13 ವರ್ಷಕ್ಕೆ ಅಪ್ಪನಿಗಿಂತಲೂ ದುಪ್ಪಟ್ಟು ಸಂಪತ್ತು ಹೊಂದಿರುವ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ?
ಆರಾಧ್ಯ ಬಚ್ಚನ್ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ. ಜನಪ್ರಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಆದರೆ 13ನೇ ವಯಸ್ಸಿಗೆ ಕೋಟಿಗಟ್ಟಲೆ ಆಸ್ತಿಗೆ ಒಡತಿಯಾಗಿದ್ದಾಳೆ.
ಅಭಿಷೇಕ್ ಮತ್ತು ಐಶ್ವರ್ಯಾ ಅವರ ಏಕೈಕ ಪುತ್ರಿ ಆರಾಧ್ಯ. ಈ ಕಾರಣದಿಂದಲೇ ಈಕೆ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅಚ್ಚುಮೆಚ್ಚಿನ ಮೊಮ್ಮಗಳು.
ಆರಾಧ್ಯ ಬಚ್ಚನ್ ಗೆ ಈಗ 13 ವರ್ಷ ವಯಸ್ಸು. ಈ ವಯಸ್ಸಿನಲ್ಲೇ ಸಾಕಷ್ಟು ಐಷಾರಾಮಿ ಜೀವನವನ್ನು ಆರಾಧ್ಯ ನಡೆಸುತ್ತಿದ್ದಾರೆ. ದುಬಾರಿ ಕಾರು ಹೊಂದಿದ್ದಾರೆ. ಐಷಾರಾಮಿ ಮನೆಯ ಒಡತಿ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ.
ವರದಿಗಳ ಪ್ರಕಾರ, ಆರಾಧ್ಯ ಅವರಿಗೆ ಒಂದು ವರ್ಷ ತುಂಬಿದಾಗ ಐಶ್ವರ್ಯಾ ಮತ್ತು ಅಭಿಷೇಕ್ ಕೆಂಪು ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಹೊರತಾಗಿ ಅಭಿಷೇಕ್ ಅವರಿಗೆ ಆಡಿ ಎ8 ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ತಮ್ಮ ಬಂಗಲೆ ಜಲ್ಸಾ ಹಿಂದೆ ಮತ್ತೊಂದು ಬಂಗಲೆಯನ್ನು ಖರೀದಿಸಿದ್ದರು. ಇದರ ಬೆಲೆ 60 ಕೋಟಿಗೂ ಹೆಚ್ಚು. ಇದನ್ನು ಆರಾಧ್ಯ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಆರಾಧ್ಯ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಆರಾಧ್ಯ ಬಚ್ಚನ್ ಓದುತ್ತಿದ್ದಾರೆ. ಶಾಲೆಯ ಕಾರ್ಯಕ್ರಮಗಳಲ್ಲಿ ಆರಾಧ್ಯ ಭಾಗಿಯಾದ ಫೋಟೋ ಮತ್ತು ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.
ಅಮಿತಾಬ್ ಬಚ್ಚನ್ ವಾರ್ಷಿಕ ಆದಾಯ ಸುಮಾರು 60 ಕೋಟಿ ರೂ. ಅವರ ಒಟ್ಟು ಆಸ್ತಿ 3,396 ಕೋಟಿ ರೂ. ಆಗಿದೆ. ಅಭಿಷೇಕ್ ಬಚ್ಚನ್ ಪ್ರತಿ ಸಿನಿಮಾಗೆ 10 ಕೋಟಿ ಸಂಭಾವನೆ ಪಡೆಯುತ್ತಾರೆ. ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿಯ ಮೌಲ್ಯ ಸುಮಾರು 203 ಕೋಟಿ ರೂ. ಆಗಿದೆ.
ಐಶ್ವರ್ಯಾ ರೈ ಬಚ್ಚನ್ ಒಟ್ಟು 800 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಜಯಾ ಬಚ್ಚನ್ 1,001.63 ಕೋಟಿ ಮೌಲ್ಯದ ಆಸ್ತಿ ಮತ್ತ 105.64 ಕೋಟಿ ಹೊಣೆಗಾರಿಕೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಲೆಕ್ಕಾಚಾರದ ಬಳಿಕ ಆರಾಧ್ಯ ಬಚ್ಚನ್ ಸುಮಾರು 1000 ಕೋಟಿ ಆಸ್ತಿ ಹೊಂದಿದಂತಾಗುತ್ತದೆ. ಹೀಗಾಗಿ 13 ನೇ ವರ್ಷಕ್ಕೆ ಆರಾಧ್ಯ ಸಾವಿರಾರು ಕೋಟಿ ಆಸ್ತಿಯ ವಾರಸುದಾರಳಾಗುವಳು.