ಅಭಿಷೇಕ್ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್ʼಗೆ ಅಡ್ಡಿ ಆಗಿದ್ದು ಪುತ್ರಿ?
ಐಶ್ವರ್ಯ ರೈ ಬಚ್ಚನ್ ಮದುವೆಯಾಗಿ ಸುಮಾರು 17 ವರ್ಷ ಕಳೆದಿವೆ. ಈ ಮಧ್ಯೆ ಇವರಿಬ್ಬರ ದಾಂಪತ್ಯ ಮುರಿದು ಬೀಳುವ ಹಂತಕ್ಕೆ ತಲುಪಿದೆ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ.
ಅಭಿಷೇಕ್ ಬಚ್ಚನ್ ಅವರ ಮನೆಯಿಂದ ಮಗಳ ಜೊತೆ ಐಶ್ವರ್ಯ ಹೊರ ನಡೆದಿದ್ದು, ಮನೆಯಲ್ಲಿ ಅತ್ತೆ ಜಯಾ ಬಚ್ಚನ್ ಜೊತೆಗಿನ ಜಗಳವೇ ಇದಕ್ಕೆ ಕಾರಣ ಎಂಬ ವದಂತಿ ಇದೆ.
ಅಮಿತಾಬ್ ಬಚ್ಚನ್ ಮಗಳ ಜೊತೆಯೂ ಐಶ್ವರ್ಯ ರೈ ಬಚ್ಚನ್ ಸಂಬಂಧ ಹಳಸಿ ಹೋಗಿದೆ. ಇದರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸ್ಪಷ್ಟನೆ ನೀಡಿಲ್ಲ.
ಈ ಮಧ್ಯೆ ಐಶ್ವರ್ಯ ರೈ ಬಚ್ಚನ್ ಫೋಟೋ ನೋಡಿದವರು ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಐಶ್ವರ್ಯ ರೈ ಬಚ್ಚನ್ ಕೊರಳಲ್ಲಿನ ತಾಳಿ ಮಾಯವಾಗಿದೆ. ಐಶ್ವರ್ಯ ರೈ ಬಚ್ಚನ್ ಅವರ ಒಂದಷ್ಟು ಫೋಟೋಗಳಲ್ಲಿ ಕೊರಳಲ್ಲಿ ತಾಳಿ ಮಿಸ್ಸಿಂಗ್ ಆಗಿದೆ.
ಮದುವೆಯಲ್ಲಿ ಅಭಿಷೇಕ್ ಕಟ್ಟಿದ್ದ ತಾಳಿ ಐಶ್ವರ್ಯಾ ರೈ ಬಚ್ಚನ್ ಕೊರಳಲ್ಲಿ ಕಾಣದಿರುವುದು ಅಭಿಮಾನಿಗಳಲ್ಲಿ ಈ ಅನುಮಾನ ಮೂಡಲು ಕಾರಣವಾಗಿದೆ.
ಈ ಎಲ್ಲ ವದಂತಿಗಳ ನಡುವೆ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವಿವಾಹ ವಾರ್ಷಿಕೋತ್ಸವ ಸೆಲಿಬ್ರೇಟ್ ಮಾಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಮಂಗಳಸೂತ್ರವನ್ನು ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಬೆಲೆ 45 ಲಕ್ಷ ರೂಪಾಯಿ ಎನ್ನಲಾಗಿದೆ.