ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!

Sat, 28 Sep 2024-11:49 am,

Aishwarya rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಿಂದ ಮುಂಬೈಗೆ ಮರಳಿದ್ದಾರೆ. ಇದಾದ ನಂತರ ನಟಿ ನಟಿ ಮತ್ತೆ ಅಬುಧಾಬಿಗೆ ಹೊರಟಿದ್ದಾರೆ.   

IIFA 2024 ಅನ್ನು ಅಬುಧಾಬಿಯಲ್ಲಿ ಆಯೋಜಿಸಲಾಗಿದೆ, ಇದರಲ್ಲಿ ಭಾಗವಹಿಸಲು ಐಶ್ವರ್ಯಾ ರೈ ತಮ್ಮ ಮಗಳೊಂದಿಗೆ ಮುಂಬೈನಿಂದ ಹೊರಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಐಶ್ವರ್ಯ ರೈ ತನ್ನ ಪತಿ ಅಭಿಷೇಕ್ ಬಚ್ಚನ್ ಜೊತೆಗೆ ಎಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿಲ್ಲ, ಆದರೆ ತಮ್ಮ ಮಗಳು ಆರಾಧ್ಯ ಅವರೊಂದಿಗೆ ನಟಿ ಈ ಮಧ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಐಶ್ವರ್ಯಾ ರೈ ಜೊತೆಗೆ ಅವರ ಮಗಳು ಆರಾಧ್ಯ ಬಚ್ಚನ್ ಸಹ SIIMA ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡರು. ಇದಾದ ಬೆನ್ನಲ್ಲೇ ಐಶ್ವರ್ಯಾ ಮತ್ತೆ ಅವರೊಂದಿಗೆ ಪ್ಯಾರಿಸ್ ತಲುಪಿದ್ದಾರೆ. ಪ್ಯಾರಿಸ್‌ನಿಂದ ವೈರಲ್ ಆಗಿರುವ ಫ್ಯಾಶನ್ ಶೋಗಳ ವೀಡಿಯೊಗಳಲ್ಲಿ ಆರಾಧ್ಯ ತನ್ನ ತಾಯಿಯೊಂದಿಗೆ ಇರುವ ದೃಶ್ಯ ಕಂಡು ಬಂದಿದೆ.

ಆರಾಧ್ಯ ತನ್ನ ತಾಯಿಯೊಂದಿಗೆ ಆಗಾಗ್ಗೆ ಪ್ರಯಾಣಿಸುತ್ತಿರುವುದನ್ನು ನೋಡಿದ ಜನರು ಐಶ್ವರ್ಯಾ ರೈಗೆ ಹಲವು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. "ಆರಾಧ್ಯ ತನ್ನ ತಾಯಿಯೊಂದಿಗೆ ಕಾರ್ಯಕ್ರಮಗಳಿಗೆ ಹೋಗುತ್ತಲೇ ಇರುತ್ತಾಳೆ, ಅವಳು ಯಾವಾಗ ಶಾಲೆಗೆ ಹೋಗುತ್ತಾಳೆ" ಎಂದು ನೆಟ್ಟಿಗರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ.

ಐಶ್ವರ್ಯಾ ರೈ ಅವರ ವೀಡಿಯೊಗಳಿಗೆ ಜನರು ಹೆಚ್ಚು ಕಮೆಂಟ್ ಮಾಡುತ್ತಿದ್ದಾರೆ ಮತ್ತು ಅವರಿಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಬಳಕೆದಾರರೊಬ್ಬರು ಐಶ್ವರ್ಯಾ ರೈ ಅವರನ್ನು "ಆರಾಧ್ಯ ಶಾಲೆಗೆ ಯಾವಾಗ ಹೋಗುತ್ತಾರೆ?" ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.   

ಇನ್ನೂ ಈ ಮುಂಚೆ ಐಶ್ವರ್ಯ ರೈ ಈ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದು," ಪ್ರಯಾಣಿಸುವ ಮೊದಲು ನಾ ಎಲ್ಲಾ ಯೋಜನೆಗಳನ್ನು, ಮುಂಚೆಯೇ ಮಾಡಿಕೊಳ್ಳುತ್ತೇನೆ. ಶಾಲೆಯನ್ನು ಗಮನದಲ್ಲಿಟ್ಟುಕೊಂಡು ಜೆಟ್‌ ಲ್ಯಾಗ್‌ ಆಗದ ರೀತಿಯಲ್ಲಿ ಪ್ರಯಾಣವನ್ನ ಪ್ಲಾನ್‌ ಮಾಡಿಕೊಳ್ಳುತ್ತೇನೆ" ಎಂದು ನಟಿ ಹೇಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link