30 ವರ್ಷಗಳ ಬಳಿಕ ಶನಿ ಕೃಪೆಯಿಂದ ಶಶ ಮಹಾಪುರುಷ ರಾಜಯೋಗ, ಈ ರಾಶಿಗಳ ಜನರಿಗೆ ಶ್ರೀಗಣೇಶ ಕರುಣಿಸಲಿದ್ದಾನೆ ಅಪಾರ ಧನಸಂಪತ್ತು!
Shani Shasha Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಶನಿ ಮಹಾರಾಜನ ಕೃಪೆಯಿಂದ ಶಶ ಮಹಾಪುರುಷ ರಾಜಯೋಗ ನಿರ್ಮಾಣಗೊಂಡಿದೆ. ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಈ ಯೋಗ ನಿರ್ಮಾಣದಿಂದ ಒಟ್ಟು ಮೂರು ರಾಶಿಗಳ ಜನರಿಗೆ ಶ್ರೀಗಣೇಶ ಕೃಪೆಯಿಂದ ಅಪಾರ ಸಿರಿಸಂಪತ್ತು ಪ್ರಾಪ್ತಿಯಾಗಲಿದೆ.
ಕುಂಭ ರಾಶಿ- ಶಶ ರಾಜಯೋಗ ನಿರ್ಮಾಣ ನಿಮ್ಮ ಪಾಲಿಗೆ ಅಪಾರ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ರಾಶಿಯ ಅಧಿಪತಿಯಾಗಿ ಸ್ವರಾಶಿಯಲ್ಲಿ ಸಂಚರಿಸುತ್ತ ಶಶ ಮಹಾಪುರುಷ ರಾಜಯೋಗ ನಿರ್ಮಿಸಿದ್ದಾನೆ. ಇದರಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ಅಪಾರ ವೃದ್ಧಿ ಕಂಡುಬರಲಿದೆ. ಇದಲ್ಲದೆ ಈ ಅವಧಿಯಲ್ಲಿ ನಿಮ್ಮಲ್ಲಿ ಅಪಾರ ಉರ್ಜೆ ಇರಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಮನೆಯಲ್ಲಿ ಸುಖ ಸೌಕರ್ಯಗಳ ವೃದ್ಧಿಯಾಗಲಿದೆ. ಗಣ್ಯ ವ್ಯಕ್ತಿಗಳ ಜೊತೆಗೆ ನಿಮ್ಮ ಒಡನಾಟ ಇರಲಿದೆ. ಬಾಳಸಂಗತಿಯ ಉನ್ನತಿಯ ಯೋಗವಿದೆ. ಪಾಟ್ನರ್ಶಿಪ್ ಕೆಲಸದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಹಲವು ಮಹತ್ವಪೂರ್ಣ ಯೋಜನೆಗಳು ಕೈಗೂಡಲಿವೆ.
ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಶಶ ಮಹಾಪುರುಷ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು. ಇದು ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲತೆಗಳನ್ನು ತಂದುಕೊಡಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶ ಪ್ರವಾಸದ ಅಧಿಕ ಯೋಗವಿದೆ. ಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಇನ್ನೊಂದೆಡೆ ನಿಮ್ಮ ದೈನಂದಿನ ಆದಾಯ ಹೆಚ್ಚಾಗಲಿದೆ. ಕುಟುಂಬಕ್ಕಾಗಿ ನೀವು ಮಾಡುವ ಎಲ್ಲಾ ಯೋಜನೆಗಳು ಯಶಸ್ಸನ್ನು ಕಾಣಲಿವೆ. ನಿರುದ್ಯೋಗಿಗಳಿಗೆ ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಇಂಕ್ರಿಮೆಂಟ್-ಪ್ರಮೋಷನ್ ಸಿಗುವ ಸಾಧ್ಯತೆ ಇದೆ.
ವೃಷಭ ರಾಶಿ: ಶನಿ ದೇವ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಶಶ ಮಹಾಪುರುಷ ರಾಜಯೋಗ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿವೆ. ಕೆಲಸಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಜೀವನೋಪಾಯದ ಸೌಕರ್ಯಗಳಲ್ಲಿ ವೃದ್ಧಿಯ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ತಮ್ಮ ಸದ್ಯದ ನೌಕರಿಯಲ್ಲಿ ಪದೋನ್ನತಿ, ವೇತನ ವೃದ್ಧಿಯ ಎಲ್ಲಾ ಅವಕಾಶಗಳು ಸಿಗಲಿವೆ, ವ್ಯಾಪಾರ ವರ್ಗದ ಜನರಿಗೆ ವ್ಯಾಪಾರದಲ್ಲಿ ಧನಲಾಭದ ಎಲ್ಲಾ ಸಾಧ್ಯತೆಗಳಿವೆ. ಅದೃಷ್ಟದ ಸಾಕಷ್ಟು ಬೆಂಬಲ ಇರುವುದರಿಂದ ಸರ್ಕಾರಿ ನೌಕರಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)