Airtel, BSNL, Jio ಮತ್ತು Viಯಲ್ಲಿ ತುಂಬಾ ಅಗ್ಗದ ಪ್ಲಾನ್..! 12 ಜಿಬಿ ಡೇಟಾ ಜೊತೆಗಿದೆ ಈ ಲಾಭ.!

Sun, 14 Feb 2021-9:39 am,

Airtel ರಿಚಾರ್ಜ್ ಪ್ಲಾನ್:  ಏರ್ ಟೆಲ್ನೆಲ್ಲಿ 28 ದಿನಗಳ ವ್ಯಾಲಿಡಿಟಿಯಲ್ಲಿ 45 ರೂಪಾಯಿ, 49 ರೂಪಾಯಿ ಮತ್ತು 79 ರೂಪಾಯಿ ರಿಚಾರ್ಜ್ ಪ್ಲಾನ್ ಲಭ್ಯವಿದೆ.  ಏರ್ ಟೆಲ್ನೆಲ್ಲಿ 48 ರೂಪಾಯಿ ಡೇಟಾ ಪ್ಲಾನಿನಲ್ಲಿ 3ಜಿಬಿ ಡೇಟಾ ಸಿಗಲಿದೆ. ಇದರ ವ್ಯಾಲಿಡಿಟಿ 28 ದಿನಗಳು.  ಇದರಲ್ಲಿ ನೀವು 98 ರೂಪಾಯಿ ಡೇಟಾ ಪ್ಲಾನ್ ತೆಗೆದುಕೊಂಡರೆ, 12 ಜಿಬಿ ಡೇಟಾ  ಸಿಗಲಿದೆ. 

Jio ರಿಚಾರ್ಜ್ ಪ್ಲಾನ್:  11 ರೂಪಾಯಿ ರಿಚಾರ್ಜ್ ಪ್ಲಾನಿನಲ್ಲಿ ಹತ್ತು ರೂಪಾಯಿ ತನಕ ಟಾಕ್ ಟೈಂ ಸಿಗಲಿದೆ. ಇದಲ್ಲದೆ ಜಿಯೋದಲ್ಲಿ 20 ರೂ, 50 ರೂ.,  100 ರೂ. ಟಾಕ್ ಟೈಂ ಸಿಗೋ ಪ್ಲಾನ್ ಕೂಡಾ ಆಯ್ಕೆ ಮಾಡಿಕೊಳ್ಳಬೇಕು. ಜಿಯೋ ಡೇಟಾ ಪ್ಲಾನ್ ಬಗ್ಗೆ ಮಾತನಾಡುವುದಾದರೆ, 11 ರೂ, 21 ರೂ. 51 ರೂ, 101 ರೂ.  ಪ್ಲಾನ್ ಲಭ್ಯವಿದೆ. ಇದರಲ್ಲಿ 1ಜಿಬಿ, 2 ಜಿಬಿ, 6ಜಿಬಿ ಮತ್ತು 12 ಜಿಬಿ ಡೇಟಾ ಸಿಗಲಿದೆ. 

Vi ರಿಚಾರ್ಜ್ ಪ್ಲಾನ್: ರೂಪಾಯಿ 49, 59, 65, 79 ಮತ್ತು 85 ರೂಪಾಯಿ ಪ್ಲಾನ್ ವಿಐಯಲ್ಲಿ ಲಭ್ಯವಿದೆ. 28 ದಿನ ಟಾಕ್ ಟೈಂ ವಾಲಿಡಿಟಿ ಸಿಗಲಿದೆ.  400 ಎಂಬಿ ಡೇಟಾ ಮತ್ತು ಟಾಕ್ ಟೈಂ  ಆಫರ್ ಕೂಡಾ ಇದರೊಂದಿಗಿದೆ. ವಿಐ 48 ರೂಪಾಯಿ ಡೇಟಾ ಪ್ಲಾನಿನಲ್ಲಿ 28 ದಿನದ ಟಾಕ್ ಟೈಂ ಮತ್ತು 48 ಜಿಬಿ ಡೇಟಾ ಸಿಗಲಿದೆ. 98 ರೂಪಾಯಿ ಆಫರಿನಲ್ಲಿ ಡಬ್ಬಲ್ ಡೇಟಾ ಸಿಗಲಿದೆ. ಇದರಲ್ಲಿ 28 ದಿನಗಳ ವಾಲಿಡಿಟಿ ಜೊತೆ 12 ಜಿಬಿ ಡೇಟಾ ಸಿಗಲಿದೆ.

BSNL ಪ್ಲಾನ್ :  ಬಿಎಸ್ ಎನ್ ಎಲ್ ನಲ್ಲಿ  94 ಮತ್ತು 95 ರೂಪಾಯಿ ರಿಚಾರ್ಜ್ ಪ್ಲಾನಿನಲ್ಲಿ 3 ಜಿಬಿ ಹೈಸ್ಪೀಡ್ ಡೇಟಾ ಪ್ಲಾನ್ ಸಿಗುತ್ತಿದೆ. 90 ದಿನಗಳ ವ್ಯಾಲಿಡಿಟಿ ಇದೆ. ಈ ಪ್ಲಾನ್ ದೆಹಲಿ ಮತ್ತು ಮುಂಬಯಿಗೆ ಮಾತ್ರ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link