ಸಲ್ಮಾನ್‌ ಖಾನ್‌ ಜೊತೆ ಐಶ್ವರ್ಯ ರೈ ಕ್ಲೋಸ್‌ ಆಗಿದ್ದೇ ಅಭಿಷೇಕ್‌ ಹಾರ್ಟ್‌ ಬ್ರೇಕ್‌ ಮಾಡ್ತಾ? ವಿಚ್ಛೇದನಕ್ಕೆ ಕಾರಣ ಇದೇನಾ!?

Sat, 16 Dec 2023-2:27 pm,

ಐಶ್ವರ್ಯಾ ರೈ - ಅಭಿಷೇಕ್‌ ಬಚ್ಚನ್ ದಾಂಪತ್ಯದಲ್ಲಿನ ಬಿರುಕಿಗೆ ಕೌಟುಂಬಿಕ ಭಿನ್ನಾಭಿಪ್ರಾಯವೇ ಕಾರಣ ಎನ್ನಲಾಗುತ್ತಿದೆ.   

ಶ್ವೇತಾ ನಂದಾ ಹಾಗೂ ಐಶ್ವರ್ಯಾ ರೈ ಮಧ್ಯೆ ಮುನಿಸಿದೆ ಎನ್ನಲಾಗಿದೆ. ಇನ್ನು ಅತ್ತೆ ಜಯಾ ಬಚ್ಚನ್ ಜೊತೆಗೂ ಐಶ್ವರ್ಯಾ ರೈ ಸಂಬಂಧ ಸರಿಯಾಗಿಲ್ಲ ಎನ್ನಲಾಗಿದೆ.   

ಅಲ್ಲದೇ ಐಶ್ವರ್ಯಾ ರೈ ಜೊತೆ ಅಭಿಷೇಕ್ ಬಚ್ಚನ್‌ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸಲ್ಮಾನ್‌ ಖಾನ್‌ ಜೊತೆ ಐಶ್‌ ಕ್ಲೋಸ್‌ ಆಗಿದ್ದೇ ಈ ಕೋಪಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ.    

ಇದೆಲ್ಲವೂ ಪರಿಣಾಮ ಬೀರಿ ಕೊನೆಗೆ ದಾಂಪತ್ಯ ಮುರಿದು ಬೀಳುವ ಹಂತ ತಲುಪಿದ ಎಎನ್ನಲಾಗಿದೆ. ಕೌಟುಂಬಿಕ ವಿರಸವೇ ಅಭಿಷೇಕ್ - ಐಶ್ವರ್ಯಾ ರೈ ದಾಂಪತ್ಯದಲ್ಲಿನ ಬಿರುಕಿಗೆ ಕಾರಣ ಎನ್ನಲಾಗಿದೆ.  

ಮುಂಬೈನಲ್ಲಿ ಬುಧವಾರ ರಾತ್ರಿ ಸ್ಯಾಮ್ ಬಹದ್ದೂರ್ ಚಿತ್ರದ ಸ್ಕ್ರೀನಿಂಗ್ ನಡೆಯುತ್ತಿದ್ದು, ಅಭಿಷೇಕ್ ಬಚ್ಚನ್ ಅಲ್ಲಿಗೆ ಬಂದಿದ್ರೂ ಪತ್ನಿ ಐಶ್ವರ್ಯ ಕಾಣಲಿಲ್ಲ. ಅಭಿಷೇಕ್ ತನ್ನ ಸೋದರಳಿಯನೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಲ್ಲಿಂದಲೇ ವಿಚ್ಛೇದನ ವದಂತಿಗೆ ಪುಷ್ಠಿ ನೀಡಿದೆ.   

ಕಳೆದ ಮೂರು ತಿಂಗಳಿಂದ ಐಶ್ವರ್ಯ ಮತ್ತು ಅಭಿಷೇಕ್ ಒಟ್ಟಿಗೆ ಕಾಣಿಸಿರಲಿಲ್ಲ. ಮನೀಷ್  ಮಲ್ಹೋತ್ರಾ ದೀಪಾವಳಿ ಪಾರ್ಟಿಗೆ ಐಶ್ವರ್ಯಾ ಒಂಟಿಯಾಗಿ ಬಂದಿದ್ದರು. ಇದಕ್ಕೂ ಮುನ್ನ ನೀತಾ ಅಂಬಾನಿಯವರ ಗಣಪತಿ ಹಬ್ಬಕ್ಕೂ ಮಗಳ ಜೊತೆ ಬಂದಿದ್ದರು. ಅಂಬಾನಿ ಕುಟುಂಬದ ಎನ್‌ಎನ್‌ಎಸಿ ಕಾರ್ಯಕ್ರಮಕ್ಕೂ ಐಶ್ವರ್ಯ ಮಗಳೊಂದಿಗೆ ಬಂದಿದ್ದರು. ಅಭಿಷೇಕ್‌ ಎಲ್ಲಿಯೂ ಕಾಣಲಿಲ್ಲ.   

ನವೆಂಬರ್ 16 ರಂದು ಆರಾಧ್ಯ ಅವರ ಹುಟ್ಟುಹಬ್ಬದ ಸಮಯದಲ್ಲೂ ಅಭಿಷೇಕ್ ಬಚ್ಚನ್ ಅವರ ಮಗಳ ಜೊತೆ ಕಾಣಿಸಿಕೊಂಡಿಲ್ಲ. ಇದು ಕೂಡ ವಿಚ್ಛೇದನ ವದಂತಿಗೆ ಕಾರಣವಾಯಿತು.   

ಐಶ್ವರ್ಯಾ ಹುಟ್ಟುಹಬ್ಬ ಆಚರಣೆಯಲ್ಲಿಯೂ ಅಭಿಷೇಕ್ ಬಚ್ಚನ್ ಕಾಣಲಿಲ್ಲ. ಐಶ್ವರ್ಯಾ ತನ್ನ ಮಗಳು ಮತ್ತು ತಾಯಿಯೊಂದಿಗೆ ಸೆಲಿಬ್ರೇಟ್‌ ಮಾಡಿದರು.   ದೀಪಾವಳಿಯ ದಿನ ಐಶ್ವರ್ಯಾ ಜಲ್ಸಾದಲ್ಲಿ ಇರಲಿಲ್ಲ ಮುಂಬೈನಿಂದ ಹೊರ ಹೋಗಿದ್ದರು. ಇದು ಕೂಡ ವಿಚ್ಛೇದನ ವದಂತಿಗೆ ಒಂದು ಕಾರಣ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link