ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದ ಐಶ್ವರ್ಯ ರೈ.. ಉತ್ತರ ಕೇಳಿ ಬೆಚ್ಚಿ ಬಿದ್ದ ನೆಟ್ಟಿಗರು..! ಡಿವೋರ್ಸ್‌ ಫಿಕ್ಸ್?!

Thu, 01 Aug 2024-1:43 pm,

ಬಾಲಿವುಡ್‌ನ ಪ್ರತಿಷ್ಠಿತ ಕುಟುಂಬಗಳಲ್ಲಿ ಬಚ್ಚನ್ ಕುಟುಂಬವೂ ಒಂದು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಜೊತೆಗೆ ಮಗ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ...   

ವಾಸ್ತವವಾಗಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದರು..‌ ಹೀಗಾಗಿ ಬಚ್ಚನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿವೆ ಎನ್ನುವ ಸುದ್ದಿ ಚರ್ಚೆಯ ವಿಷಯವಾಯಿತು.. ಇದಲ್ಲದೇ ಅಭಿಷೇಕ್‌ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡಿದ ತಕ್ಷಣ, ಇದು ಇಂತಹ ವದಂತಿಗಳಿಗೆ ತುಪ್ಪ ಸುರಿದಂತಾಗಿದೆ..   

ಇಷ್ಟೇ ಅಲ್ಲ ಕಳೆದ ಹಲವು ದಿನಗಳಿಂದ ಬಚ್ಚನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ... ಅಲ್ಲದೇ ಐಶ್ವರ್ಯಾ 15 ದಿನಗಳ ಕಾಲ ಪುತ್ರಿ ಆರಾಧ್ಯ ಜೊತೆ ನ್ಯೂಯಾರ್ಕ್‌ಗೆ ತೆರಳಿದ್ದರು.. ಇದರಿಂದ ಈ ಡಿವೋರ್ಸ್‌ ಸುದ್ದಿಗೆ ಮತ್ತಷ್ಟು ಬಲಬಂದಂತಾಗಿದೆ..   

15 ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿದ್ದ ನಟಿ ಇಂದು ಬೆಳಗ್ಗೆ ಭಾರತಕ್ಕೆ ಮರಳಿದ್ದಾರೆ.. ವಿಚ್ಛೇದನದ ವದಂತಿಗಳ ನಡುವೆ ಐಶ್ವರ್ಯ ರೈ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದಾರೆ..   

ನಟಿ ಐಶ್ವರ್ಯ ರೈ ಸಖತ್‌ ಜಾಲಿ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಯೊಬ್ಬರು, 'ಮೇಡಂ, ಹೇಗಿದ್ದೀರಿ?' ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ಲವೂ ಚೆನ್ನಾಗಿದೆ, ಧನ್ಯವಾದಗಳು’ ಎಂದು ನಗುತ್ತಲೇ ಹೇಳಿದ್ದಾರೆ..  

ಅಲ್ಲದೇ ಅವಳೊಂದಿಗೆ ಫೋಟೋ ತೆಗೆದುಕೊಳ್ಳಲು ಕೇಳಿದವರಿಗೆ ನಗುತ್ತಲೇ ಪೋಟೋಗಳಿಗೆ ಪೋಸ್‌ ನೀಡಿದ್ದಾರೆ.. ಐಶ್‌ ಅವರ ನಮ್ರತೆ ಸ್ವಭಾವ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.. ಸೆಲ್ಫಿ ತೆಗೆದುಕೊಂಡ ನಂತರ ನಟಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ‘ಗಾಡ್ ಬ್ಲೆಸ್’ ಎಂದು ಹೇಳಿ ಕಾರಿನಲ್ಲಿ ಕುಳಿತು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link