ಸೆಪ್ಟೆಂಬರ್ 18 ರಿಂದ ಬುಧ-ಶನಿಯ ಕೃಪೆಯಿಂದ 4 ರಾಶಿಗಳ ಜನರ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿಯ ಆಗಮನ!
ಮೇಷ ರಾಶಿ: ಶನಿ ಹಾಗೂ ಬುಧ ಪರಸ್ಪರ ಎದುರಾಗಿ ಸಂಚರಿಸುವುದು ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಬುಧ ಹಾಗೂ ಲಾಭ ಸ್ಥಾನದಲ್ಲಿ ಶನಿ ಸ್ಥಿತನಾಗಿರಲಿದ್ದಾರೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಉನ್ನತಿಯ ಎಲ್ಲಾ ಅವಕಾಶಗಳು ಪ್ರಾಪ್ತಿಯಾಗಲಿವೆ. ನಿಂತುಹೋದ ನಿಮ್ಮ ಕೆಲಸ ಕಾರ್ಯಗಳು ಪುನಃ ವೇಗ ಪಡೆದುಕೊಳ್ಳಲಿವೆ. ಮಕ್ಕಳ ಕಡೆಯಿಂದ ಈಗಾಗಲೇ ಇರುವ ಯಾವುದಾದರೊಂದು ಕಷ್ಟದಿಂದ ನಿಮಗೆ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ಸಹೋದರ-ಸಹೋದರಿ ಅಥವಾ ಸಂಬಂಧಿಕರ ಮಾಧ್ಯಮದಿಂದ ಅತ್ಯಾವಶ್ಯಕ ಕೆಲಸ ಕೈಗೂಡಲಿದೆ.
ಮಿಥುನ ರಾಶಿ: ನಿಮ್ಮ ಪಾಳಿಗೂ ಕೂಡ ಶನಿ ಹಾಗೂ ಬುಧ ಪರಸ್ಪರ ಎದುರಾಗುವುದು ಲಾಭ ತರಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಬುಧ ಹಾಗೂ ಲಾಭದ ಮನೆಯಲ್ಲಿ ಶನಿ ಸ್ಥಿತನಾಗಿದ್ದಾರೆ. ಇದರ ಜೊತೆಗೆ ಬುಧ ಹಾಗೂ ಶನಿಯ ಸಪ್ತಮ ದೃಷ್ಟಿ ಕೂಡ ಇದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಸಾಹಿತ್ಯ ಅಥವಾ ಲೇಖನಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯಂತ ಅದ್ಭುತವಾಗಿರಲಿದೆ. ವಿದೇಶದಿಂದ ನಿಮಗೆ ಲಾಭ ಉಂಟಾಗಲಿದೆ. ನೌಕರಿಯಲ್ಲಿ ಪ್ರಮೋಷನ್-ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ.
ವೃಷಭ ರಾಶಿ: ಸಪ್ತಮ ದೃಷ್ಟಿಯಲ್ಲಿ ಬುಧ ಹಾಗೂ ಶನಿಯ ಸಂಚಾರ ನಿಮ್ಮ ಪಾಲಿಗೆ ಅನುಕೂಲಕರವಾಗಿದೆ. ಏಕೆಂದರೆ ಚತುರ್ಥ ಭಾವದಲ್ಲಿ ಬುಧನ ಅಸ್ತಿತ್ವ ಹಾಗೂ ಕರ್ಮ ಭಾವದಲ್ಲಿ ಶನಿಯ ಅಸ್ತಿತ್ವ ಇರಲಿದೆ. ಅರ್ಥಾತ್ ಧನೇಶ ಹಾಗೂ ಪಂಚಮೇಷ ಬುಧ ಕರ್ಮ ಭಾವದಲ್ಲಿದ್ದಾರೆ. ಇದಲ್ಲದೆ ದೇವಗುರು ಬೃಹಸ್ಪತಿಯ ದೃಷ್ಟಿ ಕೂಡ ಬುಧನ ಮೇಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹೊಸ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಯೂ ಕೂಡ ಇದೆ. ಕಾರ್ಯಸಿದ್ಧಿ ಪ್ರಾಪ್ತಿಯ ಜೊತೆಗೆ ಆದಾಯದ ಮೂಲಗಳೂ ಕೂಡ ವೃದ್ಧಿಯಾಗಲಿವೆ. ಕುಟುಂಬದಲ್ಲಿ ಸುಖ-ಶಾಂತಿ ಇರುವುದರ ಜೊತೆಗೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ತುಲಾ ರಾಶಿ: ಏಳನೆ ದೃಷ್ಟಿಯಿಂದ ಶನಿ ಹಾಗೂ ಬುಧರ ಸಂಚಾರ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಲಾಭ ಸ್ಥಾನದಲ್ಲಿ ಬುಧನಿದ್ದಾನೆ. ಇದಲ್ಲದೆ ಶನಿದೇವ ಕೇಂದ್ರ ತ್ರಿಕೋನ ರಾಜಯೋಗ ರೂಪಿಸಿ ಪಂಚಮ ಭಾವದಲ್ಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಇದಲ್ಲದೆ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಯಾಗಲಿದೆ. ಅಕೌಂಟ್, ಟೆಕ್ನಿಕಲ್, ಸಿಎ, ಗ್ಲಾಮರ್, ಮಾಧ್ಯಮ ಹಾಗೂ ಉದ್ಯೋಗಪತಿಗಳಾಗಿದ್ದಾರೋ ಅವರ ಪಾಲಿಗೆ ಈ ಸಮಯ ಅದ್ಭುತವಾಗಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)