ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿರುವ ಐಶ್ವರ್ಯ ರೈ ಫಾಲೋ ಮಾಡ್ತಿರೋದು ಮಾತ್ರ ಆ ಒಬ್ಬ ವ್ಯಕ್ತಿಯನ್ನ..! ಯಾರದು ಗೊತ್ತಾ..?
Aishwarya rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇಧನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರಿ ಚರ್ಚೆಯನ್ನು ಹುಟ್ಟಿಹಾಕಿದೆ. ಇದರ ನಡುವೆ ಈ ಜೋಡಿಯ ಒಂದೊಂದು ಪುಟ್ಟ ನಡೆಯೂ ಕೂಡ ಈ ವಿಷಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಲೇ ಬರುತ್ತಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳ ವಿಚ್ಚೇಧನ ವದಂತಿಗಳು ಹರಿದಾಡಲು ಆರಂಭಿಸಿದ ಒಡನೆ ಅಭಿಮಾನಿಗಳು ಮೊದಲು ಚೆಕ್ ಮಾಡೋದು ಅವರ ಇನ್ಸ್ಟಾ ಫಾಲೋವರ್ಸ್ ಲಿಸ್ಟ್‌ಅನ್ನ, ಇದೀಗ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿರುವ ಐಶ್ವರ್ಯ ರೈ ಆ ಒಬ್ಬ ವ್ಯಕ್ತಿಯನ್ನು ಮಾತ್ರ ಫಾಲೋ ಮಾಡ್ತಿರುವುದು ಇದೀಗ ವಿಚ್ಛೇಧನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದೆ.
ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧ ಹದಗೆಟ್ಟಿದೆ ಎನ್ನುವ ವಿಚಾರ ಎದ್ದು ಕಾಣುತ್ತಿದೆ. ಇಷ್ಟು ದಿನ ಈ ಜೋಡಿಯ ಸಂಬಂಧ ಹಾಳಾಗಲು ಕಾರನ ಅಭಿಷೇಕ್ ಬಚ್ಚನ್ ಅವರ ತಾಯಿ ಜಯಾ ಬಚ್ಚನ್ ಹಾಗೂ ಅವರ ಸಹೋದರಿ ಶ್ವೇತಾ ಬಚ್ಚನ್ ಎಂದು ಹೇಳಲಾಗುತ್ತಿತ್ತು.
ಆದರೆ, ಇದೀಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇಧನ ವದಂತಿ ಮತ್ತೊಂದು ರೂಪ ಪಡೆದುಕೊಂಡಿದೆ. ಹೌದು, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಇಬ್ಬರ ನಡುವಿನ ಮನಸ್ಥಾಪಕ್ಕೆ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಕಾರಣವಲ್ಲ. ಹೊರತಾಗಿ ಅಭಿಷೇಕ್ ಬಚ್ಚ್ನ್ ಅವರ ಅಫೇರ್ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಿಮ್ರಿತ್ ಕೌರ್ ಜೊತೆ ಅಭಿಷೇಕ್ ಬಚ್ಚನ್‌ಗೆ ಇರುವ ಅಫೇರ್ ಈ ಜೋಡಿಯ ವಿಚ್ಛೇಧನಕ್ಕೆ ಕಾರಣ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಮಧ್ಯೆ ಐಶ್ವರ್ಯ ರೈ ಅವರ ಫಾಲೋವರ್ಸ್ ಲಿಸ್ಟ್ ಅನ್ನು ನೆಟ್ಟಿಗರು ಜಾಲಾಡಲು ಆರಂಭಿಸಿದ್ದಾರೆ.
ಐಶ್ವರ್ಯ ರೈ ಜನಪ್ರಿಯ ನಟಿ, ಮಾಜಿ ವಿಶ್ವ ಸುಂದರಿ ಕೂಡ ಹೌದು. ನಟಿಗೆ ಅಗಾದವಾದ ಫ್ಯಾನ್ ಫಾಲೋವಿಂಗ್ ಇದೆ. ೧೪.೨ ಮಿಲಿಯನ್ ಜನ ನಟಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಆದರೆ, ನಟಿ ಮಾತ್ರ ಕೇವಲ ಆ ಒಬ್ಬ ವ್ಯಕ್ತಿಯನ್ನು ಫಾಲೋ ಮಾಡುತ್ತಿದ್ದಾರೆ.
ನಟಿ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿರುವ ಆ ಏಕೈಕ ವ್ಯಕ್ತಿ ಬೇರಾರೂ ಅಲ್ಲ, ಹೊರಾತಾಗಿ ಅಭಿಷೇಕ್ ಬಚ್ಚನ್. ನಟಿ ಐಶ್ವರ್ಯ ರೈ ಅವರ ಪತಿ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಈ ವಿಚಾರ ಇದೀಗ ಅಭಿಮನಿಗಳನ್ನು ಕನ್‌ಫ್ಯೂಸ್ ಮಾಡಿದೆ. ನೀವು ವಿಚ್ಚೇಧನ ಪಡೆದಿದ್ದೀರಾ ಅಥವಾ ಇಲ್ವಾ ಎನ್ನುವ ವಿವಾರವನ್ನು ಕನ್‌ಫರ್ಮ್ ಮಾಡಿ ಎನ್ನುತ್ತಿದ್ದಾರೆ.
ಇನ್ನೊಂದೆಡೆ, ನಿರ್ಮಿತ್ ಕೌರ್ ಹಾಗೂ ಅಭಿಷೇಕ್ ಬಚ್ಚನ್ ಅಫೇರ್ ಹೊಂದಿದ್ದಾರೆ ಎಂದು ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ನೆಟ್ಟಿಗರು ಕೌರ್ ಅನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದೀಗ ಅಭಿಷೇಕ್ ಹಾಗೂ ಐಶ್ವರ್ಯ ನಡುವೆ ಇಷ್ಟೆಲ್ಲಾ ವದಂತಿಗಳು ಹರಿದಾಡುತ್ತಿವೆಯಾದರೂ, ಇವುಗಳಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಎನ್ನುವ ವಿಚಾರ ಇನ್ನೂ ಹೊರಬಿದ್ದಿಲ್ಲ.