ಐಶ್ವರ್ಯಾ ರೈ ಮೊದಲು ಮದುವೆಯಾಗಿದ್ದು ಅಭಿಷೇಕ್ ಬಚ್ಚನ್ ಜೊತೆಯಲ್ಲವಾ? ಇದು ಎರಡನೇ ಮದುವೆನಾ! ಅಮಿತಾಬ್ ಗೂ ಗೊತ್ತಿತ್ತಂತೆ ಆ ವಿಚಾರ!!
ಐಶ್ವರ್ಯಾ ರೈ ಬಚ್ಚನ್ ಜೊತೆ ಅಭಿಷೇಕ್ ಬಚ್ಚನ್ 2007 ರಲ್ಲಿ ಮದುವೆ ಆದರು. ಮುಂಬೈನಲ್ಲಿರುವ ಅಮಿತಾಬ್ ಬಚ್ಚನ್ ಮನೆಯಲ್ಲಿ ವಿವಾಹ ನಡೆಯಿತು.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ಸಮಯದಲ್ಲಿ ಕೆಲವು ವದಂತಿಗಳು ಹುಟ್ಟಿಕೊಂಡವು. ಆ ವದಂತಿಗಳ ಇಂದಿಗೂ ಸದ್ದು ಮಾಡುತ್ತಿವೆ.
ಐಶ್ವರ್ಯಾ ರೈ ಮದುವೆ ಮೊದಲು ನಡೆದಿದ್ದು ಅಭಿಷೇಕ್ ಬಚ್ಚನ್ ಜೊತೆ ಅಲ್ಲ ಎಂಬ ಸಂಗತಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗಲೂ ಈ ವದಂತಿ ಜೀವಂತವಾಗಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಯ ನಡುವೆ ಈ ಹಳೆಯ ವಿಚಾರ ಮತ್ತೆ ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಅಮಿತಾಬ್ ಬಚ್ಚನ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದರು. ಆ ಸಂಗತಿ ನನಗೆ ಗೊತ್ತು. ಆದರೆ ಸತ್ಯ ಎಂದಿಗೂ ಸುಳ್ಳಾಗಲ್ಲ ಎಂದು ಬಿಗ್ ಬಿ ಹೇಳಿದ್ದರು.
ಅಭಿಷೇಕ್‌ಗೂ ಮುನ್ನ ಐಶ್ವರ್ಯಾ ರೈ ಮದುವೆ ಮರದ ಜೊತೆ ನಡೆದಿತ್ತಂತೆ. ಐಶ್ವರ್ಯಾ ರೈ ಜಾತಕದಲ್ಲಿದ್ದ ಮಂಗಳ ದೋಷವೇ ಇದಕ್ಕೆ ಕಾರಣವಂತೆ. ಇದೇ ಕಾರಣಕ್ಕೆ ಮೊದಲು ಮರದ ಜೊತೆ ಮದುವೆ ಆಗಿ ಬಳಿಕ ಅಭಿಷೇಕ್ ಜೊತೆ ಸಪ್ತಪದಿ ತುಳಿದರಂತೆ.
ಅಮಿತಾಬ್ ಬಚ್ಚನ್ ಈ ವಿಚಾರವಾಗಿ ಮಾತನಾಡಿದ್ದರು. ಮೂಢನಂಬಿಕೆಯನ್ನು ನಮ್ಮ ಕುಟುಂಬ ನಂಬಲ್ಲ. ಆ ಮರ ಎಲ್ಲಿದೆ? ದಯವಿಟ್ಟು ನನಗೂ ಒಮ್ಮೆ ತೋರಿಸಿ. ಐಶ್ವರ್ಯಾ ಮದುವೆಯಾದ ಏಕೈಕ ವ್ಯಕ್ತಿ ನನ್ನ ಮಗ. ಸತ್ಯ ಎಂದಿಗೂ ಸುಳ್ಳಾಗಲ್ಲ ಎಂದು ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಐಶ್ವರ್ಯಾ ರೈ ಬಚ್ಚನ್ ಸಹ ಹಲವು ಸಂದರ್ಶನಗಳಲ್ಲಿ ಮರದೊಟ್ಟಿಗೆ ಮದುವೆ ಆದ ಈ ವದಂತಿ ಸುಳ್ಳು ಎಂದು ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಕೂಡ ಇಂತಹ ವದಂತಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ. ಆದರೂ ಇಂದಿಗೂ ಅನೇಕರು ಈ ವದಂತಿಯ ಬಗ್ಗೆ ಚರ್ಚಿಸುತ್ತಲೇ ಇದ್ದಾರೆ.