800 ಕೋಟಿ ಆಸ್ತಿಯ ಒಡತಿಯಾದ ಈ ನಟಿಗೆ ಇರೋದು ಒಬ್ಬಳೆ ಮಗಳು.. ವಿಚ್ಛೇದನ ವಿಚಾರಕ್ಕೆ ಸುದ್ದಿಯಲ್ಲಿರುವ ಈ ಚೆಲುವೆ ಯಾರು ಗೊತ್ತಾ?
)
ಬಾಲಿವುಡ್ ಮಾತ್ರವಲ್ಲ ಸೌತ್ ಸಿನಿಮಾಗಳಲ್ಲಿಯೂ ನಟಿಸಿ ಜನ ಮನ್ನಣೆ ಪಡೆದ ನಟಿ ಐಶ್ವರ್ಯಾ ರೈ ಬಚ್ಚನ್. ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿ.
)
ಚಲನಚಿತ್ರಗಳ ಹೊರತಾಗಿ ಐಶ್ವರ್ಯಾ ಹಲವು ಬ್ರಾಂಡ್‌ಗಳಿಗೆ ಜಾಹೀರಾತುಗಳನ್ನು ನೀಡುತ್ತಾರೆ. ಒಂದು ಜಾಹೀರಾತು ಕೊಡಲು 6-7 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
)
ಐಶ್ವರ್ಯಾ ರೈ ಬಚ್ಚನ್ ಕೇವಲ ಜಾಹೀರಾತುಗಳಿಂದಲೇ ವರ್ಷಕ್ಕೆ ಸುಮಾರು 80 ರಿಂದ 90 ಕೋಟಿ ರೂಪಾಯಿ ಹಣ ಸಂಪಾದನೆ ಮಾಡುತ್ತಾರೆ.
ಐಶ್ವರ್ಯಾ ರೈ ಬಚ್ಚನ್ ಅನೇಕ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬೈ ಅಲ್ಲದೆ, ದುಬೈನ ಸೆಂಚುರಿ ಫಾಲ್ಸ್‌ನಲ್ಲೂ ವಿಲ್ಲಾ ಖರೀದಿಸಿದ್ದು, ಸುಮಾರು 15 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.
ಐಶ್ವರ್ಯಾ ರೈ ಬಚ್ಚನ್ ಬಳಿ ದುಬಾರಿ ಕಾರುಗಳ ಕಲೆಕ್ಷನ್ ಇದೆ. 8 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಸೇರಿದಂತೆ ಕೋಟಿಗಟ್ಟಲೆ ಬೆಲೆಬಾಳುವ ಆಡಿ, ಲೆಕ್ಸಸ್ ಕೂಡ ಇವರ ಬಳಿ ಇದೆ.
ಐಶ್ವರ್ಯಾ ತಮ್ಮ ಪತಿ ಅಭಿಷೇಕ್ ಬಚ್ಚನ್‌ಗಿಂತ ನಾಲ್ಕು ಪಟ್ಟು ಹೆಚ್ಚು ಸಂಪಾದಿಸುತ್ತಾರೆ ಎಂದು ಹಲವು ವರದಿಗಳಲ್ಲಿ ಉಲ್ಲೇಖವಿದೆ ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ. ಅಭಿಷೇಕ್ ಅವರ ಆಸ್ತಿ 200 ಕೋಟಿ ರೂ.ಗಳಾಗಿದ್ದರೆ ಐಶ್ವರ್ಯಾ ಅವರ ಆಸ್ತಿ 828 ಕೋಟಿ ರೂ. ಆಗಿದೆ ಎನ್ನಲಾಗಿದೆ.
ಭಾರತದ ಶ್ರೀಮಂತ ನಟಿ ಐಶ್ವರ್ಯಾ ರೈ ತಮ್ಮ ಮದುವೆಗೆ ಸಂಪೂರ್ಣ ಚಿನ್ನದ ದಾರದಿಂದ ನೇಯ್ದ 75 ಲಕ್ಷ ಮೌಲ್ಯದ ಸೀರೆ ಉಟ್ಟಿದ್ದರು. ಪ್ರಸ್ತುತ ಅವರ ಆಸ್ತಿ 828 ಕೋಟಿ ರೂ. ಎನ್ನಲಾಗಿದೆ.
ಇಷ್ಟೆಲ್ಲ ಆಸ್ತಿ ಹೊಂದಿರುವ ನಟಿ ಐಶ್ವರ್ಯಾ ರೈ ಗೆ ಇರೋದು ಒಬ್ಬಳೇ ಮಗಳು ಆರಾಧ್ಯ ಬಚ್ಚನ್. ಐಶ್ವರ್ಯಾ ರೈ ಬಚ್ಚನ್ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು.