ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್ ಗೂ ಗೊತ್ತಿತ್ತು ಈ ವಿಚಾರ!!
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ 2007 ರಲ್ಲಿ ವಿವಾಹವಾದರು. ಮುಂಬೈನಲ್ಲಿರುವ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಈ ವಿವಾಹ ಅದ್ಧೂರಿಯಾಗಿ ಜರುಗಿತು.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ಮದುವೆ ಈ ಸಮಯದಲ್ಲಿ ಅನೇಕ ವದಂತಿಗಳು ಹುಟ್ಟಿಕೊಂಡಿದ್ದವು. ಅವುಗಳಲ್ಲಿ ಇಂದಿಗೂ ಸದ್ದು ಮಾಡುತ್ತಿರುವುದೆಂದರೆ ಅದು ಐಶ್ವರ್ಯಾ ರೈ ಮೊದಲ ಮದುವೆ ವಿಚಾರ.
ಐಶ್ವರ್ಯಾ ರೈ ಮೊದಲು ಮದುವೆಯಾದದ್ದು ಅಭಿಷೇಕ್ ಬಚ್ಚನ್ ಜೊತೆ ಅಲ್ಲ ಎಂಬ ಮಾತು ಆ ಕಾಲದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತು. ಅಭಿಷೇಕ್ ಬಚ್ಚನ್‌ಗೂ ಮುನ್ನವೇ ಐಶ್ವರ್ಯಾ ಒಂದು ಮದುವೆ ನಡೆದಿದೆ ಎಂದು ವದಂತಿ ಹಬ್ಬಿತ್ತು.
ಐಶ್ವರ್ಯಾ ರೈ ಮೊದಲ ಮದುವೆ ವಿಚಾರದ ಬಗ್ಗೆ ಅಮಿತಾಬ್ ಬಚ್ಚನ್ ಕೂಡ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದರು. "ಆ ಸಂಗತಿ ನನಗೆ ಗೊತ್ತು. ಆದರೆ ಸತ್ಯ ಎಂದಿಗೂ ಸುಳ್ಳಾಗಲ್ಲ" ಎಂದು ಬಿಗ್ ಬಿ ಹೇಳಿದ್ದರು.
ಅಭಿಷೇಕ್ ಜೊತೆ ಮದುವೆಗೂ ಮುನ್ನ ಐಶ್ವರ್ಯಾ ರೈ ಅವರಿಗೆ ಮರದ ಜೊತೆ ಮದುವೆ ಮಾಡಿದ್ದರಂತೆ ಎಂದು ವದಂತಿ ಹರಡಲಾಗಿತ್ತು ಎನ್ನಲಾಗಿದೆ. ಇದಕ್ಕೆ ಕಾರಣ ಮಂಗಳ ದೋಷವಂತೆ ಎಂಬ ವದಂತಿ ಇದೆ.
ಐಶ್ವರ್ಯಾ ರೈ ಬಚ್ಚನ್ ಜಾತಕದಲ್ಲಿ ಮಂಗಳ ದೋಷವಿತ್ತಂತೆ. ಇದೇ ಕಾರಣಕ್ಕೆ ಮೊದಲು ಮರದ ಜೊತೆ ಮದುವೆ ಮಾಡಿಸಿ ಬಳಿಕ ಅಭಿಷೇಕ್ ಬಚ್ಚನ್ ಜೊತೆ ಸಪ್ತಪದಿ ತುಳಿದರಂತೆ ಎಂಬ ವದಂತಿ ಹಬ್ಬಿತ್ತು ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಮಿತಾಬ್ ಬಚ್ಚನ್, ನಮ್ಮ ಕುಟುಂಬವು ಎಂದಿಗೂ ಮೂಢನಂಬಿಕೆಯನ್ನು ನಂಬಲ್ಲ. ಐಶ್ವರ್ಯಾ ರೈ ಮದುವೆಯಾದ ಮರ ಎಲ್ಲಿದೆ? ದಯವಿಟ್ಟು ನನಗೆ ತೋರಿಸಿ. ಅವಳು ಮದುವೆಯಾದ ಏಕೈಕ ವ್ಯಕ್ತಿ ನನ್ನ ಮಗ. ಸತ್ಯ ಎಂದಿಗೂ ಸುಳ್ಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಐಶ್ವರ್ಯಾ ರೈ ಬಚ್ಚನ್ ಸಹ ಹಲವು ಸಂದರ್ಶನಗಳಲ್ಲಿ ಈ ವೈರಲ್ ಸುದ್ದಿ ಸುಳ್ಳು ಎಂದು ಸ್ಪಷ್ಟವಾಗಿ ಹೇಳಿದ್ದರು. ಅಭಿಷೇಕ್ ಬಚ್ಚನ್ ಕೂಡ ಇಂತಹ ವದಂತಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.