ಇವ್ರು ನಿಜವಾಗ್ಲೂ ವಿಶ್ವಸುಂದರಿನೇ ಬಿಡಿ.. ಅಪರೂಪಕ್ಕೆ ಸೀರೆಯಲ್ಲಿ ಕಂಡ ಐಶ್ವರ್ಯ ರೈ! ಫೋಟೋಸ್ ನೋಡಿ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳ್ತಿರ
Aishwarya rai viral photos: ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಮಾಜಿ ವಿಶ್ವ ಸುಂದರೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ತಮ್ಮ ಸೌಂದರ್ಯದಿಂದ ಪ್ರಪಂಚವನ್ನೆ ಆಳಿದವರು, ಆಕೆಯ ಅಂದವನ್ನು ನೋಡಿದವರು ಮರುಳಾಗದೆ ಇರಲು ಸಾಧ್ಯವೇ ಇಲ್ಲ. ನಟಿ ಒಂದು ಕಾಲದಲ್ಲಿ ತಮ್ಮ ತಮ್ಮ ಸೌಂದರ್ಯದಿಂದ ಇಂಡಸ್ಟ್ರಿಯನ್ನೆ ಬೆಚ್ಚಿಬೀಳಿಸಿದ್ದರು.
ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗಿನಿಂದ ನಟಿ ಐಶ್ವರ್ಯ ರೈ ಪ್ರತಿ ವರ್ಷ ಕೇನ್ಸ್ ಫಿಲಿಂ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಮಾರಂಭಕ್ಕೆ ನಟಿ ವಿಭಿನ್ನ ವಿನ್ಯಾಸದ ಉಡುಪು ಧರಿಸಿ ಎಲ್ಲರ ಮನಸೆಳೆಯುತ್ತಾರೆ.
2002 ರ ವರ್ಷದ ಕೇನ್ಸ್ ಫಿಲಿಂ ಫೆಸ್ಟಿವಲ್‌ನಲ್ಲೂ ಕೂಡ ನಟಿ ಐಶ್ವರ್ಯ ರೈ ಹಳದಿ ಸೀರೆ ಉಟ್ಟು ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿಯ ಈ ಲುಕ್ ನೋಡಿ ಸಮಾರಂಭದಲ್ಲಿ ನೆರೆದಿದ್ದವರೆಲ್ಲಾ ಫಿದಾ ಆಗಿದ್ದರು.
ನಟಿ ಐಶ್ವರ್ಯ ರೈ ಈ ಸಮಾರಂಭಕ್ಕೆ ಹಳದಿ ಸೀರೆ, ಮೈ ತುಂಬಾ ಒಡವೆ ಉಟ್ಟು ಲಕ್ಷಣವಾಗಿ ಕಾಣುತ್ತಿದ್ದರು, ನಟಿಯ ಲುಕ್ ನೋಡಿದರೆ, ಅಚ್ಚ ಕನ್ನಡತಿಯಂತೆ ಭಾಸವಾಗುತ್ತಿತ್ತು. ನಟಿ ಅಂದು ಧರಿಸಿದ್ದ ಸೀರೆ ಹಾಗೂ ಆಕೆಯ ಅಂದ ಇಡೀ ಜಗತ್ತನ್ನೆ ಗೆದ್ದಿತ್ತು.