ʼನಾವು ಈಗಲೂ ಒಟ್ಟಿಗೆ ಇದ್ದೇವೆ..ʼ ಡಿವೋರ್ಸ್‌ ವದಂತಿ ಮಧ್ಯೆ ವಿವೇಕ್ ಒಬೆರಾಯ್ ಜೊತೆಗಿನ ಸಂಬಂಧದ ಬಗ್ಗೆ ರೈ ಮೌನ ಮುರಿದ ಐಶ್ವರ್ಯ ರೈ!

Tue, 03 Sep 2024-10:13 am,

ಐಶ್ವರ್ಯಾ ರೈ ತನ್ನ ಮದುವೆಗೆ ಮೊದಲಿನ ಅಫೇರ್ಸ್‌ಗಳಿಂದಲೂ ಚರ್ಚೆಯ ವಿಷಯವಾಗಿ ಉಳಿದಿದ್ದಾರೆ... ಮೊದಲನೆಯದಾಗಿ, ಅವರು ಸಲ್ಮಾನ್ ಖಾನ್ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದರು..    

ಬಳಿಕ ಐಶ್ವರ್ಯಾ ರೈ ಮತ್ತು ವಿವೇಕ್ ಒಬೆರಾಯ್ ಪರಸ್ಪರ ಡೇಟ್ ಮಾಡಿದ್ದಾರೆ. ವಾಸ್ತವವಾಗಿ, ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆ ಬ್ರೇಕಪ್‌ ಮಾಡಿಕೊಂಡಾಗ.. ವಿವೇಕ್ ಅವರೊಂದಿಗಿನ ಪ್ರಣಯವು ಅರಳಿತು.   

ವಾಸ್ತವವವಾಗಿ ಐಶ್ವರ್ಯ ತಂಟೆಗೆ ಹೋಗದಂತೆ ವಿವೇಕ್ ಒಬೆರಾಯ್ಗೆ ಒಮ್ಮೆ ಸಲ್ಮಾನ್ ಖಾನ್ ಬೆದರಿಕೆ ಹಾಕಿದ್ದರು ಎನ್ನಲಾಗಿತ್ತು..   

 ಡಿಸೆಂಬರ್ 2004ರಲ್ಲಿ ನೀಡಿದ ಸಂದರ್ಶನದಲ್ಲಿ, ವಿವೇಕ್ ಮತ್ತು ನಾನು ಇನ್ನೂ ಒಟ್ಟಿಗೆ ಇದ್ದೇವೆ ಎಂದು ಐಶ್ವರ್ಯಾ ರೈ ಹೇಳಿದ್ದರು. ಸದ್ಯ ಈ ಹೇಳಿಕೆ ಇದೀಗ ವೈರಲ್‌ ಆಗುತ್ತಿದೆ..   

ಐಶ್ವರ್ಯಾ ಮತ್ತು ವಿವೇಕ್ ಬೇರ್ಪಡಲು ಸಲ್ಮಾನ್ ಖಾನ್ ಅವರು ನಟನಿಗೆ ಬೆದರಿಕೆ ಹಾಕಿದ್ದ ಕಾರಣ ಎಂದು ಹೇಳಲಾಗುತ್ತದೆ.   

ಆದರೆ, ಬಳಿಕ ಐಶ್ವರ್ಯಾ ಎಲ್ಲವನ್ನೂ ಮರೆತು ಅಭಿಷೇಕ್ ಬಚ್ಚನ್ ರನ್ನು ಮದುವೆಯಾದರು ಮತ್ತು ವಿವೇಕ್ ಕೂಡ ಪ್ರಿಯಾಂಕಾ ಆಳ್ವಾ ಅವರನ್ನು ವಿವಾಹವಾದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link