ಐಶ್ವರ್ಯ ರೈ ಜೊತೆ ಅಭಿಷೇಕ್ ಡಿವೋರ್ಸ್ ಕನ್ಫರ್ಮ್! ಮಗಳೊಟ್ಟೊಗೆ ಮನೆ ಬಿಟ್ಟು ಬಂದ ಬಚ್ಚನ್ ಸೊಸೆ?‌

Sat, 16 Dec 2023-7:13 am,

ಬಾಲಿವುಡ್‌ ಈ ಜೋಡಿಗಳ ವಿಚ್ಛೇದನದ ವದಂತಿಗಳ ನಡುವೆಯೇ ಇದೀಗ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ.   

ವರದಿಯ ಪ್ರಕಾರ, ಈ ದಿನಗಳಲ್ಲಿ ಐಶ್ವರ್ಯಾ ರೈ ಅವರು ತನ್ನ ತಾಯಿಯ ಮನೆಯಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಅಂತರ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 

ಎರಡು ವರ್ಷಗಳ ಹಿಂದೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿದೆ. ಆದರೆ ಇಬ್ಬರೂ ತಮ್ಮ ಮಗಳು ಆರಾಧ್ಯ ಗೋಸ್ಕರ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.   

ಇದೆಲ್ಲದರ ನಡುವೆ ಅಮಿತಾಬ್ ಮತ್ತು ಐಶ್ವರ್ಯ ಒಬ್ಬರನ್ನೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.  

ಐಶ್ವರ್ಯಾ ರೈ ಬಚ್ಚನ್ ಅವರ ಅತ್ತೆ ಜಯಾ ಬಚ್ಚನ್ ಸಂಬಂಧ ಹಲವು ವರ್ಷಗಳ ಹಿಂದೆಯೇ ಹದಗೆಟ್ಟಿತ್ತು ಎನ್ನಲಾಗಿದೆ. ಇಬ್ಬರೂ ಪರಸ್ಪರ ಮಾತನಾಡುವುದನ್ನು ಸಹ ನಿಲ್ಲಿಸಿದ್ದರು ಎಂದು ಹೇಳಲಾಗಿತ್ತು. 

ಆದರೆ ಈ ಕುರಿತು ಬಚ್ಚನ್‌ ಕುಟುಂಬದವರಾಗಲಿ, ಐಶ್ವರ್ಯ ಮತ್ತು ಅಭಿಷೇಕ್‌ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

ವಿಚ್ಛೇದನ ವದಂತಿಗಳ ಮಧ್ಯೆ, ಐಶ್ವರ್ಯಾ ಕೆಲವು ದಿನಗಳ ಹಿಂದೆ ಇಡೀ ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ಅಗಸ್ತ್ಯ ನಂದಾ ಅವರ ದಿ ಆರ್ಚೀಸ್ ಚಿತ್ರದ ಪ್ರದರ್ಶನದ ವೇಳೆ ಇಡೀ ಬಚ್ಚನ್ ಕುಟುಂಬವು ಹಾಜರಿತ್ತು. ಈ ವೇಳೆ ಐಶ್ವರ್ಯಾ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link