ವಿಚ್ಛೇದನ ವದಂತಿಗಳು ಬುಗಿಲೆದ್ದಮೇಲೂ ಐಶ್ವರ್ಯ-ಅಭಿಷೇಕ್ ಅಧಿಕೃತ ಘೋಷಣೆ ಮಾಡದಿರುವುದು ಇದೊಂದೆ ಕಾರಣಕ್ಕೆ!
![](https://kannada.cdn.zeenews.com/kannada/sites/default/files/2024/10/26/459617-aishwarya-rai-3.jpg?im=FitAndFill=(500,286))
Aishwarya rai Abhishek Bachchan: ಬಾಲಿವುಡ್‌ನ ಪವರ್ ಕಪಲ್ ಎಂದೆ ಕರೆಸಿಕೊಳ್ಳುವ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿಬಿಟ್ಟಿವೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ಅವರರೊಂದಿಗೆ ಅಫೇರ್ ಹೊಂದಿರುವದೇ ಈ ಜೋಡಿ ದೂರಾಗಲು ಕಾರಣ ಎಂಬ ಚರ್ಚೆ ಶುರುವಾಗಿದ್ದು, ಇಷ್ಟಾದಮೇಲೂ ಈ ಇಬ್ಬರು ಯಾಕೆ ಇನ್ನೂ ವಿಚ್ಛೇದನದ ಕುರಿತು ಅಧಿಕೃತ ಘೋಷಣೆ ನೀಡಿಲ್ಲ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.
![](https://kannada.cdn.zeenews.com/kannada/sites/default/files/2024/10/26/459616-aishwarya-rai-8.jpg?im=FitAndFill=(500,286))
ಹೌದು, ಅಭಿಷೇಕ್ ಅವರು ತಮ್ಮ ಪತ್ನಿ ಐಶ್ವರ್ಯ ರೈ ಅವರನ್ನು ಬಿಟ್ಟು, ನಟಿ ನಿಮೃತ್ ಕೌರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ, ಇದೇ ಕಾರಣದಿಂದಾಗಿ ನಟಿ ಐಶ್ವರ್ಯ ರೈ ಅಭಿಷೇಕ್ ಅವರನ್ನು ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.
![](https://kannada.cdn.zeenews.com/kannada/sites/default/files/2024/10/26/459615-aishwarya-rai-6.jpg?im=FitAndFill=(500,286))
ವಿಚ್ಛೇದನ ವದಂತಿಗಳು ಶುರುವಾದ ಆರಂಭದಲ್ಲಿ ಈ ಜೋಡಿ ವಿಚ್ಛೇದನ ಪಡೆಯಲು ಕಾರಣ ಜಯಾ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರ ಸಹೋದರಿ ಶ್ವೇತಾ ಬಚ್ಚನ್ ಎಂದು ಹೇಳಲಾಗಿತ್ತು. ಆದರೆ, ಇದೀಗ ಈ ಸ್ಟೋರಿಗೆ ಟ್ವಿಸ್ಟ್ ಸಿಕ್ಕಿದೆ.
ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಈ ಜೋಡಿ ಯಾವುದೇ ಸಮಾರಂಭ ಅಥವಾ ಕಾರ್ಯಕ್ರಮಗಳಲ್ಲಾಗಲಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಒಂದೆಡೆ ಐಶ್ವರ್ಯ ಎಲ್ಲಾ ಕಾರ್ಯಕ್ರಮಗಳಿಗೂ ತಮ್ಮ ಮಗಳಾದ ಆರಾಧ್ಯ ಬಚ್ಚನ್ ಅವರೊಂದಿಗೆ ಹೋಗುತ್ತಿದ್ದರೆ. ಮತ್ತೊಂದೆಡೆ ಅಭಿಷೇಕ್ ಬಚ್ಚನ್ ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ, ಈ ನಡುವೆ ಈ ಜೋಡಿ ವಿಚ್ಛೇದನ ವದಂತಿಗಳು ತಾರಕಕ್ಕೇರಿದೆಯಾದರೂ, ಈ ಇಬ್ಬರು ಈ ವಿಷಯದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಯಾಕೆ ಈ ಜೋಡಿ ಇನ್ನೂ ಈ ಕುರಿತು ಮಾತನಾಡುತ್ತಿಲ್ಲ ಎನ್ನು ಅನುಮಾನ ಹಲವರನ್ನು ಕಾಡುತ್ತಿದೆ.
ಇನ್ನೊಂದೆಡೆ, ಡಿವೋರ್ಸ್‌ನ ಎಲ್ಲಾ ಕಾರ್ಯಗಳು ಹಾಗೂ ವಿಚಾರಣೆಗಳು ನಡೆಯುತ್ತಿರುವ ಕಾರಣ ಕೋರ್ಟ್‌ನಿಂದ ತೀರ್ಪು ಬರುವುದಕ್ಕಾಗಿ ಈ ಜೋಡಿ ಕಾಯುತ್ತಿದ್ದಾರೆ ಎನ್ನು ಸುದ್ದಿ ಹೊರಬರುತ್ತಿದೆ.
ಸದ್ಯ ಇದೀಗ ಹೊರಬರುತ್ತಿರುವ ಮಾಹಿತಿಗಳು ಊಹಾಪೋಹಗಳಾ? ಅಥವಾ ವದಂತಿಗಳಾ? ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ಈ ಜೋಡಿಯ ನಡುವೆ ಏನು ನಡೆಯುತ್ತಿದೆ ಎಂಬುದು ಅವರೇ ಕುದ್ದಾಗಿ ಮಾಧ್ಯಮದ ಮುಂದೆ ಬಂದು ಹೇಳುವವರೆಗೂ ಗೊತ್ತಾಗುವುದಿಲ್ಲ.
ಸದ್ಯ ಟ್ರೋಲ್ ಪೇಜ್‌ನವರು ನಿಮೃತ್ ಕೌರ್ ಅವರ ಅಪೇರ್ ಕುರಿತು ಅಭಿಷೇಕ್ ಬಚ್ಚನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದು, ಮುಂದೆ ಈ ವಿಚಾರ ಯಾವೆಲ್ಲಾ ತಿರುವುಗಳನ್ನು ಪಡೆಯಲಿದೆ ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ.