ಸಿನಿಮಾ ಹೊರತಾಗಿ ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಸಂಪಾದನೆ ಮೂಲ ಇದುವೇ!
ಐಶ್ವರ್ಯಾ ಬಹಳ ಸಮಯದಿಂದ ಚಲನಚಿತ್ರಗಳಿಂದ ದೂರವಿದ್ದಾರೆ. ಆದರೆ ಇದು ಅವರ ಅದ್ದೂರಿ ಜೀವನಶೈಲಿಯ ಮೇಲೆ ಪರಿಣಾಮ ಬೀರಲಿಲ್ಲ. ಐಶ್ವರ್ಯಾ ಚಲನಚಿತ್ರಗಳ ಹೊರತಾಗಿ ಇತರ ಅನೇಕ ವಿಷಯಗಳಿಂದ ಹಣವನ್ನು ಗಳಿಸುತ್ತಾರೆ. ಜೊತೆಗೆ ದೊಡ್ಡ ಸಾಮ್ರಾಜ್ಯದ ಒಡೆಯರಾಗಿದ್ದಾರೆ.
ಐಶ್ವರ್ಯಾ ರೈ ಬಿ ಟೌನ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್, ವ್ಯಾಪಾರ ಹೂಡಿಕೆ ಮತ್ತು ರಿಯಲ್ ಎಸ್ಟೇಟ್ ಮೂಲಕ ಈಗ ಹಣ ಗಳಿಕೆ ಮಾಡುತ್ತಿದ್ದಾರೆ.
GQ ವರದಿಯ ಪ್ರಕಾರ, ಐಶ್ವರ್ಯಾ ರೈ ಸುಮಾರು 776 ಕೋಟಿಗಳ ಒಡತಿಯಾಗಿದ್ದಾರೆ. ಅತ್ಯುತ್ತಮ ನಟಿಯ ಜೊತೆಗೆ, ಐಶ್ವರ್ಯಾ ಬುದ್ಧಿವಂತ ಉದ್ಯಮಿ ಕೂಡ. ಅಭಿನೇತ್ರಿ ಆಂಬಿ ಎಂಬ ಕಂಪನಿಯಲ್ಲಿ ಹೂಡಿಕೆದಾರರಾಗಿದ್ದಾರೆ. ಬೆಂಗಳೂರು ಮೂಲದ ಈ ಸ್ಟಾರ್ಟಪ್‌ನಲ್ಲಿ ಅವರು 1 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಐಶ್ವರ್ಯಾ ಅವರ ಅದ್ದೂರಿ ಜೀವನಶೈಲಿಯು ಅಂತರರಾಷ್ಟ್ರೀಯ ಹವ್ಯಾಸಗಳನ್ನು ಒಳಗೊಂಡಿದೆ. ಐಶ್ವರ್ಯಾ ಬಹಳ ಸಮಯದಿಂದ ಚಲನಚಿತ್ರಗಳಿಂದ ದೂರವಿದ್ದಾರೆ. ಆದರೆ ವರದಿಯೊಂದರ ಪ್ರಕಾರ, ಪ್ರತಿ ಚಿತ್ರಕ್ಕೆ ಅವರು ಪಡೆಯುವ ಶುಲ್ಕ 10-12 ಕೋಟಿಗಳು.
ಐಶ್ವರ್ಯಾ ರೈ ಬಚ್ಚನ್ ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕೆಲವು ದೊಡ್ಡ ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿದ್ದಾರೆ. ವರ್ಷಗಳಿಂದ, ನಟಿ L'Oréal ಮತ್ತು ಸ್ವಿಸ್ ಐಷಾರಾಮಿ ವಾಚ್ ಲಾಂಗಿನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಐಶ್ವರ್ಯಾ ಅವರ ಗಳಿಕೆಯು ಗಮನಾರ್ಹವಾಗಿ ಹೆಚ್ಚಾಗುತ್ತಲಿದೆ. ನಟಿ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ವಾರ್ಷಿಕವಾಗಿ ಸುಮಾರು 80 ರಿಂದ 90 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.
ಐಶ್ವರ್ಯಾ ರೈ, ಪತಿ ಅಭಿಷೇಕ್ ಬಚ್ಚನ್, ಮಾವ ಅಮಿತಾಬ್ ಬಚ್ಚನ್, ಅತ್ತೆ ಜಯಾ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಜಲ್ಸಾ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಜಲ್ಸಾ ಮುಂಬೈನ ಜುಹುದಲ್ಲಿದೆ. ಮಿಡ್-ಡೇ ವರದಿಯ ಪ್ರಕಾರ ಇದರ ಮೌಲ್ಯ112 ಕೋಟಿ ರೂ. ಇನ್ನು ಇವರಿಬ್ಬರೂ ದುಬೈನ ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿರುವ ಸ್ಯಾಂಕ್ಚುರಿ ಫಾಲ್ಸ್‌ನಲ್ಲಿ ವಿಲ್ಲಾವನ್ನು ಹೊಂದಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಪ್ರಬಲವಾದ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊವನ್ನು ಹೊಂದಿದ್ದಾರೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಅತ್ಯಂತ ಐಷಾರಾಮಿ ಸ್ಥಳದಲ್ಲಿ 21 ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. 5,500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಅಪಾರ್ಟ್‌ಮೆಂಟ್ ಅನ್ನು ಪ್ರತಿ ಚದರ ಅಡಿಗೆ 38,000 ರೂಪಾಯಿಗೆ ಖರೀದಿಸಲಾಗಿದೆ.
ಐಶ್ವರ್ಯಾ ರೈ ಬಚ್ಚನ್ ಕೂಡ ಐಷಾರಾಮಿ ವಾಹನಗಳನ್ನು ತುಂಬಾ ಇಷ್ಟಪಡುತ್ತಾರೆ. ಐಶ್ವರ್ಯಾ ಅವರ ಗ್ಯಾರೇಜ್‌ನಲ್ಲಿ ಹಲವು ಬೆಲೆಬಾಳುವ ವಾಹನಗಳಿವೆ. ಐಶ್ವರ್ಯಾ ಅವರ ಕಾರು ಸಂಗ್ರಹದ ಕುರಿತು ಮಾತನಾಡೋದಾದದ್ರೆ ರೂ 7.95 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್, ರೂ 1.60 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಎಸ್ 350 ಡಿ ಕೂಪೆ, ಆಡಿ ಎ 8 ಎಲ್, ಲೆಕ್ಸಸ್ ಎಲ್‌ಎಕ್ಸ್ 570 ಮತ್ತು ರೂ 1.58 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಎಸ್ 500 ಇವೆ.