ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!

Tue, 08 Oct 2024-8:55 am,

ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ 2007ರಲ್ಲಿ ಬಾಲಿವುಡ್ "ಬಿಗ್ ಬಿ" ಅಮಿತಾಬ್ ಬಚ್ಚನ್ ಹಾಗೂ ಜಯಾಬಚ್ಚನ್ ಏಕೈಕ ಪುತ್ರ ಅಭಿಷೇಕ್ ಬಚ್ಚನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಐಶ್ವರ್ಯ ರೈ ಮದುವೆಯಾದಾಗಿನಿಂದಲೂ ಒಂದಿಲ್ಲೊಂದು ವದಂತಿಗಳು ಹರಡುತ್ತಲೇ ಇವೆ. ಅದರಲ್ಲಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಐಶ್ವರ್ಯ ರೈ ದುರಾದೃಷ್ಟವಂತರೂ ಎಂಬ ವದಂತಿಯೂ ಒಂದು. 

ಈ ತಾರಾ ಜೋಡಿ ತಮ್ಮ ವೈವಾಹಿಕ ಜೀವನಕ್ಕೆ ಕೊನೆ ಹಾಡುತ್ತಿದ್ದು, ಪರಸ್ಪರ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಈ ಕುರಿತಂತೆ ಐಶ್ವರ್ಯಾ ರೈ ಅಥವಾ ಬಚ್ಚನ್ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಈ ಮಧ್ಯೆ, ಅಮಿತಾಬ್ ಬಚ್ಚನ್ ಅವರ ಹೇಳಿಕೆಯೊಂದು ಈಗ ವೈರಲ್ ಆಗುತ್ತಿದೆ. 

ಐಶ್ವರ್ಯ ರೈ ಅವರ ಜಾತಕದಲ್ಲಿ ದೋಷವಿದೆ. ಹಾಗಾಗಿಯೇ ಅವರು ಮದುವೆಗೂ ಮುನ್ನ ಮರದೊಂದಿಗೆ ವಿವಾಹವಾಗಿದ್ದರು ಎಂಬ ಸುದ್ದಿಯ ಜೊತೆಗೆ ಬಚ್ಚನ್ ಕುಟುಂಬಕ್ಕೆ ಐಶ್ವರ್ಯ ರೈ ದುರದೃಷ್ಟವಂತರು, ಅವರ ಜಾತಕದ ದೋಷದಿಂದ ಮಾವನಿಗೆ ಮೃತ್ಯು ಕಂಟಕ ಎಂಬ ಸುದ್ದಿಯೂ ವೈರಲ್ ಆಗುತ್ತಿದೆ. 

ಐಶ್ವರ್ಯ ರೈ ಬಚ್ಚನ್ ಪರಿವಾರಕ್ಕೆ ಅಶುಭ ಎಂಬ ಮಾಧ್ಯಮ ವದಂತಿಗಳಿಗೆ "ಮಿಡ್ ಡೇ"ಗೆ ನೀಡಿರುವ ಸಂದರ್ಶನದಲ್ಲಿ ಅಮಿತಾಬ್ ಬಚ್ಚನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ಮೊದಲು ಐಶ್ವರ್ಯ ಬಚ್ಚನ್ ಕುಟುಂಬಕ್ಕೆ ಶುಭ ಎಂದೆಲ್ಲಾ ಸುದ್ದಿ ಬರೆದಿದ್ದರು. ಬಳಿಕ ಆಕೆ ಜಾತಕದಲ್ಲಿ ದೋಷವಿದೆ, ಆಕೆ ಮರವನ್ನು ಮದುವೆಯಾಗಿದ್ದರು, ಮಾವನಿಗೆ ಮೃತ್ಯು ಕಂಟಕ ಎಂದೆಲ್ಲಾ ಬರೆಯುತ್ತಿದ್ದಾರೆ. 

ಊಹಾಪೋಹಗಳಿಗೆ ವದಂತಿಗಳಿಗೆ ರೆಕ್ಕೆಕಟ್ಟಿ ಬರೆಯುವುದು. ಖ್ಯಾತ ತಾರೆಯರ ಭವಿಷ್ಯ, ಅವರ ದೈನಂದಿನ ಜೀವನದ ಬಗ್ಗೆ ಬರೆಯುವುದು ಮಾಧ್ಯಮದವರ ಕೆಲಸ ಹೌದು. ಆದರೆ, ಇದರಿಂದ ಅವರ ಮನೆಯವರ ಸ್ಥಿತಿ ಹೇಗಿರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ.. ಎಂದು  ಸೊಸೆ ಬಗ್ಗೆ ಅಪಪ್ರಚಾರದ ಸುದ್ದಿ ಬಗ್ಗೆ ನಯವಾಗಿಯೇ ಮಾಧ್ಯಮಗಳಿಗೆ  'ಬಿಗ್ ಬಿ' ಗುಡುಗಿದ್ದಾರೆ. 

ಊಹಾಪೋಹಗಳು ಏನೇ ಇರಲಿ ನಮ್ಮ ಮನೆಗೆ ಸೊಸೆಯಾಗಿ ಬಂದಿರುವ ಐಶ್ವರ್ಯ ರೈ ಬಚ್ಚನ್ ಕುಟುಂಬಕ್ಕೆ ದುರಾದೃಷ್ಟವಲ್ಲ, ಅದೃಷ್ಟ ಲಕ್ಷ್ಮಿ. ನನ್ನ ಮಗ-ಸೊಸೆ ಇಬ್ಬರ ದಾಂಪತ್ಯ ಅನ್ಯೋನ್ಯವಾಗಿದೆ. ಇಬ್ಬರು ಸುಖವಾಗಿದ್ದಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದರು. 

ವಾಸ್ತವವಾಗಿ, ಅಮಿತಾಬ್ ಬಚ್ಚನ್ ಅವರ ಈ ಸಂದರ್ಶನದ ವಿಡಿಯೋ ಕೆಲವು ವರ್ಷಗಳ ಹಿಂದಿನದ್ದಾಗಿದೆ. ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ವಿವಾಹವಾಗಿ ಇಷ್ಟು ವರ್ಷ ಕಳೆದರೂ ಕೂಡ ದುರಾದೃಷ್ಟವಶಾತ್ ಇಂತಹ ವದಂತಿಗಳು ಕಡಿಮೆಯೇ ಆಗದಿರುವುದು ವಿಪರ್ಯಾಸ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link