ವಿಚ್ಛೇದನದ ಕುರಿತು ಮಾತನಾಡಿದವರಿಗೆ ಟಾಂಗ್ ಕೊಟ್ರು ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!! ಶೀಘ್ರವೇ ಡಿವೋರ್ಸ್ ಎಂದವರೆಲ್ಲಾ ಬ್ರೇಕಿಂಗ್ ಸುದ್ದಿ ಕೇಳಿ ಗಪ್ ಚುಪ್?!
Aishwarya Rai And Abhishek Bachchan : ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಬಿ ಟೌನ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಈ ಜೋಡಿ ವಿಚ್ಚೇದನ ಪಡೆದುಕೊಳ್ಳುವುದು ಪಕ್ಕಾ ಎಂದುಕೊಂಡವರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
ಅಂಬಾನಿ ಮದುವೆಯಿಂದ ಹಿಡಿದು ಇಲ್ಲಿಯ ವರೆಗೂ ಎಲ್ಲೂ ಕೂಡ ಜೊತೆಯಲ್ಲಿ ಕಾಣಿಸಿಕೊಳ್ಳದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ಶೀಘ್ರವೇ ವಿಚ್ಚೇದನ ಪಡೆಯಲಿದ್ದಾರೆ ಎನ್ನು ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಹಾಟ್ ಟಾಪಿಕ್ ಆಗಿದ್ದವು.
ಈ ಜೋಡಿ ಕಳೆದ ಕೆಲವು ತಿಂಗಳುಗಳಿಂದ ಜೊತೆಯಾಗಿ ಕಾಣಿಸಿಕೊಳ್ಳದೆ ಇದ್ದದ್ದು, ಈ ಚರ್ಚೆಗೆ ಮತ್ತಷ್ಟು ಉತ್ತೇಜನವನ್ನು ನೀಡಿತ್ತು. ಇದರ ಜೊತೆಗೆ ಈ ಇಬ್ಬರು ದೂರವಾಗುವುದರ ಹಿಂದಿನ ಹಲವು ಕಾರಣಗಳು ಕೂಡ ಸಿಕ್ಕಾಪಟ್ಟೆ ಅದ್ದು ಮಾಡಿದ್ದವು.
ಒಂದು ಕಡೆ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಈ ಜೋಡಿ ದಾಂಪತ್ಯ ಮುರಿಯಲು ಕಾರಣ ಎಂದು ಕೆಲವರು ವದಂತಿಗಳು ಹೇಳಿದರೆ, ಇನೂ ಕೆಲವು ವದಂತಿಗಳಂತೂ ಅಭಿಷೇಕ್ ಬಚ್ಚನ್ ಅವರಿಗೆ ನಿಮೃತ್ ಕೌರ್ ಅವರೊಂದಿಗೆ ಅಫೇರ್ ಇದ್ದ ಕಾರಣವೇ ಐಶ್ವರ್ಯ ರೈ ಪತಿಯಿಂದ ದೂರ ಸರಿಯಲು ಕಾರಣ ಎಂಬ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಇನ್ನೂ, ಇತ್ತೀಚೆಗೆ ಅಂದ್ರೆ ನ.1ರಂದು ಐಶ್ವರ್ಯ ರೈ ಅವರ 51 ನೇ ಹುಟ್ಟುಬ್ಬದ ಅಂಗವಾಗಿ ನಟಿ ಐಶ್ವರ್ಯ ರೈ ಅವರಿಗೆ ಹಲವು ಸೆಲೆಬ್ರಿಟಿಗಳು ಶುಭಾಷಯಗಳ ಮಹಾಪೂರವನ್ನೆ ಹರಿಸಿದ್ದರು. ಆದರೆ, ಬಚ್ಚನ್ ಕುಟುಂಬದವರು ಐಶ್ವರ್ಯ ರೈ ಅವರಿಗೆ ವಿಷ್ ಮಾಡದೆ ಇದ್ದದ್ದು, ಅಭಿಮಾನಿಗಳ ಕಣ್ಣಿಗೆ ಗುರಿಯಾಗುವಂತೆ ಮಾಡಿತ್ತು.
ಈ ಘಟನೆಯ ನಂತರ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಕೂಡ ದೂರ ಆಗುವುದು ಪಕ್ಕಾ ಎಂದು ಅಭಿಮಾನಿಗಳು ಫಿಕ್ಸ್ ಆಗಿದ್ದರು, ಆದರೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಲೆದು ಈ ಜೋಡಿ ಶಾಕ್ ಕೊಡಲು ಸಜ್ಜಾಗಿದ್ದಾರೆ.
ಈ ಜೋಡಿ ಗ್ರೇ ಡಿವೋರ್ಸ್ ಪಡೆಯುತ್ತಾರೆ ಎಂದುಕೊಳ್ಳುತ್ತಿರುವ ಬೆನ್ನಲ್ಲೆ, ಜೋಡಿ ಜೊತೆಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ.
ಹೌದು, ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಸಿನಿಮಾವೊಂದನ್ನು ನಿರ್ಮಿಸುವ ಪ್ಲಾನ್‌ನಲ್ಲಿದ್ದು, ಈ ಸಿನಿಮಾದಲ್ಲಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೊತೆಯಾಗಿ ನಟಿಸಲಿದ್ದಾರಂತೆ.
ಈ ಮುಂಚೆ ಮಣಿರತ್ನಂ ಅವರ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದ ಈ ಜೋಡಿ, ಇದೀಗ ಮೂರನೇ ಸಿನಿಮಾದ ಮೂಲಕ ಜೊತೆಯಾಗಿ ಬಂದು ಡಿವೋರ್ಸ್ ಎಂದವರ ಮುಂದೆ ಜೋಡಿಯಾಗಿ ಬಂದು ಶಾಕ್ ಕೊಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ.
2007ರಲ್ಲಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಕೂಡ ಮಣಿರತ್ನಂ ನಿರ್ದೇಶನದ ಗುರು ಎಂಬ ಸಿನಿಮಾದಲ್ಲಿ ನಟಿಸಿದ್ದರು, 2010ರಲ್ಲಿ ಈ ಜೋಡಿ ರಾವಣ ಎಂಬ ಸಿನಿಮಾದಲ್ಲಿ ಕೂಡ ಜೊತೆಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಈ ಜೋಡಿ ಮೂರನೇ ಸಿನಿಮಾಕ್ಕೆ ಮಣಿರತ್ನಂ ಅವರೊಂದಿಗೆ ಕೈ ಜೋಡಿಸಲು ಮುಂದಾಗಿದೆ.
ಈ ಸುದ್ದಿ ನಿಜವಾದರೆ, ಇಷ್ಟು ದಿನ ಈ ಜೋಡಿ ವಿಚ್ಚೇದನ ಪಡೆಯಲಿದ್ದಾರೆ ಎಂದು ವದಂತಿಗಳೆಲ್ಲಾ ಸೈಲೆಂಟ್ ಆಗುತ್ತೆ, ಈ ಜೋಡಿ ಡಿವೋರ್ಸ್ ಖಂಡಿತ ಎಂದವರೆಲ್ಲಾ ಗಪ್ ಚುಪ್ ಆಗ್ತಾರೆ.