Aishwarya Rai- Shrima Rai Photos: ಐಶ್ವರ್ಯಾ ರೈ ಕುಟುಂಬದಲ್ಲಿ ಅವರೊಬ್ಬರೆ ಸುಂದರಿಯಲ್ಲ.. ಅತ್ತಿಗೆಯೂ ಅತಿಲೋಕ ಸುಂದರಿ! ಈ ಫೋಟೋ ನೋಡಿ
ಐಶ್ವರ್ಯಾ ರೈ ಬಚ್ಚನ್ ಒಬ್ಬರೇ ಅವರ ಕುಟುಂಬದಲ್ಲಿ ಸೌಂದರ್ಯ ರಾಣಿಯಲ್ಲ. ಮಾಜಿ ವಿಶ್ವ ಸುಂದರಿಯ ಅತ್ತಿಗೆ ಶ್ರೀಮಾ ರೈ ಅವರನ್ನು ಕಂಡರೆ ಫಿದಾ ಆಗೋದು ಗ್ಯಾರಂಟಿ. ಐಶ್ವರ್ಯಾ ಅವರ ಅತ್ತಿದೆ ಶ್ರೀಮಾ ಮಾಡೆಲ್ ಆಗಿದ್ದು, ‘ಮಿಸೆಸ್ ಇಂಡಿಯಾ ಗ್ಲೋಬ್ 2009’ರ ವಿಜೇತರಾಗಿದ್ದಾರೆ.
ಐಶ್ವರ್ಯಾ ಅವರ ಸಹೋದರ ಆದಿತ್ಯ ರೈ ಅವರನ್ನು ವಿವಾಹವಾದ ಶ್ರೀಮಾ ರೈ ತಮ್ಮ ಲಾಭದಾಯಕ ಬ್ಯಾಂಕಿಂಗ್ ವೃತ್ತಿಜೀವನವನ್ನು ತ್ಯಜಿಸಿದ್ದಾರೆ. ಆ ಬಳಿಕ ತಮ್ಮದೇ ಆದ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಬ್ಲಾಗ್ ಮಾಡಲು ಪ್ರಾರಂಭಿಸಿದರು.
ಮಂಗಳೂರಿನಲ್ಲಿ ಜನಿಸಿದ ಶ್ರೀಮಾ, ಅಮೆರಿಕದ ಫಿಲಡೆಲ್ಫಿಯಾದಲ್ಲಿ ಬೆಳೆದರು. ಐಶ್ವರ್ಯಾ ರೈ ಸಹೋದರ ಆದಿತ್ಯ ಅವರನ್ನು ಮದುವೆಯಾದ ನಂತರ ಸದ್ಯ ಮುಂಬೈನ ಬಾಂದ್ರಾದಲ್ಲಿ ನೆಲೆಸಿದ್ದಾರೆ. ಶ್ರೀಮಾ ಮತ್ತು ಆದಿತ್ಯ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಾಂಶ್ ರೈ ಮತ್ತು ವಿಹಾನ್ ರೈ.
ಐಶ್ವರ್ಯಾ ರೈ ಬಚ್ಚನ್ ಅವರ ಅತ್ತಿಗೆ ಶ್ರೀಮಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ 75 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ಸಂಬಂಧದ ಕುರಿತು ಒಂದೊಮ್ಮೆ ಮಾತನಾಡಿದ ಶ್ರೀಮಾ, "ನಾನು ಆಶ್ ಅನ್ನು ಸೂಪರ್ಸ್ಟಾರ್ ಆಗಿ ನೋಡುವುದಿಲ್ಲ. ಅವಳು ಮೊದಲು ನನ್ನ ಅತ್ತಿಗೆ. ಅಭಿಷೇಕ್ ಸಖತ್ ಮೋಜಿನ ವ್ಯಕ್ತಿ" ಎಂದು ಹೇಳಿದ್ದಾರೆ.