ನಾಟ್ಯಮಯೂರಿ.. ನವಿಲಿನಂತೆ ಕಂಗೋಳಿಸಿದ ಮಾಜಿ ವಿಶ್ವಸುಂದರಿ..! ಸೌಂದರ್ಯಕ್ಕೆ ಇನ್ನೊಂದು ಹೆಸರೇ ಇವರು ಅನ್ಸುತ್ತೆ!! ಫೋಟೋಸ್‌ ನೋಡಿ

Thu, 17 Oct 2024-2:44 pm,

Aishwarya rai stunning photos: ನಟಿ ಐಶರ್ಯ ರೈ ತಮ್ಮ ವೃತ್ತಿಯ ಕಾರಣದಿಂದ ಅಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಎಷ್ಟೇ ಸುದ್ದಿಯಲ್ಲಿದ್ದರೂ ಕೂಡ ನಟಿಗೆ ಇರುವ ಫ್ಯಾನ್‌ ಬೇಸ್‌ ಸ್ವಲ್ಪ ಕೂಡ ಕಡಿಮೆಯಾಗಿಲ್ಲ. ನಟಿ ತನ್ನ ಸೌಂದರ್ಯದ ಮೂಲಕ ಕೇವಲ ಭಾರದಲ್ಲಿ ಮಾತ್ರ ಅಲ್ಲ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.  

ನಟಿಗೆ ಮದುವೆಯಾಗಿ ಒಬ್ಬ ಮಗಲಿದ್ದರೂ ಸಹ, ತಾನು ಮಾಜಿ ವಿಶ್ವ ಸುಂದರಿ ಎಂದು ತಮ್ಮ ಸೌಂದರ್ಯದ ಮೂಲಕ ಆಗಾಗ ಜನರಿಗೆ ನೆನಪಿಸುತ್ತಿರುತ್ತಾರೆ. ಇವರು ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲವಾದರೂ, ಇವರ ಚಿತ್ರಗಳು ಇಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತವೆ.  

ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿಗಳು ಶುರುವಾದಾಗಿನಿಂದ ಇವರ ಕುರಿತಾದ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್‌ ಆಗುತ್ತಿರುತ್ತವೆ.  

ಇದೀಗ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ನಟಿ 2018ರ ಕೇನ್ಸ್‌ ಫಿಲಿಂ ಫೆಸ್ಟಿವೆಲ್‌ಗೆ ಧರಿಸಿದ್ದ ಡ್ರೇಸ್‌ನ ಲುಕ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ನಟಿ 2018ರ ಕೇನ್ಸ್‌ ಫಿಲಿಂ ಫೆಸ್ಟಿವಲ್‌ಗೆ ನೀಲಿ ಬಣ್ಣದ ಚಿಟ್ಟೆಯ ಡ್ರೆಸ್‌ ಧರಿಸಿದ್ದರು, ಈ ಲುಕ್‌ನಲ್ಲಿ ನಟಿ ಐಶ್ವರ್ಯ ರೈ ತೇಟ್‌ ನವಿಲಿನಂತೆ ಕಾಣಿಸುತ್ತಿದ್ದರು.  

ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನಟಿ ನೋಡಲು ಸಾಕ್ಷಾತ್‌ ಆಕಾಶದಿಂದ ಇಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link