ಸೆ.16ರ ಬಳಿಕ ಈ ಅದೃಷ್ಟವಂತ ರಾಶಿಯ ಹಣೆಬರಹವೇ ಚೇಂಜ್: ಹಣವೋ ಹಣ, ಇನ್ನೇನಿದ್ದರೂ ಸಿರಿವಂತಿಕೆ ಯೋಗ!

Sat, 09 Sep 2023-8:09 am,

ಜಾತಕದಲ್ಲಿ ಬುಧನು ಶುಭ ಸ್ಥಾನದಲ್ಲಿದ್ದರೆ, ಅಂತಹ ಜನರು ಮಹಾನ್ ಉದ್ಯಮಿಗಳು, ಸಂವಹನ ಕಲೆಯಲ್ಲಿ ಪ್ರವೀಣರು ಮತ್ತು ತರ್ಕಶಾಸ್ತ್ರದ ಮಾಸ್ಟರ್ಸ್ ಆಗಿರುತ್ತಾರೆ. ಒಂದು ವೇಳೆ, ಅಶುಭ ಸ್ಥಾನದಲ್ಲಿದ್ದರೆ ವ್ಯವಹಾರ ಮತ್ತು ಉದ್ಯೋಗದಲ್ಲಿ ನಷ್ಟ ಮತ್ತು ವೈಫಲ್ಯ ಇರುತ್ತದೆ.

ಇನ್ನು ಸೆಪ್ಟೆಂಬರ್ 16, 2023 ರಿಂದ ಬುಧವು ಸಿಂಹ ರಾಶಿಯಲ್ಲಿ ನೇರವಾಗಿ ಚಲಿಸುತ್ತದೆ. ಬುಧನ ನೇರ ಚಲನೆಯು ಕೆಲವು ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಆ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿ- ಬುಧ ಗ್ರಹದ ನೇರ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಜನರು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹೊಸ ಉದ್ಯೋಗ ಸಿಗಬಹುದು.

ಮಿಥುನ - ಮಿಥುನ ರಾಶಿಯ ಅಧಿಪತಿ ಬುಧ ಗ್ರಹ, ಈ ಕಾರಣದಿಂದ ಈ ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತಾನೆ ಬುಧದೇವ. ವೃತ್ತಿಜೀವನದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಉದ್ಯೋಗ ಬದಲಾಯಿಸುವ ಆಸೆ ಈಡೇರಬಹುದು. ವ್ಯಾಪಾರಸ್ಥರಿಗೆ ಈ ಸಮಯವು ವಿಶೇಷವಾಗಿ ಅನುಕೂಲಕರವಾಗಿರುತ್ತದೆ.

ಸಿಂಹ - ಬುಧದ ನೇರ ಚಲನೆಯು ಸಿಂಹ ರಾಶಿಯವರಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಗೌರವ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ.

ತುಲಾ- ಬುಧ ನೇರ ಚಲನೆಯಿಂದ ತುಲಾ ರಾಶಿಯವರಿಗೆ ತುಂಬಾ ಪ್ರಯೋಜನವಾಗಲಿದೆದ. ವೃತ್ತಿಜೀವನದಲ್ಲಿ ನೀವು ಸುವರ್ಣ ಅವಕಾಶಗಳನ್ನು ಪಡೆಯುತ್ತೀರಿ. ಸರಿಯಾದ ನಿರ್ಧಾರವು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿದೆ. ವ್ಯಾಪಾರದಲ್ಲಿ ಉನ್ನತಿ ಇರಲಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link