ಅಭಿಷೇಕ್-ನಿಮೃತ್ ಕೌರ್ ಅಫೇರ್ ವದಂತಿ ನಡುವೆ ಸಲ್ಮಾನ್ ಖಾನ್‌ರನ್ನು ತಬ್ಬಿ ಕಣ್ಣೀರಿಟ್ಟ ಐಶ್ವರ್ಯ ರೈ? ಫೋಟೋ ವೈರಲ್!!
Aishwarya rai Salman Khan: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿವೆ. ಎಲ್ಲಿ ನೋಡಿದರೂ ಕೂಡ ಈ ಜೋಡಿಯ ವಿಚ್ಛೇದನ ಕುರಿತೆ ಚರ್ಚೆಯಾಗುತ್ತಿದೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ನಡುವೆ ಬಿರುಕು ಮೂಡಿದೆ ಎನ್ನುವ ಸುದ್ದಿ ಸಾಕಷ್ಟು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಆದರೆ ಇತ್ತೀಚೆಗೆ ಈ ಸ್ಟೋರಿಗೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ.
ಅಭಿಷೇಕ್ ಬಚ್ಚನ್ ಹಾಗೂ ನಿಮೃತ್ ಕೌರ್ ಸಂಬಂಧ ಹೊಂದಿದ್ದಾರೆ, ಇದೇ ಕಾರಣದಿಂದಾಗಿ ನಟಿ ಐಶ್ವರ್ಯ ರೈ ಪತಿ ಹಾಗೂ ಅವರ ಕುಟುಂಬದಿಂದ ದೂರ ಉಳಿದಿದ್ದಾರೆ ಎನ್ನು ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಷ್ಟೆ ಏಕೆ, ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈ ಅವರನ್ನು ಬಿಟ್ಟು ನಿಮೃತ್ ಕೌರ್ ಅವರೊಂದಿಗೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದರ ಮಧ್ಯೆ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಅವರ ಫೋಟೋ ಒಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಐಶ್ವರ್ಯ ರೈ ಸಲ್ಮಾನ್ ಖಾನ್ ಅಪ್ಪಿಕೊಂಡಿರುವುದು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ಮನಿಶ್ ಮಲ್ಹೋತ್ರಾ ಅವರು ಆಯೋಜಿಸಿರುವ ದಿವಾಳಿ ಬಾಶ್ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಹರಿದು ಬರುತ್ತಿದ್ದಾರೆ. ಇದರ ಮಧ್ಯೆ ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಕೂಡ ಬಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ನಟಿ ಐಶ್ವರ್ಯ ಸಲ್ಮಾನ್ ಖಾನ್ ಅವರನ್ನು ನೋಡುತ್ತಿದ್ದಂತೆ ಅವರನ್ನು ಬಿಗಿದಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಫೋಟೋ ಅಸಲಿಯಲ್ಲ, ನಕಲಿ..ಹೌದು, ಇದೊಂದು ಮಾರ್ಫಡ್ ಫೋಟೋ ಆಗಿದ್ದು, ಇದನ್ನು ಅನಂತ್ ಅಂಬಾನಿ ಅವರ ಮದುವೆ ಸಮಾರಂಭದಲ್ಲಿ ತೆಗೆಯಲಾಗಿತ್ತು. ಸಲ್ಮಾನ್ ಖಾನ್ ಈ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಅವರಿಗೆ ಮುಖಾಮುಕಿಯಾಗಿದ್ದರೂ ಕೂಡ ಅವರೊಂದಿಗೆ ಮಾತುಕತೆ ನಡೆಸಿದ್ದು ಕಂಡು ಬರಲಿಲ್ಲ. ಈ ಸಂದರ್ಭದ ಫೋಟೋವನ್ನು ಇದೀಗ ಮಾರ್ಫ್ ಮಾಡಿ ವೈರಲ್ ಮಾಡಲಾಗುತ್ತಿದೆ.