವಾಗಿರಲಿದೆ. ಕುಟುಂಬದ ಎಲ್ಲಾ ಸದಸ್ಯರ ಬೆಂಬಲ ನಿಮಗೆ ಸಿಗಲಿದೆ. ನೌಕರವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಮಹತ್ವದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)