Airtel ನೀಡುತ್ತಿದೆ ಫ್ರೀ ಡೇಟಾ ಕೂಪನ್..! ಈ ಆಕರ್ಷಕ ಪ್ಲಾನ್ ಬಗ್ಗೆ ತಿಳಿದುಕೊಳ್ಳಿ

Mon, 15 Feb 2021-10:51 am,

ಆರು ಜಿಬಿ ತನಕ ಫ್ರೀ :  ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ Airtel ತನ್ನ ಗ್ರಾಹಕರಿಗೆ ಉಚಿತ  ಡೇಟಾ ಕೂಪನ್ ಆಫರ್ ನೀಡುತ್ತಿದೆ. ಹೊಸ ಆಫರ್ ಪ್ರಕಾರ Airtel ತನ್ನ ಗ್ರಾಹಕರಿಗೆ 6 ಜಿಬಿ ಡೇಟಾ ಉಚಿತವಾಗಿ (Free Data) ನೀಡುತ್ತಿದೆ. 

ಯಾವುದೇ 28 ದಿನಗಳ ವ್ಯಾಲಿಡಿಟಿ ಪ್ಲಾನ್ ಜೊತೆ ಈ ಆಫರ್ :  ಲಭ್ಯ ಮಾಹಿತಿಗಳ ಪ್ರಕಾರ Airtel 28 ದಿನಗಳ ವಾಲಿಡಿಟಿ ಇರುವ  ಎಲ್ಲಾ ರಿಚಾರ್ಜ್ ಪ್ಲಾನ್ ಗಳ  ಜೊತೆ 2 ಜಿಬಿ ಡೇಟಾ ಫ್ರೀಯಾಗಿ ನೀಡುತ್ತಿದೆ. ಒಂದು ಜಿಬಿ ಡೇಟಾ (1 GB Data) ಸಿಗುವ ಎರಡು ಕೂಪನ್ ಗಳು  ನಿಮಗೆ ಸಿಗಲಿವೆ.   

 4 ಜಿಬಿ ಡೇಟಾ ಕೂಡಾ ಉಚಿತವಾಗಿ ಸಿಗಬಹುದು:  56 ದಿನಗಳ ಯಾವುದೇ ರಿಚಾರ್ಜ್ ಪ್ಲಾನ್ ಖರೀದಿಸಿದರೆ, 4 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಒಂದು ಜಿಬಿಯ ನಾಲ್ಕು ಕೂಪನ್ಸ್ ಸಿಗಲಿದೆ.   

84 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ನಲ್ಲಿ ಹೆಚ್ಚು ಲಾಭ : ಗ್ರಾಹಕರನ್ನು ಆಕರ್ಷಿಸುವಲ್ಲಿ Airtel ಹಿಂದೆ ಬಿದ್ದಿಲ್ಲ. 84 ದಿನಗಳ ವ್ಯಾಲಿಡಿಟಿಯ ಪ್ಲಾನಿನಲ್ಲಿ ಇನ್ನೂ ಹೆಚ್ಚು ಆಕರ್ಷಕ ಆಫರ್ಗ್ಳಿವೆ. 84 ದಿನಗಳ ವ್ಯಾಲಿಡಿಟಿಯ ಪ್ಲಾನ್ ಖರೀದಿಸಿದರೆ, 6 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಗ್ರಾಹಕರಿಗೆ 1ಜಿಬಿಯ 6 ಕೂಪನ್ ಸಿಗಲಿದೆ. 

Airtel ಥ್ಯಾಂಕ್ಸ್ ಆಪ್ ನಿಂದ  ರಿಚಾರ್ಜ್ ಮಾಡಬೇಕು: ಈ ಆಫರ್ ನಿಮಗೆ ಸಿಗಬೇಕಾದರೆ ನೀವು ಈ ಎಲ್ಲಾ ರಿಚಾರ್ಜ್ ಗಳನ್ನು  Airtel Thanks app ಮೂಲಕ ಮಾಡಬೇಕು. ಈ ಆಪ್ ನಲ್ಲಿಯೇ ಈ ಎಲ್ಲಾ offer’s ಲಭ್ಯವಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link